ಡಿ.ಕೆ. ಶಿವಕುಮಾರ್ ಹೆಸರು ಹೇಳಿದ ಸಿಡಿ ಲೇಡಿ ಮಾತಿನ ಇನ್ನೊಂದು ಆಡಿಯೋ ಸ್ಫೋಟ!

ನನಗೆ ಡಿಕೆಶಿ ಹೇಳಿದಂತೆ ಮಾಡು ಎಂದು ಹೇಳಿದ್ದಾರೆ. ನಾನೀಗ ಬೆಂಗಳೂರಿನಲ್ಲಿ ಇರಲ್ಲ ಗೋವಾಗೆ ಹೋಗುತ್ತಿದ್ದೇನೆ. ನಾನು ಆಕಾಶ್​ನೊಂದಿಗೆ ಗೋವಾಗೆ ತೆರಳುತ್ತಿದ್ದೇನೆ ಎಂದು ಸಿಡಿ ಲೇಡಿ ಹೇಳಿದ್ದಾಳೆ.

ಡಿ.ಕೆ. ಶಿವಕುಮಾರ್ ಹೆಸರು ಹೇಳಿದ ಸಿಡಿ ಲೇಡಿ ಮಾತಿನ ಇನ್ನೊಂದು ಆಡಿಯೋ ಸ್ಫೋಟ!
ಆಡಿಯೋ ಹೇಳಿಕೆ ಬಿಡುಗಡೆ ಮಾಡಿದ ಸಂತ್ರಸ್ತೆ
Follow us
TV9 Web
| Updated By: ganapathi bhat

Updated on:Apr 05, 2022 | 1:10 PM

ಬೆಂಗಳೂರು: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಮಾರ್ಚ್ 27) ಸ್ಫೋಟಕ ಮಾಹಿತಿಗಳು ಒಂದರ ಹಿಂದೆ ಮತ್ತೊಂದರಂತೆ ಬರುತ್ತಿದೆ. ಇದೀಗ ಸಿಡಿ ಲೇಡಿಯ ಮತ್ತೊಂದು ಆಡಿಯೋ ವೈರಲ್ ಆಗಿದೆ. ಸಿಡಿ ಲೇಡಿ ಮಾತನಾಡಿರುವ ಎರಡನೇ ಆಡಿಯೋ ಇದಾಗಿದೆ. ಸಿಡಿ ಲೇಡಿಯ ಮತ್ತೊಂದು ಆಡಿಯೋ ಬಿಡುಗಡೆ ಆಗಿದೆ. ತಮ್ಮನೊಂದಿಗೆ ಮಾತನಾಡಿರುವ ಯುವತಿ ಆಡಿಯೋ ವೈರಲ್ ಆಗುತ್ತಿದೆ. 1 ನಿಮಿಷ 51 ಸೆಂಕೆಂಡ್ ಇರುವ ಆಡಿಯೋ ವೈರಲ್ ಆಗುತ್ತಿದೆ.

ನನಗೆ ಡಿಕೆಶಿ ಹೇಳಿದಂತೆ ಮಾಡು ಎಂದು ಹೇಳಿದ್ದಾರೆ. ನಾನೀಗ ಬೆಂಗಳೂರಿನಲ್ಲಿ ಇರಲ್ಲ ಗೋವಾಗೆ ಹೋಗುತ್ತಿದ್ದೇನೆ. ನಾನು ಆಕಾಶ್​ನೊಂದಿಗೆ ಗೋವಾಗೆ ತೆರಳುತ್ತಿದ್ದೇನೆ ಎಂದು ಸಿಡಿ ಲೇಡಿ ಹೇಳಿದ್ದಾಳೆ. ಕೂಡಲೇ ಸಿಮ್​ ತೆಗೆದುಹಾಕು ಎಂದು ಯುವತಿ ತಮ್ಮ ಹೇಳಿದ್ದಾನೆ. ಏನು ಆಗಲ್ಲ ಹೆದರಬೇಡ ನನ್ನನ್ನು ನಂಬು. ಡಿ.ಕೆ. ಶಿವಕುಮಾರ್ ಕಡೆಯವರು ಬಂದು ನಮಗೆ ಹಣ ನೀಡಿದ್ದಾರೆ. ನನ್ನ ಮೊಬೈಲ್​ ಹಾಗೂ ಸಿಮ್​ ಕಸಿದುಕೊಂಡಿದ್ದಾರೆ. ನನಗೆ ಬೇಸಿಕ್​ ಫೋನ್​ ಕೊಟ್ಟಿದ್ದಾರೆ ಎಂದು ಯುವತಿ ಹೇಳಿದ್ದಾಳೆ.

ನಾನು ಅವರು ಹೇಳಿದಂತೆ ಮಾಡಬೇಕು. ಅವರು ಕೈಬಿಡಲ್ಲ, ಕೈಬಿಡುವ ಹಾಗಿದ್ರೆ ಹಣ ಏಕೆ ಕೊಡ್ತಿದ್ರು ಎಂದು ಯುವತಿ ಪ್ರಶ್ನಿಸಿದ್ದಾಳೆ. ನನ್ನ ಬಳಿ ಫೋನ್​ ಇಲ್ಲ, ಆಕಾಶ್​ ಬಳಿ ಮೊಬೈಲ್​ ಇದೆ. ಆದರೆ ಆಕಾಶ್​ ಮೊಬೈಲ್​ ಟ್ರ್ಯಾಕ್​ ಮಾಡಲು ಆಗಲ್ಲ ಎಂದು ಹೇಳಿದ್ದಾಳೆ. ಇದಾದ ಬಳಿಕ ಸಿಡಿಯಲ್ಲಿದ್ದ ಯುವತಿ ಮತ್ತೊಂದು ವಿಡಿಯೋ ಕೂಡ ಹೊರಬಂದಿದೆ.

ನನಗೆ ಏನೇನು ಅನ್ಯಾಯ ಮಾಡಿದ್ದಾರೆ ಅಂತಾ ಬಿಚ್ಚಿಡುತ್ತೇನೆ. ಜಡ್ಜ್ ಹತ್ತಿರ ಹೇಳಿಕೆ ಕೊಡುವುದಕ್ಕೆ ಅವಕಾಶ ಕೊಡಿ ಎಂದು ಸಿಡಿಯಲ್ಲಿದ್ದ ಯುವತಿ ಕೇಳಿಕೊಂಡಿದ್ದಾರೆ. ಇಂದು ನಡೆದ ಬೆಳವಣಿಗೆ ನೋಡಿದರೆ ನನಗೆ ಭಯ ಆಗ್ತಿದೆ. ನಮ್ಮ ಅಪ್ಪ ಅಮ್ಮನಿಗೆ ಏನು ಗೊತ್ತೇ ಇಲ್ಲ, ನಮ್ಮ ಅಪ್ಪ ಅಮ್ಮನ ಬಳಿ ಏನೇನೋ ಹೇಳಿಸುತ್ತಿದ್ದಾರೆ. ಪ್ರಭಾವ ಬೀರಿ ಏನೇನೋ ಹೇಳಿಸುತ್ತಿದ್ದಾರೆ ಎಂದು ಯುವತಿ ವಿಡಿಯೋದಲ್ಲಿ ಹೇಳಿದ್ದಾಳೆ.

ಇದನ್ನೂ ಓದಿ:

ಅಪ್ಪ ಅಮ್ಮನಿಗೆ ಏನೂ ಗೊತ್ತೇ ಇಲ್ಲ, ಏನು ಅನ್ಯಾಯ ಮಾಡಿದ್ದಾರೆ ಅಂತಾ ನಾನು ಬಿಚ್ಚಿಡ್ತೀನಿ: ಸಿಡಿ ಲೇಡಿ ಮತ್ತೊಂದು ವಿಡಿಯೋ ಬಾಂಬ್

ನಮ್ಮ ಅಕ್ಕನನ್ನು ಡಿ.ಕೆ.ಶಿವಕುಮಾರ್ ಒತ್ತೆಯಾಳಾಗಿಸಿ ಕೊಂಡಿದ್ದಾರೆ; ಆಕೆಯನ್ನು ವಾಪಸ್​ ತಂದುಕೊಟ್ಟುಬಿಡಿ -ಸಿಡಿ ಲೇಡಿ ಸಹೋದರ

Published On - 8:26 pm, Sat, 27 March 21