ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಇಂದು ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಶನಿವಾರ ಎಸ್ಐಟಿ ಎದುರು ತಮ್ಮ ಸ್ನೇಹಿತರಾದ ಶ್ರವಣ್ ಮತ್ತು ನರೇಶ್ ಗೌಡ ವಿಚಾರಣೆಗೆ ಹಾಜರಾದ ಬಳಿಕ ಸಂತ್ರಸ್ತ ಯುವತಿ ಇಂದು ಅವರಿಬ್ಬರ ಪರ ಬ್ಯಾಟಿಂಗ್ ಮಾಡಿದ್ದಾರೆ. ಸಂತ್ರಸ್ತ ಯುವತಿಯು ಪ್ರಕರಣದ ಸಂಬಂಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರನ್ನು ಪ್ರಶ್ನಿಸಿದ್ದಾರೆ. ಅದರ ವಿರುದ್ಧ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೀಡಿರುವ ದೂರು ಮತ್ತು ತತ್ಸಂಬಂಧದ ತನಿಖೆ ಕಾನೂನುಬಾಹಿರ ಎಂದು ವಾದ ಮಂಡಿಸಿದ್ದಾರೆ. ಸಂತ್ರಸ್ತ ಯುವತಿಯ ಪರ ವಕೀಲ ಸಂಕೇತ್ ಏಣಗಿ ಹೈಕೋರ್ಟ್ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ವಾದ ಮಂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿವಾದಿ ರಮೇಶ್ ಜಾರಕಿಹೊಳಿಗೆ ಹೈಕೋರ್ಟ್ ನೋಟಿಸ್ ನೀಡಿದೆ. ಜೊತೆಗೆ ತನಿಖೆ ನಡೆಸುತ್ತಿರುವ ಎಸ್ಐಟಿ ಪರ ವಕೀಲರಿಗೂ ಹೈಕೋರ್ಟ್ ನೋಟಿಸ್ ನೀಡಿ, ವಿಚಾರಣೆಯನ್ನು ಜೂನ್ 21 ಕ್ಕೆ ಮುಂದೂಡಿದೆ.
ಇತ್ತೀಚೆಗಷ್ಟೇ ರಮೇಶ್ ಜಾರಕಿಹೊಳಿ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದ ಸಂತ್ರಸ್ತ ಯುವತಿಯು ಆರೋಪಿ ರಮೇಶ್ ಜಾರಕಿಹೊಳಿ ಅವರ ರಕ್ತ, ವೀರ್ಯ, ಉಗುರು, ಕೂದಲ ಸ್ಯಾಂಪಲ್ ಪಡೆದು ಎಸ್ಐಟಿ ತಂಡ ತನಿಖೆ ನಡೆಸುತ್ತಿಲ್ಲ. ಹಾಗಾಗಿ ಎಸ್ಐಟಿ ತನಿಖೆ ಮೇಲೆ ತಮಗೆ ನಂಬಿಕೆಯಿಲ್ಲ ಎಂದು ಹೈಕೋರ್ಟ್‌ಗೆ ಯುವತಿ ಅರ್ಜಿ ಸಲ್ಲಿಸಿದ್ದಾರೆ.
ಆರೋಪಿಗಳಾದ ನರೇಶ್-ಶ್ರವಣ್ ಎಸ್ಐಟಿ ಎದುರು ಹೇಳಿದ್ದೇನು?
ಸಂತ್ರಸ್ತ ಯುವತಿ ನನಗೆ ಕಾಲೇಜ್‌ನಲ್ಲಿ ಪರಿಚಯವಾಗಿದ್ರು. ಕಾಲೇಜಿನ ಪ್ರತಿಭಟನೆಯೊಂದರಲ್ಲಿ ಯುವತಿಯ ಪರಿಚಯವಾಯ್ತು. ನಾವು ಯಾರ ಬಳಿಯೂ ಹಣಕ್ಕೆ ಡಿಮ್ಯಾಂಡ್ ಮಾಡಿಲ್ಲ. ಸಚಿವರಿಂದ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದಿದ್ದಳು. ಮಾಧ್ಯಮದಲ್ಲಿದ್ದ ಕಾರಣ ನ್ಯಾಯ ಕೊಡಿಸಲು ಮುಂದಾಗಿದ್ವಿ ಎಂದು ಎಸ್ಐಟಿ ಅಧಿಕಾರಿಗಳ ಮುಂದೆ ಆರೋಪಿ ಶ್ರವಣ್ ಹೇಳಿಕೆ ನೀಡಿದ್ದಾರೆ.
ಮಾಜಿ ಮಂತ್ರಿಯ ಸಿ.ಡಿ. ವಿಡಿಯೋ ಬಗ್ಗೆ ನನಗೇನು ಗೊತ್ತಿಲ್ಲ ಎಂದು ನರೇಶ್ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ಮುಂದೆ ಹೇಳಿದ್ದಾರೆ. ಇನ್ನು ಸಂತ್ರಸ್ತ ಯುವತಿ ಪರಿಚಯವಾಗಿದ್ದು ಹೇಗೆ..? ಎಲ್ಲಿ..? ಎಂಬ ಬಗ್ಗೆ ನರೇಶ್ ಹೇಳಿಕೊಂಡಿದ್ದಾರೆ. ಯುವತಿ ನನಗೆ ಶ್ರವಣ್ ಮತ್ತು ಓರ್ವ ಯುವತಿ ಮುಖಾಂತರ ಪರಿಚಯವಾಗಿತ್ತು. ಆಕೆಗೆ ಅನ್ಯಾಯವಾಗಿದೆ ಅಂತ ನನ್ನ ಬಳಿ ಬಂದಿದ್ದರು. ನನ್ನನ್ನು ಆಕೆ ಅಣ್ಣ ಎಂದು ಸಹ ಕರೆಯುತಿದ್ದರು ಎಂದು ನರೇಶ್ ಎಸಿಪಿ ಧರ್ಮೇಂದ್ರ ಅವರಿಗೆ ಮಾಹಿತಿ ನೀಡಿದ್ದಾರೆ.
ಮುಂದುವರಿದು ಪ್ರಕರಣದ ನಾನಾ ಮಜಲುಗಳನ್ನು ತೆರೆದಿಟ್ಟಿರುವ ನರೇಶ್… ಪ್ರಭಾವಿಯೊಬ್ಬರು ನನಗೆ ಅನ್ಯಾಯಾ ಮಾಡಿದ್ದಾರೆ. ನನಗೆ ಮೊಸ ಮಾಡಿದ್ದಾರೆ ಅಣ್ಣ ಅಂತ ಬಂದಿದ್ದರು. ಜೊತೆಗೆ ನನಗೆ ನ್ಯಾಯಾ ಕೊಡಿಸಿ ಅಣ್ಣ ಎಂದಿದ್ದಳು. ಅಲ್ಲದೇ ಆ ಪ್ರಭಾವಿ ವ್ಯಕ್ತಿಗೆ ಬುದ್ಧಿ ಕಲಿಸಬೇಕು ಅಣ್ಣ ಎಂದಿದ್ದಳು. ನಾನು ಮೀಡಿಯಾದಲ್ಲಿ ಕೆಲಸ ಮಾಡುತಿರುವುದಕ್ಕೆ ಆಕೆ ನನ್ನ ಬಳಿ ಹೇಳಿಕೊಂಡಿದ್ದಳು. ಆದರೆ ಆಕೆಯ ಹೇಳಿಕೆ ವಿಚಾರ ಬಿಟ್ಟು ವಿಡಿಯೋ ಬಗ್ಗೆ, ಯಾವುದೇ ವಸೂಲಿ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ನರೇಶ್ ಹೇಳಿದ್ದಾರೆ.
ಹೌದು, ನನಗೆ ಹಲವರ ಕಾಟ್ಯಾಂಕ್ಟ್ ಇದೆ. ನಾನು ಮಾಧ್ಯಮದಲ್ಲಿ ಕೆಲಸ ಮಾಡುತಿದ್ದೆ. ಹೀಗಾಗಿ ನಾನು ಹಲವರನ್ನು ಸಂಪರ್ಕ ಮಾಡಿದ್ದೇನೆ. ಸುದ್ದಿಗಳ ಸಂಬಂಧವಾಗಿ ಹಲವು ಗಣ್ಯರ ಸಂಪರ್ಕ ಮಾಡಿದ್ದೇನೆ. ಮಿನಿಸ್ಟರ್ ಗಳು, ಎಂಎಲ್ಎಗಳು ಹಾಗೂ ಹಲವರನ್ನು ಹಲವು ಬಾರಿ ಸಂಪರ್ಕ ಮಾಡಿದ್ದೇನೆ. ಆದರೆ ವಿಡಿಯೋ ಬಗ್ಗೆ ನನಗೆ ಏನು ಗೊತ್ತಿಲ್ಲ. ವಸೂಲಿ ವಿಚಾರವೂ ಗೊತ್ತಿಲ್ಲ ಎಂದು ನರೇಶ್ ಇದೇ ವೇಳೆ ಸ್ಪಷ್ಟ ನುಡಿಗಳಲ್ಲಿ ಎಸ್ಐಟಿ ಅಧಿಕಾರಿಗೆ ತಿಳಿಸಿದ್ದಾರೆ.
(ramesh jarkiholi complaint not valid pleads woman in cd case in high court)
ರಮೇಶ್ ಜಾರಕಿಹೊಳಿ ರಕ್ತ, ವೀರ್ಯ, ಉಗುರು, ಕೂದಲ ಸ್ಯಾಂಪಲ್ ಪಡೆದು ತನಿಖೆ ನಡೆಸಿಲ್ಲ: ಹೈಕೋರ್ಟ್‌ಗೆ ಯುವತಿಯಿಂದ ಅರ್ಜಿ
Published On - 11:44 am, Mon, 14 June 21