ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ CD ಬಹಿರಂಗ ಪ್ರಕರಣದಲ್ಲಿ ಸಿಡಿ ಲೇಡಿ ಒಂದಿ ಜಡ್ಜ್ ಎದುರು ಇಂದು ಹಾಜರಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ತೀವ್ರತರವಾದ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವ ಪ್ರಕರಣದ ಎ1 ಆರೋಪಿ ರಮೇಶ್ ಜಾರಕಿಹೊಳಿ ಮತ್ತು ಪ್ರಕರಣದ ಸೂತ್ರಧಾರ ಎಂದು ಬಿಂಬಿಸಲ್ಪಟ್ಟಿರುವ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಹಾಕಲಾಗಿದೆ.
ಬೆಂಗಳೂರಿನಲ್ಲಿ ಒಂದೇ ಏರಿಯಾದಲ್ಲಿ ಅಂದ್ರೆ ಸದಾಶಿವನಗರದಲ್ಲಿ ಡಿಕೆ ಶಿವಕುಮಾರ್ ಮತ್ತು ರಮೇಶ್ ಕುಮಾರ್ ಅವರ ನಿವಾಸಗಳಿವೆ. ಯುವತಿ ಮತ್ತು ಯುವತಿ ಪೋಷಕರ ಹೇಳಿಕೆಗಳ ನಂತರ ರಾಜಕೀಯ ನಾಯಕರಿಬ್ಬರ ಬೆಂಬಲಿಗರು ಉದ್ವಿಗ್ನಗೊಂಡಿದ್ದಾರೆ. ಹಾಗಾಗಿ, ಭದ್ರತೆಗಾಗಿ ಎಸಿಪಿ, ನಾಲ್ವರು ಇನ್ಸ್‌ಪೆಕ್ಟರ್‌ಗಳು, ಐವರು SI ಮತ್ತು 80ಕ್ಕೂ ಹೆಚ್ಚು ಪೊಲೀಸರು, 5 ಕೆಎಸ್‌ಆರ್‌ಪಿ ನಿಯೋಜನೆ ಮಾಡಲಾಗಿದೆ.
ಕುತೂಹಲದ ಸಂಗತಿಯೆಂದರೆ ಉಭಯ ನಾಯಕರು ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆಂದು ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿದ್ದಾರೆ.
ಇದನ್ನೂ ಓದಿ: ಸಿಡಿ ಲೇಡಿ ಪೋಷಕರ ನಿವಾಸಕ್ಕೆ ವಾಲ್ಮೀಕಿ ಪೀಠದ ಜಗದ್ಗುರು ಪ್ರಸನ್ನಾನಂದಪುರಿ ಶ್ರೀ ಭೇಟಿ
Published On - 10:24 am, Tue, 30 March 21