ರಮೇಶ್ ಸುದ್ದಿಗೋಷ್ಠಿ ಬೆನ್ನಲ್ಲೇ ಬಂತು ಫೋನ್​ ಕರೆ; ಕಾಲ್​ ಬಳಿಕ ಕಾರ್ಯಕ್ರಮದಿಂದ ಏಕಾಏಕಿ ತೆರಳಿದ ಡಿಕೆಶಿ

ಡಿಎಂಕೆ ಅಭ್ಯರ್ಥಿ ಮುರುಗನ್ ಪರ ಮತ ಪ್ರಚಾರ ಮಾಡುತ್ತಿರುವ ಶಿವಕುಮಾರ್​ ಇಂದು ಕಾರ್ಯಕ್ರಮದಿಂದ ಏಕಾಏಕಿ ತೆರಳಿದರು. ತಮಿಳುನಾಡಿನ ಸೂಳಗಿರಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಿಂದ ಡಿ.ಕೆ.ಶಿವಕುಮಾರ್​ ಏಕಾಏಕಿ ಹೊರಟುಹೋದರು.

ರಮೇಶ್ ಸುದ್ದಿಗೋಷ್ಠಿ ಬೆನ್ನಲ್ಲೇ ಬಂತು ಫೋನ್​ ಕರೆ; ಕಾಲ್​ ಬಳಿಕ ಕಾರ್ಯಕ್ರಮದಿಂದ ಏಕಾಏಕಿ ತೆರಳಿದ ಡಿಕೆಶಿ
ಫೋನ್​ ಕಾಲ್​ ಬಳಿಕ ಕಾರ್ಯಕ್ರಮದಿಂದ ತೆರಳಿದ ಡಿಕೆಶಿ
Follow us
KUSHAL V
|

Updated on:Mar 27, 2021 | 9:29 PM

ಚೆನ್ನೈ: ಏ.6ರಂದು ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಕ್ಷೇತ್ರಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಪ್ರಚಾರ ನಡೆಸುತ್ತಿದ್ದಾರೆ. ಅಂತೆಯೇ, ಇಂದು ಸೂಳಗಿರಿಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪ್ರಚಾರ ನಡೆಸಿದ್ದಾರೆ. ಈ ನಡುವೆ, ರಮೇಶ್ ಜಾರಕಿಹೊಳಿಯ ಸ್ಫೋಟಕ ಸುದ್ದಿಗೋಷ್ಠಿಯ ಬೆನ್ನಲ್ಲೇ ಡಿಕೆಶಿಗೆ ಟೆನ್ಷನ್​ ಶುರುವಾದಂತೆ ಭಾಸವಾಗುತ್ತಿದೆ.

DK SHIVAKUMAR PROGRAMME 3

ಚುನಾವಣಾ ಪ್ರಚಾರದ ವೇಳೆಯೂ ಡಿಕೆಶಿ ತಮ್ಮ ಮೊಬೈಲ್‌ನಲ್ಲಿ ಬ್ಯುಸಿ

ಇದಕ್ಕೆ ಪುಷ್ಟಿ ನೀಡುವಂತೆ ಚುನಾವಣಾ ಪ್ರಚಾರದ ವೇಳೆಯೂ ಡಿಕೆಶಿ ತಮ್ಮ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದರು. ಡಿ.ಕೆ.ಶಿವಕುಮಾರ್ ಪದೇಪದೆ ತಮ್ಮ ಮೊಬೈಲ್ ನೋಡುತ್ತಿರುವುದು ಕಂಡುಬಂತು.

DK SHIVAKUMAR PROGRAMME 1

ಕಾರ್ಯಕ್ರಮದ ವೇಳೆ ಫೋನ್​ ಸಂಭಾಷಣೆಯಲ್ಲಿ ನಿರತರಾದ ಡಿಕೆಶಿ

ಕಾರ್ಯಕ್ರಮದಿಂದ ಏಕಾಏಕಿ ತೆರಳಿದ ಡಿ.ಕೆ.ಶಿವಕುಮಾರ್ ಇದಲ್ಲದೆ, ಡಿಎಂಕೆ ಅಭ್ಯರ್ಥಿ ಮುರುಗನ್ ಪರ ಮತ ಪ್ರಚಾರ ಮಾಡುತ್ತಿರುವ ಶಿವಕುಮಾರ್​ ಇಂದು ಕಾರ್ಯಕ್ರಮದಿಂದ ಏಕಾಏಕಿ ತೆರಳಿದರು. ತಮಿಳುನಾಡಿನ ಸೂಳಗಿರಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಿಂದ ಡಿ.ಕೆ.ಶಿವಕುಮಾರ್​ ಏಕಾಏಕಿ ಹೊರಟುಹೋದರು. ಮೊಬೈಲ್ ಕರೆಯೊಂದನ್ನು ಸ್ವೀಕರಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್​ ಬಳಿಕ ಇದಕ್ಕಿದ್ದಂತೆ ಕಾರ್ಯಕ್ರಮದ ವೇದಿಕೆಯಿಂದ ದಿಢೀರ್​ ನಿರ್ಗಮಿಸಿದರು.

DK SHIVAKUMAR PROGRAMME 2

ಕಾರ್ಯಕ್ರಮದಿಂದ ಏಕಾಏಕಿ ತೆರಳಿದ ಡಿ.ಕೆ.ಶಿವಕುಮಾರ್

ಈ ನಡುವೆ, ಮತ್ತೊಂದು ಮೊಬೈಲ್ ಕರೆ ಸ್ವೀಕರಿಸಿ ತೆರಳಿದ ಡಿ.ಕೆ.ಶಿವಕುಮಾರ್ ಫೋನ್​ನಲ್ಲಿ ಮಾತನಾಡುತ್ತಲೇ ತೆರಳಿ ಕಾರಿನಲ್ಲಿ ಆಸೀನರಾದರು. ಕಾರಿನಲ್ಲಿ ತೆರಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ನಿಗದಿಯಾಗಿದ್ದ ಮತ್ತೊಂದು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎಂದು ತಿಳಿದುಬಂದಿದ್ದು ಸದ್ಯ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಲಾಗಿದೆ.

ಡಿಕೆಶಿ, ರಮೇಶ್​ ಜಾರಕಿಹೊಳಿ ಮನೆ ಬಳಿ ಭಾರಿ ಭದ್ರತೆ ಅತ್ತ, ಡಿಕೆಶಿ, ರಮೇಶ್​ ಜಾರಕಿಹೊಳಿ ಮನೆ ಬಳಿ ಭಾರಿ ಭದ್ರತೆ ಒದಗಿಸಲಾಗಿದೆ. ಭದ್ರತೆಗಾಗಿ ಒಂದು ಕೆಎಸ್ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಡಿಕೆಶಿ ನಿವಾಸದ ಮುಂದೆಯೂ ಹೆಚ್ಚಿದ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಈ ನಡುವೆ, ಡಿ.ಕೆ.ಶಿವಕುಮಾರ್​ ಮನೆ ಬಳಿ ‘ಕೈ’ ಕಾರ್ಯಕರ್ತರ ಧರಣಿ ನಡೆಯುತ್ತಿದೆ. ರಮೇಶ್​ ವಿರುದ್ಧ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಡಿಕೆಶಿ ನಿವಾಸದ ಎದುರು ತೆರಳುತ್ತಿದ್ದ ಕಾರ್ಯಕರ್ತರು ರಮೇಶ್ ಜಾರಕಿಹೊಳಿ ಮನೆ ಬಳಿ ಧರಣಿಗೆ ತೆರಳುತ್ತಿದ್ದರು.

ಆದರೆ, ಧರಣಿಗೆ ತೆರಳ್ತಿದ್ದ ಕಾರ್ಯಕರ್ತರನ್ನು ಮುಖಂಡರು ತಡೆದರು. ಹೀಗಾಗಿ ಡಿಕೆಶಿ ನಿವಾಸದ ಎದುರೇ ಕಾರ್ಯಕರ್ತರ ಧರಣಿ ನಡೆಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಪರ ‘ಕೈ’ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದು ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ.

ಅತ್ತ ಕಾಂಗ್ರೆಸ್​, ಇತ್ತ ಬಿಜೆಪಿ ಈ ಮಧ್ಯೆ, ಡಿಕೆಶಿ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಬೆಂಗಳೂರಿನ ಸದಾಶಿವನಗರದ ಡಿಕೆಶಿ ನಿವಾಸ ಎದುರು ಧರಣಿ ನಡೆಸುತ್ತಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ ಬೆಂಬಲಿಗರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಸಿಡಿ ಮಾಡಿರುವ ಡಿಕೆಶಿಗೆ ಧಿಕ್ಕಾರ, ಕುತಂತ್ರ ರಾಜಕಾರಣಿ ಡಿಕೆಶಿ ಎಂದು ರಮೇಶ್​ ಬೆಂಬಲಿಗರು ಧಿಕ್ಕಾರ ಕೂಗುತ್ತಿದ್ದಾರೆ.

ಇದನ್ನೂ ಓದಿ: ಅಪ್ಪ ಅಮ್ಮನಿಗೆ ಏನೂ ಗೊತ್ತೇ ಇಲ್ಲ, ಏನು ಅನ್ಯಾಯ ಮಾಡಿದ್ದಾರೆ ಅಂತಾ ನಾನು ಬಿಚ್ಚಿಡ್ತೀನಿ: ಸಿಡಿ ಲೇಡಿ ಮತ್ತೊಂದು ವಿಡಿಯೋ ಬಾಂಬ್

Published On - 8:36 pm, Sat, 27 March 21