ಅಪ್ಪ ಅಮ್ಮನಿಗೆ ಏನೂ ಗೊತ್ತೇ ಇಲ್ಲ, ಏನು ಅನ್ಯಾಯ ಮಾಡಿದ್ದಾರೆ ಅಂತಾ ನಾನು ಬಿಚ್ಚಿಡ್ತೀನಿ: ಸಿಡಿ ಲೇಡಿಯಿಂದ ಮತ್ತೊಂದು ವಿಡಿಯೋ ಬಾಂಬ್

ನನಗೆ ಏನೇನು ಅನ್ಯಾಯ ಮಾಡಿದ್ದಾರೆ ಅಂತಾ ಬಿಚ್ಚಿಡುತ್ತೇನೆ. ಜಡ್ಜ್ ಹತ್ತಿರ ಹೇಳಿಕೆ ಕೊಡುವುದಕ್ಕೆ ಅವಕಾಶ ಕೊಡಿ ಎಂದು ಸಿಡಿಯಲ್ಲಿದ್ದ ಯುವತಿ ಕೇಳಿಕೊಂಡಿದ್ದಾರೆ.

ಅಪ್ಪ ಅಮ್ಮನಿಗೆ ಏನೂ ಗೊತ್ತೇ ಇಲ್ಲ, ಏನು ಅನ್ಯಾಯ ಮಾಡಿದ್ದಾರೆ ಅಂತಾ ನಾನು ಬಿಚ್ಚಿಡ್ತೀನಿ: ಸಿಡಿ ಲೇಡಿಯಿಂದ ಮತ್ತೊಂದು ವಿಡಿಯೋ ಬಾಂಬ್
ಸಂತ್ರಸ್ತ ಯುವತಿ
Edited By:

Updated on: Apr 05, 2022 | 1:09 PM

ಬೆಂಗಳೂರು: ಮುಖ್ಯಮಂತ್ರಿ, ಗೃಹ ಸಚಿವರು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್​ಗೆ ಸಿಡಿ ಲೇಡಿ ಮನವಿ ಮಾಡಿರುವ ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ. ನಾನು ಹೊರಗಡೆ ಬಂದು ಹೇಳಿಕೆ ನೀಡಲು ಬೆಂಬಲಿಸಿ ಎಂದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡುತ್ತೇನೆ. ಮುಂದೆ ಬಂದು ನಾನು ಹೇಳಿಕೆ ಕೊಡಲು ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ.

ನನಗೆ ಏನೇನು ಅನ್ಯಾಯ ಮಾಡಿದ್ದಾರೆ ಅಂತಾ ಬಿಚ್ಚಿಡುತ್ತೇನೆ. ಜಡ್ಜ್ ಹತ್ತಿರ ಹೇಳಿಕೆ ಕೊಡುವುದಕ್ಕೆ ಅವಕಾಶ ಕೊಡಿ ಎಂದು ಸಿಡಿಯಲ್ಲಿದ್ದ ಯುವತಿ ಕೇಳಿಕೊಂಡಿದ್ದಾರೆ. ಇಂದು ನಡೆದ ಬೆಳವಣಿಗೆ ನೋಡಿದರೆ ನನಗೆ ಭಯ ಆಗ್ತಿದೆ. ನಮ್ಮ ಅಪ್ಪ ಅಮ್ಮನಿಗೆ ಏನು ಗೊತ್ತೇ ಇಲ್ಲ, ನಮ್ಮ ಅಪ್ಪ ಅಮ್ಮನ ಬಳಿ ಏನೇನೋ ಹೇಳಿಸುತ್ತಿದ್ದಾರೆ. ಪ್ರಭಾವ ಬೀರಿ ಏನೇನೋ ಹೇಳಿಸುತ್ತಿದ್ದಾರೆ ಎಂದು ಯುವತಿ ವಿಡಿಯೋದಲ್ಲಿ ಹೇಳಿದ್ದಾಳೆ.

ನಮ್ಮ ಅಪ್ಪ ಅಮ್ಮನಿಗೆ ಏನೂ ಗೊತ್ತೇ ಇಲ್ಲ ಎಂದು ಹೇಳಿರುವ ಐದನೇ ವಿಡಿಯೋವನ್ನು ಸಿಡಿ ಲೇಡಿ ಬಿಡುಗಡೆಗೊಳಿಸಿದ್ದಾರೆ. ನನಗೆ ಎಲ್ಲೋ ಒಂದು ಕಡೆ ಭಯ ಆಗ್ತಾ ಇದೆ. ಅಪ್ಪ, ಅಮ್ಮನ ಮೇಲೆ ಪ್ರಭಾವ ಬೀರುತ್ತಿದ್ದಾರೆ. ನನ್ನ ಅಪ್ಪ, ಅಮ್ಮನಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಹೊರಗೆ ಬಂದು ಹೇಳಿಕೆ ನೀಡಲು ಭಯ ಆಗ್ತಿದೆ. ನ್ಯಾಯ ಸಿಗಬೇಕಾಗಿರುವುದು ನನಗೆ ಎಂದು ಯವತಿ ಮಾತನಾಡಿರುವ ವಿಡಿಯೋ ಹೊರಬಿಟ್ಟಿದ್ದಾರೆ.

ಇದಕ್ಕೂ ಮೊದಲು ಸಿಡಿಯಲ್ಲಿದ್ದ ಯುವತಿಯ ಆಡಿಯೋ ಕೂಡ ಬಿಡುಗಡೆಯಾಗಿದೆ. ಅದರಲ್ಲಿ, ನನಗೆ ಡಿಕೆಶಿ ಹೇಳಿದಂತೆ ಮಾಡು ಎಂದು ಹೇಳಿದ್ದಾರೆ. ನಾನೀಗ ಬೆಂಗಳೂರಿನಲ್ಲಿ ಇರಲ್ಲ ಗೋವಾಗೆ ಹೋಗುತ್ತಿದ್ದೇನೆ. ನಾನು ಆಕಾಶ್​ನೊಂದಿಗೆ ಗೋವಾಗೆ ತೆರಳುತ್ತಿದ್ದೇನೆ ಎಂದು ಸಿಡಿ ಲೇಡಿ ಹೇಳಿದ್ದಾಳೆ. ಕೂಡಲೇ ಸಿಮ್​ ತೆಗೆದುಹಾಕು ಎಂದು ಯುವತಿ ತಮ್ಮ ಹೇಳಿದ್ದಾನೆ. ಏನು ಆಗಲ್ಲ ಹೆದರಬೇಡ ನನ್ನನ್ನು ನಂಬು. ಡಿ.ಕೆ. ಶಿವಕುಮಾರ್ ಕಡೆಯವರು ಬಂದು ನಮಗೆ ಹಣ ನೀಡಿದ್ದಾರೆ. ನನ್ನ ಮೊಬೈಲ್​ ಹಾಗೂ ಸಿಮ್​ ಕಸಿದುಕೊಂಡಿದ್ದಾರೆ. ನನಗೆ ಬೇಸಿಕ್​ ಫೋನ್​ ಕೊಟ್ಟಿದ್ದಾರೆ ಎಂದು ಯುವತಿ ಹೇಳಿದ್ದಾಳೆ.

ಇದನ್ನೂ ಓದಿ: ಡಿ.ಕೆ. ಶಿವಕುಮಾರ್ ಹೆಸರು ಹೇಳಿದ ಸಿಡಿ ಲೇಡಿ ಮಾತಿನ ಇನ್ನೊಂದು ಆಡಿಯೋ ಸ್ಫೋಟ!

ನಮ್ಮ ಅಕ್ಕನನ್ನು ಡಿ.ಕೆ.ಶಿವಕುಮಾರ್ ಒತ್ತೆಯಾಳಾಗಿಸಿ ಕೊಂಡಿದ್ದಾರೆ; ಆಕೆಯನ್ನು ವಾಪಸ್​ ತಂದುಕೊಟ್ಟುಬಿಡಿ -ಸಿಡಿ ಲೇಡಿ ಸಹೋದರ

YouTube video player

YouTube video player

Published On - 8:37 pm, Sat, 27 March 21

Loading...
Unable to load recommendations.
Follow Us