ರಾಮನಗರದಲ್ಲಿ‌ ಹೆಚ್ಚಿದ ಕೊರೋನಾ ಆತಂಕ, ಮುಸ್ಲಿಂ ಸಭೆಗೆ ಆರೋಗ್ಯ ಇಲಾಖೆ ನೋಟಿಸ್..!

| Updated By: ಗಂಗಾಧರ​ ಬ. ಸಾಬೋಜಿ

Updated on: Dec 20, 2023 | 5:26 PM

ಜಿಲ್ಲೆಯಲ್ಲಿ ಕೊರೋನಾ ಆತಂಕ ಹೆಚ್ಚಾಗಿದೆ. ರಾಮನಗರ ತಾಲೂಕಿನ ಬಿಡದಿ ಮೂಲದ‌ ವ್ಯಕ್ತಿಗೆ ಕೊರೋನಾ ದೃಢ ಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆ ಆಗಿದೆ. ಸೋಂಕು ದೃಢ ಹಿನ್ನೆಲೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಮುಸ್ಲಿಂ ಸಭೆಗೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ.

ರಾಮನಗರದಲ್ಲಿ‌ ಹೆಚ್ಚಿದ ಕೊರೋನಾ ಆತಂಕ, ಮುಸ್ಲಿಂ ಸಭೆಗೆ ಆರೋಗ್ಯ ಇಲಾಖೆ ನೋಟಿಸ್..!
ಮುಸ್ಲಿಂ ಸಭೆ
Follow us on

ರಾಮನಗರ, ಡಿಸೆಂಬರ್​​ 20: ಜಿಲ್ಲೆಯಲ್ಲಿ ಮೂವರಿಗೆ ಕೊರೋನಾ ಸೋಂಕು (corona virus) ದೃಢ ಹಿನ್ನೆಲೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಮುಸ್ಲಿಂ ಸಭೆಗೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಇಂದು ರಾತ್ರಿ 8 ಗಂಟೆಗೆ ಜಮಾತ್ ಕಾರ್ಯಕ್ರಮ ಆರಂಭವಾಗಲಿದ್ದು, ಸಭೆಯಲ್ಲಿ ಮುಸ್ಲಿಂ ಸಮುದಾಯದ 2,000ಕ್ಕೂ ಹೆಚ್ಚು ಜನ ಭಾಗಿಯಾಗಲಿದ್ದಾರೆ. ಹಾಗಾಗಿ ದೈಹಿಕ ಅಂತರ ಕಾಯ್ದುಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಕೊರೋನಾ ಆತಂಕ ಹೆಚ್ಚಾಗಿದೆ. ರಾಮನಗರ ತಾಲೂಕಿನ ಬಿಡದಿ ಮೂಲದ‌ ವ್ಯಕ್ತಿಗೆ ಕೊರೊನಾ ದೃಢ ಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆ ಆಗಿದೆ.

ತುಮಕೂರು ಜಿಲ್ಲೆಯಲ್ಲಿ ಮೊದಲ ಕೊವಿಡ್​ ಪ್ರಕರಣ ಪತ್ತೆ

ತುಮಕೂರು ಜಿಲ್ಲೆಯ ಮಧುಗಿರಿ ಮೂಲದ ವ್ಯಕ್ತಿಗೆ ಕೊರೋನಾ ಪಾಸಿಟಿವ್​​ ಬಂದಿದೆ. ಹೃದ್ರೋಗ ಸಂಬಂಧ ಓರ್ವ ವ್ಯಕ್ತಿ ಜಯದೇವ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಟೆಸ್ಟ್ ಮಾಡಿದಾಗ ಕೊರೋನಾ ಸೋಂಕು ದೃಢವಾಗಿದೆ. ಜಯದೇವ ಆಸ್ಪತ್ರೆಯಲ್ಲೇ ಪ್ರತ್ಯೇಕವಾಗಿ ಸೋಂಕಿತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ರಾಮನಗರ ಜಿಲ್ಲೆಯಲ್ಲಿ 2ನೇ ಕೋವಿಡ್ ​ಪ್ರಕರಣ ಪತ್ತೆ: ಕಾರವಾರ, ಚಿಕ್ಕಮಗಳೂರಿನಲ್ಲೂ ಕೊರೊನಾ

ಸೋಂಕಿತ ಕುಟುಂಬಸ್ಥರಿಗೆ ಸಿಬ್ಬಂದಿ ಕೊವಿಡ್​ ಟೆಸ್ಟ್​​ ಮಾಡಿಸಿದ್ದಾರೆ. ಸೋಂಕಿತ ಸಂಪರ್ಕಕ್ಕೆ ಬಂದವರ ಮೇಲೆ ನಿಗಾವಹಿಸಲಾಗಿದೆ ಎಂದು ತುಮಕೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಶುಕವನ, ಬೋನ್ಸಾಯ್ ಉದ್ಯಾನವನ ಬಂದ್

ಮೈಸೂರು ಜಿಲ್ಲೆಯಲ್ಲಿ ಕೊರೋನಾ ಆತಂಕ ಹಿನ್ನೆಲೆ ಡಿಸೆಂಬರ್​ 22ರಿಂದ ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಶುಕವನ ಹಾಗೂ ಬೋನ್ಸಾಯ್ ಉದ್ಯಾನವನ ಬಂದ್ ಮಾಡಲಾಗಿದೆ. ಈ ಕುರಿತಾಗಿ ಆಶ್ರಮ ಮಾಧ್ಯಮ ಪ್ರಕಟಣೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊವಿಡ್ ಪ್ರಕರಣ ಪತ್ತೆಯಾಗಿಲ್ಲ: ಡಾ.H.R.ತಿಮ್ಮಯ್ಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊವಿಡ್ ಪ್ರಕರಣ ಪತ್ತೆಯಾಗಿಲ್ಲ. ಕೇರಳದ ಕಾಸರಗೋಡಿನಲ್ಲಿ ನಿತ್ಯ ಒಂದೆರಡು ಪ್ರಕರಣ ಪತ್ತೆಯಾಗುತ್ತಿದೆ ಎಂದು ಮಂಗಳೂರಿನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.H.R.ತಿಮ್ಮಯ್ಯ ಹೇಳಿದ್ದಾರೆ. ಸ್ವರ್ಗ, ಸಾರಡ್ಕ, ಜಲ್ಸೂರು, ತಲಪಾಡಿ, ಈಶ್ವರಮಂಗಲದಲ್ಲಿ ಅಲರ್ಟ್​ಗೆ ಸೂಚಿಸಲಾಗಿದೆ.

ಇದನ್ನೂ ಓದಿ: ದೇಶದಲ್ಲಿ JN1 ಹೊಸ ವೈರಸ್ ಆತಂಕದ ನಡುವೆ ಕೋವಿಡ್​ಗೆ ಬೆಂಗಳೂರಿನಲ್ಲಿ ಮೊದಲ ಬಲಿ

ಕೇರಳದ ಗಡಿ ಭಾಗವಾದ ಈ ಐದು ಕಡೆ ಯಾವುದೇ ನಿರ್ಬಂಧ ಇಲ್ಲ. ಕಡ್ಡಾಯವಾಗಿ ತಪಾಸಣೆ ಮಾಡಲು ಯಾವುದೇ ಸೂಚನೆ ಬಂದಿಲ್ಲ. ಗಡಿಭಾಗ ಕಾರಣ ಕೇರಳದಿಂದ ಹಲವರು ಮಂಗಳೂರಿಗೆ ಬರುತ್ತಾರೆ. ಹೀಗಾಗಿ ನಮಗೆ ಸರ್ಕಾರದಿಂದ ಕೆಲ ಮಾರ್ಗಸೂಚಿ ಬಂದಿದೆ ಎಂದು ತಿಳಿಸಿದ್ದಾರೆ.

ಸದ್ಯ ಜಿಲ್ಲೆಯ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ಕೊಡಲಾಗಿದೆ. ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್ ಸಿದ್ಧವಾಗಿಡಲು. 10,986 ಬೆಡ್​ಗಳು ಇವೆ, 1,376 ಆಕ್ಸಿಜನ್ ಸಪೋರ್ಟ್ ಬೆಡ್​ಗಳಿವೆ. ಶಬರಿಮಲೆಗೆ ಹೋಗಿ ಬಂದವರಿಗೆ ಲಕ್ಷಣ ಇದ್ದರೆ ಟೆಸ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.