ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು, ದಿನಕ್ಕೊಂದು ಮಾಹಿತಿ ಹೊರ ಬೀಳುತ್ತಿದೆ. ಈ ನಡುವೆ ಈಗ ಸಿಡಿ ಲೇಡಿಯ ಕುಟುಂಬಸ್ಥರನ್ನು ಸಂಪರ್ಕಿಸಿ SIT ತಂಡ ವಿಚಾರಣೆ ನಡೆಸಿದೆ ಎಂಬ ಮಾಹಿತಿ ಸಿಕ್ಕಿದೆ. ಹಾಗಾದ್ರೆ ಯುವತಿಯ ಕುಟುಂಬಸ್ಥರು SITಗೆ ಹೇಳಿದ್ದೇನು. ಸಿಡಿ ಲೇಡಿ ಪತ್ತೆಗೆ ಸಹಾಯವಾಗುತ್ತಾ ಕುಟುಂಬಸ್ಥರ ಹೇಳಿಕೆ? ಇವರು ಬಾಯಿಬಿಟ್ಟ ಸತ್ಯವೇನು? ಎಂಬುವುದರ ಮಾಹಿತಿ ಇಲ್ಲಿದೆ.
ಸಿಡಿ ರಿಲೀಸ್ ಬಳಿಕ ಸಿಡಿ ಲೇಡಿ ನಾಪತ್ತೆಯಾಗಿದ್ದಳು. ಯುವತಿಯ ಪೋಷಕರು ಸಹ ಕೇಸ್ ದಾಖಲಿಸಿ ನಾಪತ್ತೆಯಾಗಿದ್ದರು. ಸದ್ಯ ಈಗ SIT ತಂಡ ಮಾಹಿತಿಯನ್ನು ಕಲೆ ಹಾಕಲು ಯುವತಿಯ ಕುಟುಂಬಸ್ಥರ ಮೊರೆ ಹೋಗಿದೆ. ಕೊನೆಗೂ ಸಿಡಿ ಲೇಡಿ ಕುಟುಂಬವನ್ನ ಸಂಪರ್ಕಿಸಿ ಯುವತಿ ತಂದೆ-ತಾಯಿ ಹೇಳಿಕೆಯನ್ನು ದಾಖಲಿಸಿಕೊಂಡಿದೆ.
ನಾಪತ್ತೆಯಾದ ಬಳಿಕ ಕುಟುಂಬದ ಜೊತೆ 4 ಬಾರಿ ಸಂಪರ್ಕ
ಸಿಡಿ ಲೇಡಿ ನಾಪತ್ತೆಯಾದಾಗಿನಿಂದ ಇದುವರೆಗೆ ನಾಲ್ಕು ಬಾರಿ ಫೋನ್ ಮಾಡಿದ್ಲಂತೆ. ಗೋವಾ, ಬೆಂಗಳೂರು, ಚೆನ್ನೈ ಸೇರಿ 4 ಸ್ಥಳದಿಂದ ಸಂಪರ್ಕ ಮಾಡಿದ್ದಳು ಎಂದು ಕುಟುಂಬಸ್ಥರು SITಗೆ ಮಾಹಿತಿ ನೀಡಿದ್ದಾರೆ. ಮೊದಲ ಬಾರಿ ಗೋವಾದಿಂದ ಕರೆ ಮಾಡಿ ನಾನು ಸೇಫ್ ಇದ್ದೇನೆ ಎಂದು ಹೇಳಿದ್ದಳಂತೆ. ಇದಾದ ಬಳಿಕ ಬೆಂಗಳೂರಿನಿಂದ ಒಮ್ಮೆ ಕರೆ ಮಾಡಿದ್ಲಂತೆ. ಚೆನ್ನೈನಿಂದ ಕರೆ ಮಾಡಿದಾಗ ಭಯದಿಂದ ಮಾತಾಡಿದ್ಲಂತೆ. ಬಲವಂತವಾಗಿ ನನ್ನನ್ನ ಇಟ್ಟುಕೊಂಡಿದ್ದಾರೆ ಎಂದು ಕೇಳಿದ್ದಾಳೆ. ಹೀಗಾಗಿ ಮಗಳನ್ನು ಅಪಹರಣ ಮಾಡಿದ್ದಾರೆ ಎಂದು ತಂದೆ SIT ಗೆ ಹೇಳಿದ್ದಾರೆ. ಅಲ್ಲದೆ ಒಬ್ಬ ಸಹೋದರನ ಬಳಿ ಸಿಡಿ ಲೇಡಿ ಕಾಲ್ ರೆಕಾರ್ಡಿಂಗ್ ಇದೆಯಂತೆ. ಈ ಕಾಲ್ ರೆಕಾರ್ಡ್ಸ್ ಎಸ್ಐಟಿ ತಂಡಕ್ಕೆ ಇನ್ನೂ ಸಿಕ್ಕಿಲ್ಲ ಎನ್ನುವುದೇ ಅಚ್ಚರಿಯ ಸಂಗತಿ.
ಸಿಡಿ ಸೂತ್ರಧಾರರ ಗ್ಯಾಂಗ್ ಪತ್ತೆಗೆ SIT ಹರಸಾಹಸ
ಇನ್ನು ಸಿಡಿ ಗ್ಯಾಂಗ್ ಪತ್ತೆಗೆ SIT ಹರಸಾಹಸವೇ ಮಾಡುತ್ತಿದೆ. ಆದ್ರೆ ಸಿಡಿ ಲೇಡಿ ಕುಟುಂಬಸ್ಥರು ಮಾತ್ರ ಸಹಕಾರವನ್ನು ನೀಡುತ್ತಿಲ್ಲ. ಸಿಡಿ ಗ್ಯಾಂಗ್ ಜತೆಯೇ ಸಿಡಿ ಲೇಡಿ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸಿಡಿ ಲೇಡಿ ಮೊಬೈಲ್ ಕರೆಗಳ ಮೇಲೆ ನಿಗಾ ಇಡಲಾಗಿದೆ. ಆದ್ರೆ SIT ನಿಗಾ ಅರಿತು CD ಗ್ಯಾಂಗ್ ಕಳ್ಳಾಟವಾಡುತ್ತಿದೆ. ನಾರ್ಮಲ್ ಕರೆ ಮಾಡಿದರೆ ಸಿಕ್ಕಿಬೀಳುವ ಭಯ ಇದೆ. ಹೀಗಾಗಿ CD ಗ್ಯಾಂಗ್ ಇಂಟರ್ ನೆಟ್ ಕಾಲ್ ಮಾಡ್ತಿದೆ. CD ಗ್ಯಾಂಗ್, ಸಂಬಂಧಿಕರ ಜೊತೆ ಮಾತುಕತೆ ನಡೆಸಲು ಇಂಟರ್ ನೆಟ್ ಕಾಲ್ ಮಾಡ್ತಿದೆ. ಇದರಿಂದ ಕಾಲ್ ಡಿಟೇಲ್ಸ್ ಪತ್ತೆ ಹಚ್ಚುವುದು ಕಷ್ಟ. ತುಮಕೂರು ಮೂಲದ ವ್ಯಕ್ತಿಯಿಂದ ಇಂಟರ್ ನೆಟ್ ಕಾಲ್ ‘ಗೂಗಲ್ ಡ್ಯೂ’ ಮೂಲಕ ಇಂಟರ್ ನೆಟ್ ಕರೆ ಮಾಡಿ ಸಂಬಂಧಿಕರು, ಸ್ನೇಹಿತರನ್ನ ಸಂಪರ್ಕ ಮಾಡಲಾಗುತ್ತಿದೆ. ಹೀಗಾಗಿ CD ಗ್ಯಾಂಗ್ ಸದಸ್ಯರು ಕರೆ ಮಾಡಿದರೆ ಮಾಹಿತಿ ನೀಡಲು ಸಂಬಂಧಿಕರಿಗೆ SIT ಸೂಚಿಸಿದೆ.
ಇದನ್ನೂ ಓದಿ: ನನ್ನ ಜೀವಕ್ಕೆ ಅಪಾಯವಿದೆ.. ನನಗೆ ಫೋನ್, ಮೆಸೇಜ್ ಮಾಡಬೇಡಿ ಎಂದಿದ್ದಳು -‘ಸಿಡಿ ಲೇಡಿ’ ತಾಯಿಯ ಆತಂಕ
Published On - 9:12 am, Tue, 23 March 21