Gold Silver Price: ಗರಿಷ್ಠ ದಾಖಲೆಯಿಂದ ಕುಸಿತದ ಹಾದಿಯಲ್ಲಿ ಚಿನ್ನ.. ಖರೀದಿಸುವವರಿಗೆ ಚಿನ್ನ, ಬೆಳ್ಳಿ ದರ ಮಾಹಿತಿ

Gold Silver Rate in Bengaluru: ಚಿನ್ನ, ಬೆಳ್ಳಿ ದರ ಮಾಹಿತಿ ಗಮನಿಸಿ.. ಕೊಳ್ಳುವ ಆಸೆ ಇದ್ದರೆ ಇಂದೇ ಖರೀದಿಸಿ. ದರದ ವಿವರ ಇಲ್ಲಿದೆ.

Gold Silver Price: ಗರಿಷ್ಠ ದಾಖಲೆಯಿಂದ ಕುಸಿತದ ಹಾದಿಯಲ್ಲಿ ಚಿನ್ನ.. ಖರೀದಿಸುವವರಿಗೆ ಚಿನ್ನ, ಬೆಳ್ಳಿ  ದರ ಮಾಹಿತಿ
ಚಿನ್ನದ ಕಿವಿಯೋಲೆ (ಪ್ರಾತಿನಿಧಿಕ ಚಿತ್ರ)
Follow us
shruti hegde
|

Updated on: Mar 23, 2021 | 9:38 AM

ಬೆಂಗಳೂರು: ಕಳೆದ ವರ್ಷ ಚಿನ್ನ ದರ ದಾಖಲೆಯ ಗರಿಷ್ಠ ಮಟ್ಟ ತಲುಪಿದ ನಂತರ ಚಿನ್ನ ಕೊಳ್ಳುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿತ್ತು. ಸಭೆ-ಸಮಾರಂಭ ಅಥವಾ ಮದುವೆ ಕಾರ್ಯಕ್ರಮಗಳನ್ನು ಇಟ್ಟುಕೊಂಡವರು ವಿಧಿ ಇಲ್ಲದೇ ಅದೇ ಬೆಲೆಗೆ ಚಿನ್ನ ಖರೀದಿಸಬೇಕಾಗಿ ಬಂದಿತ್ತು. ಈ ವರ್ಷ 2021ರಲ್ಲಿ ಕೊರೊನಾ ಸಾಂಕ್ರಾಮಿಕ ಎಲ್ಲೆಡೆ ತನ್ನ ಪ್ರಭಾವವನ್ನು ಬೀರುತ್ತಿದ್ದಂತೆ ಲಾಕ್​ಡೌನ್​ ಜಾರಿಗೊಳಿಸಲಾಯಿತು. ನಂತರ ಲಾಕ್​ಡೌನ್​ ಮುಗಿದು, ಕೊರೊನಾ ಹಾವಳಿ ತಣ್ಣಗಾಗುತ್ತಿದ್ದಂತೆಯೇ ಚಿನ್ನ ದರ ಕುಸಿತ ಕಂಡಿತು. ಬೇಡಿಕೆಯೂ ಕೂಡಾ ಹೆಚ್ಚಾಯಿತು. ಆದರೆ, ಇದೀಗ ಮತ್ತೆ ಕೊರೊನಾ ಎರಡನೇ ಅಲೆ ಪ್ರಭಾವ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದಂತೆ ಅಂಗಡಿಗಳಿಗೆ, ಮಾಲ್​ಗಳಿಗೆ ನಿರ್ಬಂಧ ಹೇರುವ ಮಾತುಗಳು ಕೇಳಿಬರುತ್ತಿವೆ. ಚಿನ್ನ ದರವನ್ನು ಸಾಮಾನ್ಯವಾಗಿ ಊಹಿಸಲೂ ಸಾಧ್ಯವಿಲ್ಲ. ಹಾಗಿದ್ದಾಗ ದೈನಂದಿನ ದರ ಬದಲಾವಣೆಯಲ್ಲಿ ಚಿನ್ನ ದರ ಇಂದು ಇಳಿಕೆ ಕಂಡಿದೆ. ಎಷ್ಟಿರಬಹುದು ದರ? ಎಂಬ ಪ್ರಶ್ನೆಗೆ ವಿವರ ಇಲ್ಲಿದೆ.

22 ಕ್ಯಾರೆಟ್ 10ಗ್ರಾಂ ಚಿನ್ನ ಇಂದು 42,050 ರೂಪಾಯಿ ಇದೆ. ಹಾಗೂ 24 ಕ್ಯಾರೆಟ್ 10ಗ್ರಾಂ ಚಿನ್ನ ಇಂದು 45,880 ರೂಪಾಯಿ ಇದೆ. ಹಾಗೆಯೇ ಬೆಳ್ಳಿ ದರವನ್ನು ದೈನಂದಿನ ದರ ಬದಲಾವಣೆ ಗಮನಿಸಿದಾಗ ಯಾವುದೇ ಬದಲಾವಣೆ ಕಂಡು ಬಂದಿಲ್ಲ. 1ಕೆಜಿ ಬೆಳ್ಳಿಯನ್ನು 67,500 ರೂಪಾಯಿಗೆ ಗ್ರಾಹಕರು ಖರೀದಿಸುತ್ತಿದ್ದಾರೆ.

22ಕ್ಯಾರೆಟ್ ಚಿನ್ನ ದರ 1ಗ್ರಾಂ ಚಿನ್ನ ದರ ನಿನ್ನೆ 4,224 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 4,205 ರೂಪಾಯಿ ಆಗಿದೆ. 8ಗ್ರಾಂ ಚಿನ್ನ ದರ ನಿನ್ನೆ 33,792 ರೂಪಾಯಿ ಆಗಿದ್ದು, ಇಂದು ದರ 33,640 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 152 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 42,240 ರೂಪಾಯಿ ಆಗಿದ್ದು, ಇಂದು ದರ 42,050 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 190 ರೂಪಾಯಿಯಷ್ಟು ಇಳಿಕೆ ಕಂಡಿದೆ. 100 ಗ್ರಾಂ. ಚಿನ್ನವನ್ನು ನಿನ್ನೆ 4,22,400 ರೂಪಾಯಿಗೆ ಗ್ರಾಹಕರು ಕೊಂಡಿದ್ದು, ಇಂದು ದರ ಇಳಿಕೆಯ ನಂತರ 4,20,500 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1.900 ರೂಪಾಯಿ ಇಳಿಕೆ ಕಂಡಿದೆ.

24 ಕ್ಯಾರೆಟ್ ಚಿನ್ನ ದರ 1ಗ್ರಾಂ ಚಿನ್ನ ದರ ನಿನ್ನೆ 4,608 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 4,588 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಇಳಿಕೆ ಕಂಡಿದೆ. 8 ಗ್ರಾಂ ಚಿನ್ನ ನಿನ್ನೆ 36,864 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 36,704 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 160 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನ ನಿನ್ನೆ 46,080 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 45,880 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 200 ರೂಪಾಯಿಯಷ್ಟು ಇಳಿಕೆ ಕಂಡಿದೆ. ಹಾಗೆಯೇ 100 ಗ್ರಾಂ ಚಿನ್ನ ನಿನ್ನೆ 4,60,800 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 4,58,800 ರೂಪಾಯಿಗೆ ಇಳಿದಿದೆ. ದೈನಂದಿನ ದರ ಬದಲಾವಣೆಯನ್ನು ಪರಿಶೀಲಿಸಿದಾಗ 2,000 ರೂಪಾಯಿ ಇಳಿಕೆ ಕಂಡಿದೆ.

ಬೆಳ್ಳಿ ದರ ಪೂಜೆ ಪುನಸ್ಕಾರಗಳಿಗೆ ಅಥವಾ ದೇವರ ಪೂಜೆಗೆಂದು ಬೆಳ್ಳಿ ಕೊಳ್ಳಲು ಬಯಸಿದ್ದೀರಿ ಎಂದಾದರೆ ಬೆಳ್ಳಿ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. ದೈನಂದಿನ ದರ ಬದಲಾವಣೆಯನ್ನು ಗಮನಿಸಿದಾಗ ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಕಳೆದ ಎರಡು ದಿನಗಳಿಂದ ಬೆಳ್ಳಿ ದರ ಬದಲಾವಣೆಯಾಗಿಲ್ಲ. 1ಗ್ರಾಂ ಬೆಳ್ಳಿ ದರ 67.50 ರೂಪಾಯಿಗೆ ಮಾರಾಟವಾಗುತ್ತಿದೆ. 8 ಗ್ರಾಂ ಬೆಳ್ಳಿ ದರ 540 ರೂಪಾಯಿಗೆ ಮಾರಾಟವಾಗುತ್ತಿದೆ. 10 ಗ್ರಾಂ ಬೆಳ್ಳಿಯನ್ನು ಗ್ರಾಹಕರು 675 ರೂಪಾಯಿಗೆ ಕೊಳ್ಳುತ್ತಿದ್ದಾರೆ. ಹಾಗೆಯೇ 100 ಗ್ರಾಂ ಬೆಳ್ಳಿ ದರ 6,750 ರೂಪಾಯಿ ಇದೆ. ಇನ್ನು, 1ಕೆಜಿ ಬೆಳ್ಳಿ ದರ ನಿನ್ನೆ 67,500 ರೂಪಾಯಿಗೆ ಮಾರಾಟವಾಗಿತ್ತು. ಹಾಗೆಯೇ ದೈನಂದಿನ ದರ ಬದಲಾವಣೆಯಲ್ಲಿ ಯಾವುದೇ ವ್ಯತ್ಯಾಸ ಕಾಣದೇ ಇಂದೂ ಇದೇ ದರ ಹೊಂದಿದೆ.

ಇದನ್ನೂ ಓದಿ: Gold Silver Price: ಚಿನ್ನ ದರ ಕುಸಿತ.. ಕೊರೊನಾ ಹೆಚ್ಚಾಗುತ್ತಿದ್ದು ಚಿನ್ನ ದರ ಏರಿಕೆ ಆಗಲಿದೆ ಎಂಬುದು ತಜ್ಞರ ಅಭಿಪ್ರಾಯ

Gold Silver Price: ಒಂದು ವಾರದಿಂದ ಚಿನ್ನ ದರ ಏರಿಕೆ.. ಕಡಿಮೆಯಾದ ಬೇಡಿಕೆ!

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ