ಕೃಷಿ ಸಚಿವ ಬಿ.ಸಿ. ಪಾಟೀಲ್ ಕಾರು ರಸ್ತೆ ಮಧ್ಯೆ… ಕೆಸರಿನಲ್ಲಿ ಸಿಲುಕಿದ ಪ್ರಸಂಗ ಉಡುಪಿ ಬಳಿ ನಡೆದಿದೆ!
BC Patil: ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಕಾರು ರಸ್ತೆ ಮಧ್ಯೆ ಕೆಸರಿನಲ್ಲಿ ಸಿಲುಕಿಕೊಂಡು ಸಚಿವರು ಪಡಿಪಾಟಲು ಪಟ್ಟ ಪ್ರಸಂಗ ಉಡುಪಿಯ ಕಡೆಕಾರು ಬಳಿಯ ರಸ್ತೆಯಲ್ಲಿ ನಡೆದಿದೆ. ಕೆಸರಿನಲ್ಲಿ ಕಾರು ಸಿಲುಕಿ ಪರದಾಡಿದ ಸಚಿವ ಬಿ.ಸಿ.ಪಾಟೀಲ್ ಅವರ ನೆರವಿಗೆ ಸ್ಥಳೀಯ ಯುವಕರು ಮುಂದಾಗಿದ್ದಾರೆ.
ಉಡುಪಿ: ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಅಧಿಕೃತ ಕಾರು ರಸ್ತೆ ಮಧ್ಯೆ ಕೆಸರಿನಲ್ಲಿ ಸಿಲುಕಿಕೊಂಡು ಸಚಿವರು ಪಡಿಪಾಟಲು ಪಟ್ಟ ಪ್ರಸಂಗ ಉಡುಪಿಯ ಕಡೆಕಾರು ಬಳಿಯ ರಸ್ತೆಯಲ್ಲಿ ನಡೆದಿದೆ. ಕೆಸರಿನಲ್ಲಿ ಇನ್ನೋವಾ ಕಾರು ಸಿಲುಕಿ ಪರದಾಡಿದ ಸಚಿವ ಬಿ.ಸಿ.ಪಾಟೀಲ್ ಅವರ ನೆರವಿಗೆ ಸ್ಥಳೀಯ ಯುವಕರು ಮುಂದಾಗಿದ್ದಾರೆ. ಕೊನೆಗೂ, ಕೆಸರಿನಲ್ಲಿ ಹೂತು ಹೋದ ಸಚಿವ ಪಾಟೀಲರ ಕಾರನ್ನು ಯುವಕರು ಮೇಲೆತ್ತಿದರು.
ಇತ್ತೀಚೆಗೆ ಜಿಲ್ಲೆಯಲ್ಲಿ ಮುಂಗಾರು ಆರ್ಭಟ ಜೋರಾಗಿದ್ದು, ಈ ಭಾಗದಲ್ಲಿ ಭಾರಿ ಮಳೆಯಾಗಿತ್ತು. ಹಾಗಾಗಿ ಗದ್ದೆ ರಸ್ತೆ ತೇವಗೊಂಡಿತ್ತು ಎಂದು ತಿಳಿದುಬಂದಿದೆ. ಕೆಸರಿನಿಂದ ಕಾರು ಮೇಲೆತ್ತಲು ಸಚಿವ ಪಾಟೀಲ್ ಪರದಾಡಿದರು. ಕೃಷಿ ಚಟುವಟಿಕೆ ಭಾಗಿಯಾಗಿದ್ದ ಯುವಕರು ಸಹಾಯಕ್ಕೆ ಬಂದಿದ್ದಾರೆ. ಅಂದಹಾಗೆ ಕೃಷಿ ಸಚಿವ ಪಾಟೀಲ್ ಅವರು ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮಕ್ಕೆ ಹೊರಟಿದ್ದರು. ಕೇದಾರೋತ್ಥಾನ ಬೇಸಾಯ ಅಭಿಯಾನಕ್ಕೆ ಬಂದಿದ್ದ ಸಚಿವ ಬಿಸಿ ಪಾಟೀಲ್ ಎರಡು ಸಾವಿರ ಎಕ್ರೆ ಹಡಿಲು ಜಾಮೀನು ನಾಟಿ ಕಾರ್ಯದಲ್ಲಿ ಭಾಗಿಯಾದರು.
(agriculture minister BC Patil car slides on mud road near udupi)
ರೈತರನ್ನು ಭಯೋತ್ಪಾದಕರಿಗೆ ಹೋಲಿಸಿದ್ದಕ್ಕೆ..ಕೃಷಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ದೂರು ಸಲ್ಲಿಕೆ
Published On - 1:07 pm, Sat, 26 June 21