ಬೆಂಗಳೂರು: ಎಸ್ಐಟಿ ಅಧಿಕಾರಿಗಳ ಬಳಿ CD ಲೇಡಿ ಹೇಳಿಕೆ ಮುಕ್ತಾಯವಾಗಿದೆ. ಆಡುಗೋಡಿಯ ಟೆಕ್ನಿಕಲ್ ವಿಂಗ್ನಲ್ಲಿ ವಿಚಾರಣೆ ನಡೆದಿತ್ತು. ಇದೀಗ, ಆಡುಗೋಡಿಯ ಟೆಕ್ನಿಕಲ್ ವಿಂಗ್ನಲ್ಲಿ CD ಲೇಡಿ ಹೇಳಿಕೆ ಪಡೆದ ಬಳಿಕ ಆಕೆಗೆ ಮತ್ತೊಂದು ನೋಟಿಸ್ ನೀಡಲಾಗಿದೆ. ನಾಳೆ ಮತ್ತೆ ವಿಚಾರಣೆಗೆ ಹಾಜರಾಗಲು CD ಲೇಡಿಗೆ ಸೂಚನೆ ನೀಡಲಾಗಿದೆ. ಈ ನಡುವೆ, ಆಡುಗೋಡಿ ಟೆಕ್ನಿಕಲ್ ಸೆಲ್‌ನಿಂದ SIT ಅಧಿಕಾರಿಗಳು ವಾಪಸ್ ಆಗಿದ್ದಾರೆ. ವಿಶೇಷ ತನಿಖಾ ತಂಡದ ಮುಖ್ಯಸ್ಥ ಸೌಮೇಂದು ಮುಖರ್ಜಿ ಹಾಗೂ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ವಾಪಸ್ ಆಗಿದ್ದಾರೆ.
ಇತ್ತ, ಆಡುಗೋಡಿಯ ಟೆಕ್ನಿಕಲ್ ವಿಂಗ್ನಲ್ಲಿ CD ಲೇಡಿ ವಿಚಾರಣೆ ವೇಳೆ, ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿರಲಿಲ್ಲ. ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿರುವ ಹಿನ್ನೆಲೆಯಲ್ಲಿ ನನಗೆ ಬೆದರಿಕೆ ಒಡ್ಡಲಾಗಿದೆ. ರಮೇಶ್ ಜಾರಕಿಹೊಳಿಯಿಂದ ನನಗೆ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ನಾನು ತಲೆಮರೆಸಿಕೊಳ್ಳಬೇಕಿತ್ತು. ರಕ್ಷಣೆ ಇಲ್ಲದ ಕಾರಣ ತಲೆಮರೆಸಿಕೊಳ್ಳಬೇಕಿತ್ತು ಎಂದು ಸಂತ್ರಸ್ತೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಇದಲ್ಲದೆ, ಸಂತ್ರಸ್ತೆ ರಮೇಶ್ ಜಾರಕಿಹೊಳಿ ತಮಗೆ ಕೊಟ್ಟ ಗಿಫ್ಟ್, ತಮ್ಮ ಜೊತೆ ಕ್ಲಿಕ್ಕಿಸಿಕೊಂಡ ಫೋಟೋ ಹಾಗೂ ಮಾಡಿರುವ ಚಾಟಿಂಗ್, ವಿಡಿಯೋಗಳನ್ನು ಎಸ್ಐಟಿ ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ನನ್ನ ತಂದೆ, ತಾಯಿ, ಸೋದರ ಕೂಡ ರಮೇಶ್ ಹಿಡಿತದಲ್ಲಿದ್ದಾರೆ. ನನ್ನ ತಂದೆ, ತಾಯಿ, ಸೋದರನಿಗೂ ಕೂಡ ರಕ್ಷಣೆ ಬೇಕು ಎಂದು ಮನವಿ ಮಾಡಿದ್ದಾರಂತೆ.
ಇದಕ್ಕೆ, ವೈದ್ಯಕೀಯ ಪರೀಕ್ಷೆ ಆಗುವವರೆಗೆ ನಮ್ಮ ರಕ್ಷಣೆಯಲ್ಲಿರಬೇಕು. ನಿಮ್ಮ ರಕ್ಷಣೆಗೆ 8 ಮಹಿಳಾ ಪೊಲೀಸರ ತಂಡ ರಚಿಸಲಾಗಿದೆ. ನಿಮಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ನೀಡ್ತೇವೆ. ನೀವು ಬಯಸಿದರೆ ಮಹಿಳಾ ಸಾಂತ್ವನ ಕೇಂದ್ರದಲ್ಲಿರಬಹುದು. ಇಲ್ಲವಾದರೆ ನೀವು ಬಯಸಿದ ಸ್ಥಳದಲ್ಲೂ ಇರಬಹುದು. ಆದರೆ ವೈದ್ಯಕೀಯ ಪರೀಕ್ಷೆವರೆಗೆ ನಮ್ಮ ರಕ್ಷಣೆಯಲ್ಲಿರಬೇಕು ಎಂದು ಎಸ್ಐಟಿ ಅಧಿಕಾರಿಗಳು ಸಂತ್ರಸ್ತೆಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ, ಇಂದು ಸಿಡಿ ಲೇಡಿಯ ವೈದ್ಯಕೀಯ ತಪಾಸಣೆ ಬಹುತೇಕ ಅನುಮಾನ ಎಂಬ ಮಾಹಿತಿ ದೊರೆತಿದೆ. ಹೊಸ ಪ್ರಕರಣವಾದರೆ ತಪಾಸಣೆ ತುರ್ತು ಅಗತ್ಯವಿರುತ್ತದೆ. ಆದರೆ ಸಿಡಿ ಲೇಡಿಗೆ ಇಂದು ಮೆಡಿಕಲ್ ಟೆಸ್ಟ್ ಅನುಮಾನ ಎಂದು ಹೇಳಲಾಗಿದೆ. ಮೆಡಿಕಲ್ ಟೆಸ್ಟ್, ಮಹಜರು ನಾಳೆ ನಡೆಸುವ ಬಗ್ಗೆ ಚಿಂತನೆ ಇದೆ.
ಇದನ್ನೂ ಓದಿ:ಅತ್ಯಾಚಾರ ಎಂದಾದರೆ ವಿಡಿಯೋ ಚಿತ್ರೀಕರಿಸಿದ್ದು ಯಾಕೆ? -ಸಿಡಿ ಲೇಡಿಗೆ ಎಸ್ಐಟಿ ತಂಡದಿಂದ ಪ್ರಶ್ನೆಗಳ ಸುರಿಮಳೆ ರೆಡಿ
Published On - 7:36 pm, Tue, 30 March 21