ಆರೋಪಿ ಕೋರಿಕೆಯಂತೆ ಎಸ್ಐಟಿ ರಚನೆ- ಯುವತಿ ವಕೀಲೆ ಆಕ್ಷೇಪ; ನಾವು ಯಾರಿಗೂ ಕೇರ್ ಮಾಡೊಲ್ಲ ಎಂದ ಹೈಕೋರ್ಟ್ ಸಿಜೆ

| Updated By: ಸಾಧು ಶ್ರೀನಾಥ್​

Updated on: Nov 30, 2021 | 1:58 PM

ಇನ್ನು ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಅರೆಬೆತ್ತಲೆ ವ್ಯಕ್ತಿ ಪ್ರತ್ಯಕ್ಷವಾದ ಮುಜುಗರದ ಪ್ರಸಂಗವೂ ನಡೆಯಿತು. ಉಜಿರೆ ಎಸ್‌ಡಿಎಂಸಿಯ ಶ್ರೀಧರ್ ಭಟ್ ಎಂಬಾತ ಹೀಗೆ ಪ್ರತ್ಯಕ್ಷವಾಗಿದ್ದ. ಅರೆಬೆತ್ತಲೆ ವ್ಯಕ್ತಿ ಹಾಜರಿಗೆ ಇಂದಿರಾ ಜೈಸಿಂಗ್ ಆಕ್ಷೇಪ ವ್ಯಕ್ತಪಡಿಸಿದರು.

ಆರೋಪಿ ಕೋರಿಕೆಯಂತೆ ಎಸ್ಐಟಿ ರಚನೆ- ಯುವತಿ ವಕೀಲೆ ಆಕ್ಷೇಪ; ನಾವು ಯಾರಿಗೂ ಕೇರ್ ಮಾಡೊಲ್ಲ ಎಂದ ಹೈಕೋರ್ಟ್ ಸಿಜೆ
ಹೈಕೋರ್ಟ್
Follow us on

ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ವಿಚಾರಣೆಯು ವಿಡಿಯೋ ಕಾನ್ಫರೆನ್ಸ್‌ ಮೂಲಕ ಇಂದು ರಾಜ್ಯ ಹೈಕೋರ್ಟ್​​ನಲ್ಲಿ ನಡೆಯಿತು. ಈ ವೇಳೆ ಎಸ್ಐಟಿ ಅಂತಿಮ ವರದಿ ಸಲ್ಲಿಕೆಗೆ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿ ಮಾಜಿ ಸಚಿವರ ಮನವಿ ಮೇರೆಗೆ ಎಸ್ಐಟಿ ರಚಿಸಲಾಗಿದೆ. ಹೀಗಾಗಿ SIT ರಚನೆಯೇ ದೋಷಪೂರಿತ ಎಂದು ಅವರು ವಾದ ಮಂಡಿಸಿದರು. ಸಚಿವರಾದರೂ ಕಾನೂನಿನ ಮುಂದೆ ಎಲ್ಲರೂ ಸಮಾನರು. ನಾವು ಯಾರಿಗೂ ಕೇರ್ ಮಾಡುವುದಿಲ್ಲ ಎಂದು ಇದೇ ವೇಳೆ ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಅರೆಬೆತ್ತಲೆ ವ್ಯಕ್ತಿ ಪ್ರತ್ಯಕ್ಷ:
ಇನ್ನು ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಅರೆಬೆತ್ತಲೆ ವ್ಯಕ್ತಿ ಪ್ರತ್ಯಕ್ಷವಾದ ಮುಜುಗರದ ಪ್ರಸಂಗವೂ ನಡೆಯಿತು. ಉಜಿರೆ ಎಸ್‌ಡಿಎಂಸಿಯ ಶ್ರೀಧರ್ ಭಟ್ ಎಂಬಾತ ಹೀಗೆ ಪ್ರತ್ಯಕ್ಷವಾಗಿದ್ದ. ಅರೆಬೆತ್ತಲೆ ವ್ಯಕ್ತಿ ಹಾಜರಿಗೆ ಇಂದಿರಾ ಜೈಸಿಂಗ್ ಆಕ್ಷೇಪ ವ್ಯಕ್ತಪಡಿಸಿದರು. ಮಹಿಳೆಯಾದ ನಾನು ವಾದಿಸುತ್ತಿರುವಾಗ ಅರೆಬೆತ್ತಲೆ ವ್ಯಕ್ತಿ ಹಾಜರಾಗುದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಅರೆಬೆತ್ತಲೆ ದೇಹ ತೋರಿಸುತ್ತಿದ್ದಾನೆ. ಇದು ಮಹಿಳೆಯಾದ ನನಗೆ ಮುಜುಗರ ತರುವಂತಿದೆ ಎಂದು ವಕೀಲೆ ಇಂದಿರಾ ಕಿಡಿಕಾರಿದರು.

ಅರೆಬೆತ್ತಲೆ ವ್ಯಕ್ತಿ ಪ್ರತ್ಯಕ್ಷ; ನೋಟಿಸ್ ಜಾರಿ
ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಅರೆಬೆತ್ತಲೆ ವ್ಯಕ್ತಿ ಪ್ರತ್ಯಕ್ಷವಾಗಿದ್ದಕ್ಕೆ ಸುಪ್ರೀಂ ಕೋರ್ಟ್ ವಕೀಲೆ ಇಂದಿರಾ ಜೈಸಿಂಗ್ ಮತ್ತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವ್ಯಕ್ತಿ ವಿರುದ್ಧ ನ್ಯಾಯಾಂಗ ನಿಂದನೆ ದಾಖಲಿಸಲು ಮನವಿ ಮಾಡಿದ್ದಾರೆ. ಮಹಿಳೆಯಾದ ನಾನು 20 ನಿಮಿಷ ಅವರ ದೇಹ ನೋಡಿದ್ದೇನೆ. ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಇಂದಿರಾ ಜೈಸಿಂಗ್ ಮನವಿ ಮೇರೆಗೆ ಶ್ರೀಧರ್ ಭಟ್, ಎಸ್​​ಡಿಎಂಸಿ, ಉಜಿರೆ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
​​
ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ ಅಂತಿಮ ವರದಿ ಸಲ್ಲಿಸದಂತೆ ಆದೇಶವಿದೆ. ಆದರೆ ಮಧ್ಯಂತರ ಆದೇಶ ತೆರವಿಗೆ ಎಸ್ಐಟಿ ಅರ್ಜಿ ಸಲ್ಲಿಸಿಲ್ಲ. ಹೀಗಾಗಿ SIT ಅರ್ಜಿ ಸಲ್ಲಿಸಿದ‌ ನಂತರ ಈ ಬಗ್ಗೆ ವಿಚಾರಣೆ ಮಾಡಲಾಗುವುದು ಎಂದು ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ಮುಂದೂಡಿತು.

Published On - 1:45 pm, Tue, 30 November 21