ಧಾವಂತದಲ್ಲಿದ್ದ ರಾಮನಗರ ಆಯುಕ್ತ: ಹಿಂದಿನಿಂದ ಬೈಕ್​​ಗೆ ಗುದ್ದಿದ ಆಯುಕ್ತ ನಾಗೇಶ್ ಕಾರು, 21 ವರ್ಷದ ಯುವತಿ ಸ್ಥಳದಲ್ಲೇ ಸಾವು

| Updated By: ಸಾಧು ಶ್ರೀನಾಥ್​

Updated on: Aug 09, 2023 | 9:16 AM

ಅಪಘಾತದ ನಂತರ ಸ್ಥಳಕ್ಕೆ ಬಂದ ರಾಮನಗರ ಪುರ ಪೊಲೀಸರು ಆಯುಕ್ತ ನಾಗೇಶ್ ಕಾರು ವಶಕ್ಕೆ ಪಡೆದಿದ್ದಾರೆ. ಆದರೆ ಅಪಘಾತ ಮಾಡಿದ ಆಯುಕ್ತರನ್ನು ಬಂಧಿಸಲಿಲ್ಲ ಅಂತ ಅಂಜುಮ್ ಪೋಷಕರು ಆರೋಪ ಮಾಡಿದ್ದಾರೆ. ಅದಾದ ಮೇಲೆ ನಾಗೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ‌ ಆರೋಪಿಯನ್ನು ಹುಡುಕುತ್ತಿದ್ದಾರೆ.

ಧಾವಂತದಲ್ಲಿದ್ದ ರಾಮನಗರ ಆಯುಕ್ತ: ಹಿಂದಿನಿಂದ ಬೈಕ್​​ಗೆ ಗುದ್ದಿದ ಆಯುಕ್ತ ನಾಗೇಶ್ ಕಾರು, 21 ವರ್ಷದ ಯುವತಿ ಸ್ಥಳದಲ್ಲೇ ಸಾವು
ಹಿಂದಿನಿಂದ ಬೈಕ್​​ಗೆ ಗುದ್ದಿದ ಆಯುಕ್ತ ನಾಗೇಶ್ ಕಾರು, ಯುವತಿ ಸ್ಥಳದಲ್ಲೇ ಸಾವು
Follow us on

‌ಅವಳಿಗೆ ಜೀವನದ‌ ಬೆಟ್ಟದಷ್ಟು ಆಸೆ‌ ಇತ್ತು, ತಂದೆ‌ ಇಲ್ದಿದ್ರೆ ಏನಾಯ್ತು‌, ನಾನಿದೀನಿ ಅಂತ ತಾಯಿಗೆ ಧೈರ್ಯ ಹೇಳಿ ಜೀವನ ನಡೆಸ್ತಿದ್ಳು, ಅಜ್ಜಿ ಮನೆಗೆ ಹೋಗಿ ಬರ್ತೀನಿ ಅಂತ ಹೊರಟವ್ಳು ದಾರಿ ಮಧ್ಯೆ ಅಪಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದಾಳೆ. ಈ ಫೋಟೋದಲ್ಲಿರುವ ಯುವತಿ ಹೆಸರು ಅಂಜುಮ್, ಇನ್ನೂ ಬಾಳಿ ಬದುಕಬೇಕಾದ ವಯಸ್ಸು, ‌ಸಾವಿರಾರು ಕನಸು ಕಟ್ಟಿಕೊಂಡು‌ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಲ್ಲದೇ ದಿಕ್ಕಿಲ್ಲದ‌ ತಾಯಿಗೆ ತಾನೇ ಮಗನ ಸ್ಥಾನದಲ್ಲಿ‌‌ ನಿಂತು ಮನೆ ನಡೆಸ್ತಿದ್ಳು, ಕನಕಪುರ ಮುಖ್ಯ ರಸ್ತೆಯ ಆವಲಹಳ್ಳಿಯಿಂದ ರಾಮನಗರದಲ್ಲಿರುವ ಅಜ್ಜಿ ಮನೆಗೆ ಅಂತ ಮಂಗಳವಾರ ಬೆಳಿಗ್ಗೆ ಹೊರಟಿದ್ದಳು. ನಗರ ಪ್ರವೇಶ ಆಗುತ್ತಿದ್ದಂತೆ ರಾಮನಗರ‌ ಪಟ್ಟಣ ನಗರ ಸಭೆ ಆಯುಕ್ತರ (Ramanagara commissioner) ಕಾರು ಬೈಕ್ (Bike) ಗೆ ಡಿಕ್ಕಿ ಹೊಡೆದು ಅಪಘಾತವಾಗಿ (Car Accident) ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ (Death). ವೇಗವಾಗಿ ಓವರ್ ಟೇಕ್ ಮಾಡಲು ಹೋದ‌ ಆಯುಕ್ತ ನಾಗೇಶ್ ಅವರ ಕಾರು ಅಂಜುಮ್ ಹಾಗೂ ಆತನ ಸಂಬಂಧಿ ಕೂತಿದ್ದ ಕಾರಿಗೆ ಗುದ್ದಿದ ಪರಿಣಾಮ ಅಂಜುಮ್ ತಲೆಗೆ ಬಲವಾದ ಪೆಟ್ಟಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ.

ಅಭಿವೃದ್ಧಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಆಯಾ ಜಿಲ್ಲೆಯ ಹೆಡ್ ಕ್ವಾರ್ಟರ್ಸ್ ಗಳಲ್ಲೇ ಇರಬೇಕು ಅಂತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸ್ಥಳೀಯ ಸಂಸದ ಡಿ ಕೆ ಸುರೇಶ್ ಸೂಚನೆ ಕೊಟ್ಟಿದ್ದರು ಎನ್ನಲಾಗಿದೆ. ಆದರೆ ನಗರಸಭೆ ಆಯುಕ್ತ ನಾಗೇಶ್ ಕ್ರಮ ಮೀರಿ ಬೆಂಗಳೂರು ನಗರದಲ್ಲೇ ವಾಸ್ತವ್ಯ ಹೂಡಿದ್ದು, ಬೆಳ್ಳಂ ಬೆಳಗ್ಗೆ ಶಾಸಕ ಇಕ್ಬಾಲ್ ಹುಸೇನ್ ಭೇಟಿಗೆ ಹೋಗಿದ್ದರು.

ಶಾಸಕರ ಭೇಟಿ ಆಗೋದಕ್ಕೆ ಬೆಂಗಳೂರಿನಿಂದ ರಾಮನಗರದ ಕಡೆ ವೇಗವಾಗಿ ಕಾರು ಓಡಿಸಿಕೊಂಡು ಬಂದ ನಾಗೇಶ್ ಬೈಕಿನಲ್ಲಿ ತೆರಳುತ್ತಿದ್ದ ಇಬ್ಬರನ್ನು ಓವರ್ ಟೇಕ್ ಮಾಡಲು ಹೋದಾಗ ಕಾರಿನ ಹಿಂಭಾಗ ತಾಕಿದೆ ಎನ್ನಲಾಗಿದೆ. ಇದ್ರಿಂದಾಗಿ ಬ್ಯಾಲೆನ್ಸ್ ಮಾಡಿಕೊಳ್ಳಲಾಗದ ಬೈಕ್ ಸವಾರ ರಸ್ತೆಯ ಪಕ್ಕಕ್ಕೆ ಬಿದ್ದು ಕಾಲಿಗೆ ಗಾಯ ಮಾಡಿಕೊಂಡರೆ, ತೆಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಅಂಜುಮ್ ಕಿವಿಯಲ್ಲಿ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಅಪಘಾತವಾದ ನಂತರ ಸ್ಥಳಕ್ಕೆ ಬಂದ ರಾಮನಗರ ಪುರ ಪೊಲೀಸರು ಆಯುಕ್ತ ನಾಗೇಶ್ ರ ಕಾರು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅಪಘಾತ ಮಾಡಿದ ಆಯುಕ್ತರನ್ನು ಬಂಧಿಸಲಿಲ್ಲ ಅಂತ ಅಂಜುಮ್ ಪೋಷಕರು ಆರೋಪ ಮಾಡಿದ್ದಾರೆ. ಪ್ರಥಮ ವರದಿಯಲ್ಲಿ ಅಪಘಾತ ಮಾಡಿದವರ ಹೆಸರನ್ನು ಅನ್​​ನೋನ್ ಎಂದು ಬರೆಯುವ ಮೂಲಕ ಆಯುಕ್ತ ನಾಗೇಶ್ ರನ್ನು ಉಳಿಸುವ ಕೆಲಸಕ್ಕೆ ಮುಂದಾಗಿದ್ರು ಅಂತ ಇನ್ನೊಂದು ಆರೋಪ ಕೇಳಿ ಬಂದಿದೆ. ಸದ್ಯ ನಾಗೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ‌ ಆರೋಪಿಯನ್ನು ಹುಡುಕುತ್ತಿದ್ದಾರೆ.

 ರಾಮನಗರ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:27 am, Wed, 9 August 23