ಬೆಂಗಳೂರು: ಇಂದು ಸಂಜೆ (ಜೂನ್ 26) ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಿರಿಯ ಕೈ ನಾಯಕರ ಜೊತೆ ವೀಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾಗಲಿದ್ದಾರೆ. ಸಂಜೆ ನಾಲ್ಕು ಘಂಟೆಗೆ ನಡೆಯುವ ಸಭೆಯಲ್ಲಿ ಸರಣಿ ಪ್ರತಿಭಟನೆ, ಸರಣಿ ಪತ್ರಿಕಾಗೋಷ್ಟಿ ಮೂಲಕ ಸರ್ಕಾರದ ವಿರುದ್ಧ ನಡೆಸಿರುವ ಹೋರಾಟಗಳ ಬಗ್ಗೆ ರಣದೀಪ್ ಸಿಂಗ್ ಸುರ್ಜೇವಾಲಾ ಮಾಹಿತಿ ಪಡೆಯಲಿದ್ದಾರೆ. ಜೊತೆಗೆ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಹೇಳಿಕೆ ವಿಚಾರ ಚರ್ಚೆಯಾಗುವ ಸಾಧ್ಯತೆಯಿದೆ.
ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕುವ ಸಂಬಂಧ ಸುರ್ಜೇವಾಲಾ ಸೂಚನೆ ನೀಡಬಹುದು. ಈ ವೇಳೆ ಸಿಎಂ ವಿಚಾರದ ಬಗ್ಗೆ ಸಭೆಯಲ್ಲಿ ಹಿರಿಯ ನಾಯಕರಿಂದ ಅಸಮಾಧಾನ ಸ್ಫೋಟವಾಗಬಹುದು. ಕಳೆದ ಬಾರಿಯ ಸುರ್ಜೇವಾಲಾ ವಿಡಿಯೋ ಕಾನ್ಫರೆನ್ಸ್ನಲ್ಲಿ ಕೆಲವು ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯವೈಖರಿ ಬಗ್ಗೆ ಕೆಲ ನಾಯಕರು ಅಸಮಾಧಾನ ಹೊರಹಾಕಿದ್ದರು.
ಇದೀಗ ಈ ಬಾರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮೇರೆಗೆ ಸುರ್ಜೇವಾಲಾ ಕೆಲ ನಾಯಕರ ಹೇಳಿಕೆಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಲಿದ್ದಾರೆ. ಹೀಗಾಗಿ ಇಂದು ನಡೆಯುವ ಸುರ್ಜೇವಾಲಾ ವಿಡಿಯೋ ಕಾನ್ಫರೆನ್ಸ್ ಸಾಕಷ್ಟು ಕುತೂಹಲ ಮೂಡಿಸಿದೆ.
ಕೂಸೂ ಹುಟ್ಟಲ್ಲ, ಕುಲಾವಿ ಹೊಲಿಸುವ ಸಂದರ್ಭವೂ ಬರಲ್ಲ; ಲಕ್ಷ್ಮಣ ಸವದಿ
ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಅಭ್ಯರ್ಥಿಗಾಗಿ ಕಿತ್ತಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸೋದು ಇತ್ತೀಚಿನ ದಿನಗಳಲ್ಲಿ ನಡಿಯುತ್ತಿದೆ. ಕಾಂಗ್ರೆಸ್ ಪಕ್ಷದವರಿಗೆ ಕೂಸೂ ಹುಟ್ಟುವುದಿಲ್ಲ. ಕುಲಾವಿ ಹೊಲಿಸುವ ಸಂದರ್ಭವೂ ಅವರಿಗೆ ಬರುವುದಿಲ್ಲ. ಬೇರೆ ಪಕ್ಷದ ಬಗ್ಗೆ ನಾವು ಚರ್ಚೆ ಮಾಡುವುದು ಸೂಕ್ತ ಅಲ್ಲ. 2023ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದಿದ್ದಾರೆ.
ಕೃಷಿ ಸಚಿವ ಬಿ.ಸಿ. ಪಾಟೀಲ್ ಕಾರು ರಸ್ತೆ ಮಧ್ಯೆ… ಕೆಸರಿನಲ್ಲಿ ಸಿಲುಕಿದ ಪ್ರಸಂಗ ಉಡುಪಿ ಬಳಿ ನಡೆದಿದೆ!
(Randeep Singh Surjewala will hold a meeting with Congress leaders)
Published On - 1:57 pm, Sat, 26 June 21