ಜಗಳೂರು: ದಿದ್ದಿಗಿ ಗ್ರಾಮ ಪಂಚಾಯತಿ ಹುದ್ದೆಗೆ ಲಕ್ಷ ಲಕ್ಷ ಲಂಚ… ಆಡಿಯೋ ವೈರಲ್​ ಆಯ್ತು

TV9 Digital Desk

| Edited By: ಸಾಧು ಶ್ರೀನಾಥ್​

Updated on: Jun 26, 2021 | 12:39 PM

Diddigi gram panchayat bribe audio viral: ನೀರಗಂಟಿ ಹುದ್ದೆಗೆ 8 ರಿಂದ 10 ಲಕ್ಷ ಕೊಟ್ಟು ಎಂಎ, ಎಂಇಡಿ ಓದಿದವರೇ ಬರೋಕೆ ರೆಡಿ ಇದ್ದಾರೆ ಎಂದು ರಾಜರೋಷವಾಗಿ ಆರೋಪಿಗಳು ಲಂಚದ ಬೇಡಿಕೆ ಮಂಡಿಸುತ್ತಾರೆ. ಈ ಲಂಚದ ಮೊತ್ತ ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಕೊಡಬೇಕು. ನನಗೆ 20 ಸಾವಿರ ಅಷ್ಟೇ ಎಂದೂ ಪಿಡಿಓ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಲಂಚದ ವಿವರಣೆ ಕೊಟ್ಟಿದ್ದಾನೆ.

ಜಗಳೂರು: ದಿದ್ದಿಗಿ ಗ್ರಾಮ ಪಂಚಾಯತಿ ಹುದ್ದೆಗೆ ಲಕ್ಷ ಲಕ್ಷ ಲಂಚ... ಆಡಿಯೋ ವೈರಲ್​ ಆಯ್ತು
ಜಗಳೂರು: ದಿದ್ದಿಗಿ ಗ್ರಾಮ ಪಂಚಾಯತಿ ಹುದ್ದೆಗೆ ಲಕ್ಷ ಲಕ್ಷ ಲಂಚ... ಆಡಿಯೋ ವೈರಲ್​ ಆಯ್ತು

ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ದಿದ್ದಿಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಭಾರ ಪಿಡಿಓ ಹಾಗೂ ಗ್ರಾಮ ಪಂಚಾಯತಿ ಕಾರ್ಯದರ್ಶಿ ಸಿಹೆಚ್ ಶ್ರೀನಿವಾಸ್, ಉಚ್ವಂಗಿಪುರದ ಸದಸ್ಯ ಬಾಲರಾಜ್ ಅವರುಗಳು ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಕೇಳಿಬಂದಿದೆ. ನೀರಗಂಟೆ ಹುದ್ದೆಗೆ ಅಂಜಿನಪ್ಪ ಎನ್ನುವವರ ಬಳಿ 1 ಲಕ್ಷ 60 ಸಾವಿರ ಹಣ ನೀಡುವಂತೆ ಇವರುಗಳು ಬೇಡಿಕೆಯಿಟ್ಟಿದ್ದಾರೆ. ಇದು ಆಡಿಯೋ ರೂಪದಲ್ಲಿ ದಾಖಲಾಗಿದ್ದು, ನೀರಗಂಟಿ ಹುದ್ದೆಗೆ ಲಕ್ಷ ಲಕ್ಷ ಲಂಚದ ಬೇಡಿಕೆಯ ಆಡಿಯೋ ಕೇಳಿ ಜನ ಹುಬ್ಬೇರಿಸಿದ್ದಾರೆ.

ಲಕ್ಷಾಂತರ ರೂಪಾಯಿ ನೀಡಿದರೆ ಅದೇಶ ಪತ್ರ ಕೊಡಿಸುವುದಾಗಿ ಪಿಡಿಓ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಹೇಳಿರುವುದು ಆಡಿಯೋದಲ್ಲಿದೆ. ಅದಕ್ಕೆ ಎರಡು ವರ್ಷಗಳಿಂದ ಸಂಬಳವಿಲ್ಲದೆ ಕೆಲಸ ಮಾಡುತ್ತಿದ್ದೇನೆ. ಈಗ ಲಕ್ಷಾಂತರ ರೂಪಾಯಿ ಹೇಗೆ ಜೋಡಿಸಲಿ. ಮನೆಯಲ್ಲಿ ಹೆಂಡತಿ ಮಕ್ಕಳು ಉಪವಾಸ ಇರ್ತಾರೆ. ಹಣ ಜೋಡಿಸಲು ಸಾಧ್ಯವಿಲ್ಲ ಎಂದು ಹುದ್ದೆಯ ಆಕಾಂಕ್ಷಿ ಅಂಜಿನಪ್ಪ ತನ್ನ ಅಳಲು ತೋಡಿಕೊಂಡಿದ್ದಾನೆ.

ನೀರಗಂಟಿ ಹುದ್ದೆಗೆ 8 ರಿಂದ 10 ಲಕ್ಷ ಕೊಟ್ಟು ಎಂಎ, ಎಂಇಡಿ ಓದಿದವರೇ ಬರೋಕೆ ರೆಡಿ ಇದ್ದಾರೆ ಎಂದು ರಾಜರೋಷವಾಗಿ ಆರೋಪಿಗಳು ಲಂಚದ ಬೇಡಿಕೆ ಮಂಡಿಸುತ್ತಾರೆ. ಈ ಲಂಚದ ಮೊತ್ತ ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಕೊಡಬೇಕು. ನನಗೆ 20 ಸಾವಿರ ಅಷ್ಟೇ ಎಂದೂ ಪಿಡಿಓ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಲಂಚದ ವಿವರಣೆ ಕೊಟ್ಟಿದ್ದಾನೆ. ನೀರಗಂಟಿ ಹುದ್ದೆಗೆ ಹೀಗೆ ಲಂಚದ ಡೀಲಿಂಗ್ ರಾಜರೋಷವಾಗಿ ನಡೆದಿರುವ ಪಿಡಿಒ ಡೀಲಿಂಗ್ ಅಡಿಯೋ ಜಿಲ್ಲೆಯಲ್ಲಿ ವೈರಲ್ ಆಗಿದೆ.

(diddigi gram panchayat bribe audio goes viral in davangere district)

ಕೊವಿಡ್​ ಆತಂಕದ ಜೊತೆಗೆ ರಾಜ್ಯದಲ್ಲಿ ಅಪರೂಪದ ಎನೆಕ್ ಕಾಯಿಲೆ ಬಾಲಕನಲ್ಲಿ ಪತ್ತೆ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada