AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಜೀವಕ್ಕೆ ಅಪಾಯವಿದೆ.. ನನಗೆ ಫೋನ್, ಮೆಸೇಜ್ ಮಾಡಬೇಡಿ ಎಂದಿದ್ದಳು -‘ಸಿಡಿ ಲೇಡಿ’ ತಾಯಿಯ ಆತಂಕ

ನಾನು ಊರಿಗೆ ಕರೆದಿದ್ದಕ್ಕೆ ಬರುವುದಿಲ್ಲವೆಂದು ಹೇಳಿದ್ದಳು. ನನ್ನ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಳು ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ.

ನನ್ನ ಜೀವಕ್ಕೆ ಅಪಾಯವಿದೆ.. ನನಗೆ ಫೋನ್, ಮೆಸೇಜ್ ಮಾಡಬೇಡಿ ಎಂದಿದ್ದಳು -‘ಸಿಡಿ ಲೇಡಿ’ ತಾಯಿಯ ಆತಂಕ
ಸಿಡಿ ಯುವತಿಯ ಕುಟುಂಬಸ್ಥರು
Follow us
KUSHAL V
|

Updated on:Mar 16, 2021 | 9:18 PM

ಬೆಳಗಾವಿ: ‘ಸಿಡಿ’ಯಲ್ಲಿರುವಳು ನಾನಲ್ಲ ಎಂದು ಮಗಳು ಹೇಳಿದಳು ಎಂದು ಟಿವಿ9ಗೆ ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ನನ್ನಂತೆ ಕಾಣುವ ಹುಡುಗಿಯ ದೃಶ್ಯ ಎಡಿಟ್ ಮಾಡಿದ್ದಾರೆ. ಅದು ನಕಲಿ ಸಿಡಿ, ಆ ಸಿಡಿಯಲ್ಲಿ ನನ್ನ ಪಾತ್ರವೇ ಇಲ್ಲ ಎಂದು ಸಿಡಿ ವೈರಲ್ ಆದಾಗ ಕೇಳಿದ್ದಕ್ಕೆ ನನ್ನ ಮಗಳು ಹಾಗೆ ಹೇಳಿದ್ದಳು ಎಂದು ಟಿವಿ9ಗೆ ಸಂತ್ರಸ್ತೆಯ ತಾಯಿ ಹೇಳಿದ್ದಾರೆ. 

ಮನೆಗೆ ವಾಪಸ್ ಬಂದಾಗ ಹೇಳುವೆ ಎಂದಿದ್ದಳು. ಸದ್ಯಕ್ಕೆ ಏನೂ ಹೇಳುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಳು. ನಾನೆಲ್ಲಿದ್ದೀನಿ ಎನ್ನುವುದೂ ಗೊತ್ತಿಲ್ಲ ಎಂದು ಹೇಳಿದ್ದಳು ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ಮಗಳನ್ನು ಯಾರೋ ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ಮಗಳ ಜೀವಕ್ಕೆ ಅಪಾಯವಿದೆ ಎಂದು ಆಕೆಯ ತಾಯಿ ಆತಂಕ ವ್ಯಕ್ತಪಡಿಸಿದರು.

‘ನನ್ನ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಳು’ ಟಿವಿಯಲ್ಲಿ ವಿಡಿಯೋ ನೋಡಿ ನಾನು ಪುತ್ರಿಗೆ ಕರೆ ಮಾಡಿದ್ದೆ. ಕರೆ ಮಾಡಿದ್ದಾಗ ಟಿವಿ ನೋಡು ಎಂದು ಮಗಳಿಗೆ ಹೇಳಿದ್ದೆ. ಟಿವಿಯಲ್ಲಿ ದೃಶ್ಯವನ್ನು ನೋಡಿ ನಮಗೆ ಆಘಾತವಾಯಿತು ಎಂದು ಸಂತ್ರಸ್ತೆಯ ತಾಯಿ ಹೇಳಿದರು.

ಆಗ, ನಾನು ಯಾವುದೇ ತಪ್ಪು ಮಾಡಿಲ್ಲ, ಅದು ನಾನಲ್ಲ ಅಂದಿದ್ಲು. ನನ್ನಂತೆ ಕಾಣುವ ಹುಡುಗಿ ಫೋಟೋ ಎಡಿಟ್ ಮಾಡಿದ್ದಾರೆ. ನನ್ನ ಪುತ್ರಿ ಮೊಬೈಲ್​ಗೆ ಕರೆ ಮಾಡಿದ್ದಾಗ ಹೀಗೆ ಹೇಳಿದ್ದಳು. ಊರಿಗೆ ಬಂದು ತಪ್ಪುಮಾಡಿಲ್ಲವೆಂದು ಹೇಳುವೆ ಬಾ ಎಂದಿದ್ದೆ. ನಾನು ಊರಿಗೆ ಕರೆದಿದ್ದಕ್ಕೆ ಬರುವುದಿಲ್ಲವೆಂದು ಹೇಳಿದ್ದಳು. ನನ್ನ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಳು ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ.

ನಾನು ಇರುವಲ್ಲಿ ಕ್ಷೇಮವಾಗಿದ್ದೀನಿ, ತೊಂದರೆಯಿಲ್ಲ ಅಂದ್ಲು. ನನ್ನನ್ನು ಇಲ್ಲೇ ಒಂದು ಕಡೆ ಇಟ್ಟಿದ್ದಾರೆ, ನೀವು ಆರಾಮಾಗಿರಿ. ನನಗೆ ಫೋನ್, ಮೆಸೇಜ್ ಮಾಡಬೇಡಿ ಎಂದು ಸೂಚಿಸಿದ್ದಳು. ನಮ್ಮೊಟ್ಟಿಗೆ ಇರುವ ಮಕ್ಕಳಿಗೆ ಮಗಳು ಸೂಚನೆ ನೀಡಿದ್ದಳು. ನನ್ನ ಫೋನ್​ ಚೆಕ್​ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಳು. ಒಂದು ದಿನ ಬಿಟ್ಟು ಫೋನ್ ಮಾಡಿದಾಗ ಸ್ವಿಚ್​ ಆಫ್​ ಆಗಿತ್ತು ಎಂದು ಸಂತ್ರಸ್ತೆಯ ತಾಯಿ ಟಿವಿ9ಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ, ನಾವು ಬೆಳಗಾವಿಗೆ ಬಂದು ಪೊಲೀಸರಿಗೆ ದೂರು ನೀಡಿದೆವು ಎಂದು ಟಿವಿ9ಗೆ ಯುವತಿಯ ತಾಯಿ ಹೇಳಿದ್ದಾರೆ. ಜೊತೆಗೆ, ಇದ್ರಲ್ಲಿ ಯಾರು ಇದ್ದಾರೆ ಅವರಿಗೆ ಶಿಕ್ಷೆಯಾಗಬೇಕು. ನಮ್ಮ ಮಗಳನ್ನ ಹುಡುಕಿಕೊಡಿ ಎಂದು ದಂಪತಿ ಕೈಮುಗಿದು ಕೇಳಿಕೊಂಡರು.

ಇದನ್ನೂ ಓದಿ: ನನ್ನ ಮಗಳು ಕಿಡ್ನ್ಯಾಪ್‌ ಎಂದು ‘ಸಿಡಿ ಲೇಡಿ’ಯ ತಂದೆಯಿಂದ ಠಾಣೆಗೆ ದೂರು ದಾಖಲು

Published On - 9:16 pm, Tue, 16 March 21

ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು