ಬಟ್ಟೆ ಒಗೆಯುವ ವಿಚಾರದಲ್ಲಿ ತಾಯಿ ಜತೆ ಜಗಳವಾಡಿ, ತನ್ನದೇ ಕಂದನನ್ನು ಕಣ್ವ ಹೊಳೆಗೆ ಬಿಸಾಡಿ ಸಾಯಿಸಿದ ತಾಯಿ

ಮೂರು ವರ್ಷಗಳ‌ ಹಿಂದೆ ದೊಡ್ಡ ಆಲಹಳ್ಳಿ ಯುವಕನ‌ ಜೊತೆ ಭಾಗ್ಯಳ ಮದುವೆ ಮಾಡಿಕೊಡಲಾಗಿತ್ತು. ಗಂಡನನ್ನು ಬಿಟ್ಟು ಭಾಗ್ಯ ತವರಿಗೆ ಬಂದು ನೆಲೆಸಿದ್ದಳು. ಅದೇ ಊರಿನ‌ ಶ್ರೀನಿವಾಸನ ಜೊತೆ ಸಂಬಂಧ ಆಗಿತ್ತು. ಮೃತಪಟ್ಟಿರುವ ಮಗು ದೇವರಾಜ್, ಭಾಗ್ಯ ಮತ್ತು ಶ್ರೀನಿವಾಸ್ ಮಗ.

ಬಟ್ಟೆ ಒಗೆಯುವ ವಿಚಾರದಲ್ಲಿ ತಾಯಿ ಜತೆ ಜಗಳವಾಡಿ, ತನ್ನದೇ ಕಂದನನ್ನು ಕಣ್ವ ಹೊಳೆಗೆ ಬಿಸಾಡಿ ಸಾಯಿಸಿದ ತಾಯಿ
ಬಟ್ಟೆ ಒಗೆಯುವ ವಿಚಾರದಲ್ಲಿ ಮಗುವಿನ ಜೊತೆ ಜಗಳವಾಡಿ, ಸಾಯಿಸಿದ ತಾಯಿ
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಸಾಧು ಶ್ರೀನಾಥ್​

Updated on:Dec 20, 2023 | 11:32 AM

ರಾಮನಗರ, ಡಿಸೆಂಬರ್​ 20: ಬಟ್ಟೆ ತೊಳೆಯುವ ವಿಚಾರದಲ್ಲಿ ತಾನೇ ಎಲ್ಲ ಕೆಲಸ ಮಾಡಬೇಕಾ ಎಂದು ಹೆತ್ತಮ್ಮನ ಜೊತೆ ಗಲಾಟೆ ಮಾಡಿಕೊಂಡ ಯುವ ತಾಯಿಯೊಬ್ಬಳು, ತನ್ನ ಮಗುವನ್ನೇ  ಜಲಾಶಯಕ್ಕೆ ಹಾಕಿ, ಕೊಂದಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ (Channapatna, Ramanagara) ಕಾಲಿಕೆರೆ ಗ್ರಾಮದಲ್ಲಿ ನಡೆದಿದೆ. ಒಂದು ವರ್ಷ ಮೂರು ತಿಂಗಳ ಮಗು (Toddler) ದೇವರಾಜ್ ಸಾವಿಗೀಡಾಗಿರುವ ನತದೃಷ್ಟ ಮಗು. ತನ್ನ ಮಗುವನ್ನೇ ಕೊಂದ ತಾಯಿ ಭಾಗ್ಯ (21)‌ಳನ್ನು ಪೊಲೀಸರು​ ವಶಕ್ಕೆ ಪಡೆದಿದ್ದಾರೆ.

ಬಟ್ಟೆ ತೊಳೆಯುವ ವಿಚಾರದಲ್ಲಿ ತಾಯಿಯ ಜೊತೆ ಜಗಳವಾಡಿದ್ದಳಂತೆ ಆರೋಪಿ ತಾಯಿ. ಆ ವೇಳೆ ಸಿಟ್ಟಿನಿಂದ ತಾಯಿ ಭಾಗ್ಯ ತನ್ನ ಆ ಅಬೋಧ ಕಂದಮ್ಮನನ್ನು ಕಣ್ವ ಹೊಳೆಗೆ (Kanva Reservoir) ಬಿಸಾಡಿದ್ದಾಳೆ. ಬಳಿಕ ಕಾಲಿಕೆರೆ ದೇವಸ್ಥಾನದ ಬಳಿ ಬಂದು ಭಾಗ್ಯ ರೋದಿಸಿದ್ದಾಳೆ. ತನ್ನ ಮಗುವನ್ನು ಹೊಳೆಗೆ ಹಾಕಿರುವ ಬಗ್ಗೆ ಸ್ವತಃ ಭಾಗ್ಯಳೇ ಅಳುತ್ತಾ ಹೇಳಿಕೊಂಡಳಂತೆ.

ಸ್ಥಳೀಯರು ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ನಿನ್ನೆ ಮಂಗಳವಾರ ರಾತ್ರಿ 7.30‌ರ‌ ಸುಮಾರಿಗೆ ಕಂದನನ್ನು ಬಿಸಾಡಿದ್ದಾಗಿ ಭಾಗ್ಯ ಹೇಳಿಕೊಂಡಿದ್ದಾಳೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ತಾಯಿ ಭಾಗ್ಯಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಚಿತ್ರ ಸ್ವಭಾವದ ಯುವ ಹೆಣ್ಣುಮಗಳು ಭಾಗ್ಯಳ ಜೀವನ ಹೀಗಿತ್ತು…

ಮೂರು ವರ್ಷಗಳ‌ ಹಿಂದೆ ದೊಡ್ಡ ಆಲಹಳ್ಳಿ ಯುವಕನ‌ ಜೊತೆ ಭಾಗ್ಯಳ ಮದುವೆ ಮಾಡಿಕೊಡಲಾಗಿತ್ತು. ಗಂಡನನ್ನು ಬಿಟ್ಟು ಭಾಗ್ಯ ತವರಿಗೆ ಬಂದು ನೆಲೆಸಿದ್ದಳು. ತಾಯಿ ಊರು ಕಾಲಿಕೆರೆಯಲ್ಲಿಯೇ ಭಾಗ್ಯ ವಾಸಿಸುತ್ತಿದ್ದಳು. ಅದೇ ಊರಿನ‌ ಶ್ರೀನಿವಾಸನ ಜೊತೆ ಸಂಬಂಧ ಆಗಿತ್ತು. ಮೃತಪಟ್ಟಿರುವ ಮಗು ದೇವರಾಜ್, ಭಾಗ್ಯ ಮತ್ತು ಶ್ರೀನಿವಾಸ್ ಮಗ.

ಇದನ್ನೂ ಓದಿ: ಕೊಳ್ಳೆಗಾಲ ಒಂಟಿ ಮಹಿಳೆ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್, ಕೊಲೆ ಹಿಂದಿನ ದಿನ ಮಗಳನ್ನು ಬಾಲಮಂದಿರಕ್ಕೆ ಸೇರಿಸಿದ್ದ ತಾಯಿ, ಯಾಕೆ?

ಭಾಗ್ಯ ತನ್ನ ತಾಯಿಯ ಜೊತೆ ಆಗಾಗ ಜಗಳವಾಡುತ್ತಿದ್ದಳಂತೆ. ಶ್ರೀನಿವಾಸನ‌ ಜೊತೆ ಅನೈತಿಕ‌ ಸಂಬಂಧ ಇಟ್ಟುಕೊಂಡಿದ್ದ‌ ಭಾಗ್ಯ, ಆತನ ಜೊತೆಯೂ ಸತತವಾಗಿ ಜಗಳವಾಡುತ್ತಿದ್ದ‌ಳಂತೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:16 am, Wed, 20 December 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್