ಕೋರ್ಟ್​ ನಂತರ, ಪೊಲೀಸರಿಗೂ ಹೇಳಿಕೆ ನೀಡಲು ಸಂತ್ರಸ್ತೆಯನ್ನು ಆಡುಗೋಡಿ​ಗೆ ನಾವೇ ಕರೆತಂದಿದ್ದೇವೆ -ವಕೀಲ ಜಗದೀಶ್​

|

Updated on: Mar 30, 2021 | 6:20 PM

ಆಡುಗೋಡಿಯ ಟೆಕ್ನಿಕಲ್ ವಿಂಗ್​ನಲ್ಲಿ CD ಲೇಡಿ ವಿಚಾರಣೆ ನಡೆಯುತ್ತಿದೆ. ಆಡುಗೋಡಿಯಲ್ಲಿರುವ ಟೆಕ್ನಿಕಲ್ ವಿಂಗ್ ಕಚೇರಿಯಲ್ಲಿ ಎಸ್​ಐಟಿ ಅಧಿಕಾರಿಗಳ ತಂಡದಿಂದ CD ಲೇಡಿ ವಿಚಾರಣೆ ನಡೆಯುತ್ತಿದೆ. ಸದ್ಯ, ಆಡುಗೋಡಿ ಟೆಕ್ನಿಕಲ್ ಸೆಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಕೋರ್ಟ್​ ನಂತರ, ಪೊಲೀಸರಿಗೂ ಹೇಳಿಕೆ ನೀಡಲು ಸಂತ್ರಸ್ತೆಯನ್ನು ಆಡುಗೋಡಿ​ಗೆ ನಾವೇ ಕರೆತಂದಿದ್ದೇವೆ -ವಕೀಲ ಜಗದೀಶ್​
ಆಡುಗೋಡಿಯ ಟೆಕ್ನಿಕಲ್ ವಿಂಗ್​ನಲ್ಲಿ CD ಲೇಡಿ ವಿಚಾರಣೆ
Follow us on

ಬೆಂಗಳೂರು: ತಾಜಾ ವರದಿಗಳ ಪ್ರಕಾರ ಆಡುಗೋಡಿಯ ಟೆಕ್ನಿಕಲ್ ವಿಂಗ್​ ಕಚೇರಿಯಲ್ಲಿ ಎಸ್​ಐಟಿ ಅಧಿಕಾರಿಗಳ ತಂಡದಿಂದ CD ಲೇಡಿ ವಿಚಾರಣೆ ನಡೆಯುತ್ತಿದೆ. ಸದ್ಯ, ಆಡುಗೋಡಿ ಟೆಕ್ನಿಕಲ್ ಸೆಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಜಡ್ಜ್ ಮುಂದೆ ಹೇಳಿಕೆ ನೀಡಿದ ಬಳಿಕ ಸಂತ್ರಸ್ತೆಯನ್ನು ಟೆಕ್ನಿಕಲ್ ವಿಂಗ್‌ಗೆ ಪೊಲೀಸ್​ ಭದ್ರತೆಯಲ್ಲಿ ಕರೆತರಲಾಯಿತು. ಅದಕ್ಕೂ ಮುನ್ನ, ಸಂತ್ರಸ್ತೆ ವಸಂತನಗರದ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಜಡ್ಜ್ ಮುಂದೆ ಹೇಳಿಕೆ ನೀಡಿದ್ದರು. ಕುತೂಹಲಕಾರಿ ಸಂಗತಿಯೆಂದರೆ ಈವರೆಗೂ ಸಂತ್ರಸ್ತೆ ಕೋರ್ಟ್​ ಮುಂದೆ ಏನು ಹೇಳಿಕೆ ನೀಡಿದ್ದಾರೆ ಎಂಬುದು ಎಸ್​ಐಟಿಗೂ ಮಾಹಿತಿ ಇಲ್ಲ. ಇನ್ನು, ಟೆಕ್ನಿಕಲ್ ವಿಂಗ್​ನಲ್ಲಿ SIT ಮುಖ್ಯಸ್ಥ ಸೌಮೇಂದು ಮತ್ತು ಸಿಸಿಬಿ ಜಂಟಿ ಆಯುಕ್ತ ಸಂದೀಪ್​ ಪಾಟೀಲ್​ ಹಾಜರಿದ್ದಾರೆ.

ವಕೀಲ ಜಗದೀಶ್​ ಸ್ಪಷ್ಟನೆ
ತನಿಖಾಧಿಕಾರಿ ಜಡ್ಜ್​ ಸಮ್ಮುಖದಲ್ಲಿ ಸೆಕ್ಷನ್ 161 ಅಡಿ ಸಂತ್ರಸ್ತೆಯ ಹೇಳಿಕೆ ಪಡೆಯುವುದಕ್ಕೆ ಮನವಿ ಮಾಡಿದರು. ಅದರಂತೆ, ನಾವು ಅಂದರೆ ಯುವತಿಯ ಪರ ವಕೀಲರು ಒಪ್ಪಿಗೆ ಸೂಚಿಸಿದೆವು. ಅದರಂತೆ, ನಾವೇ ಸ್ವತಃ ಆಕೆಯನ್ನು ಆಡುಗೋಡಿಯ ಟೆಕ್ನಿಕಲ್​ ಸೆಲ್​ಗೆ ಕರೆದುಕೊಂಡು ಬಂದಿದ್ದೇವೆ. ಆಕೆ ಹೇಳಿಕೆ ನೀಡುವುದು ಮುಗಿಯುತ್ತಿದ್ದಂತೆ ಮತ್ತೆ ನಾವೇ ಆಕೆಯನ್ನು ಕರೆದುಕೊಂಡು ಹೋಗುತ್ತೇವೆ ಎಂದು ವಕೀಲ ಜಗದೀಶ್​ ಮಾಧ್ಯಮಗಳಿಗೆ ಸ್ಪಷ್ಟ ಪಡಿಸಿದರು.