ಕೊರೊನಾ ರೂಪಾಂತರ ವೈರಸ್ಗಳಲ್ಲೆಲ್ಲ ಡೆಲ್ಟಾ ವೈರಾಣು ತುಂಬ ವೇಗವಾಗಿ ಹರಡಬಲ್ಲದು, ಅಪಾಯಕಾರಿಯೂ ಹೌದು: ವಿಶ್ವ ಆರೋಗ್ಯ ಸಂಸ್ಥೆ
ಸದ್ಯ ಕೊರೊನಾದ ನಾಲ್ಕು ರೂಪಾಂತರಗಳಾದ ಅಲ್ಪಾ, ಬೀಟಾ, ಗಾಮಾ ಮತ್ತು ಡೆಲ್ಟಾ ವೈರಾಣುಗಳು ಜಗತ್ತಿನಾದ್ಯಂತ ಪ್ರಸರಣಗೊಳುತ್ತಿವೆ. ಆದರೆ ಇವೆಲ್ಲವುಗಳಲ್ಲಿ ಡೆಲ್ಟಾ ಅತ್ಯಂತ ಅಪಾಯಕಾರಿ ಎಂದು ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ವಿಶ್ವಸಂಸ್ಥೆ: ಇದುವರೆಗೆ ಪತ್ತೆಯಾದ ಕೊರೊನಾ ರೂಪಾಂತರಿ ತಳಿಗಳಲ್ಲಿ ಡೆಲ್ಟಾ ಅತ್ಯಂತ ವೇಗವಾಗಿ ಹರಡಬಲ್ಲ ವೈರಾಣು ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO)ಯ ಜನರಲ್ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ. ಈಗಿರುವ ರೂಪಾಂತರಿ ತಳಿಗಳ ಪೈಕಿ ಡೆಲ್ಟಾ ಅತ್ಯಂತ ಅಪಾಯಕಾರಿಯಾಗಿದೆ. ಇನ್ನೂ ಲಸಿಕೆ ಪಡೆಯದವರಿಗೆ ಅತ್ಯಂತ ವೇಗವಾಗಿ ಹರಡುತ್ತಿದೆ ಎಂದು ಅವರು ತಿಳಿಸಿದ್ದಾರೆ. ಡೆಲ್ಟಾ ರೂಪಾಂತರಿ ಬಗ್ಗೆ ಈಗ ಸಹಜವಾಗಿಯೇ ಆತಂಕ ಶುರುವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ವೈರಾಣು ಆತಂಕ ತಂದಿದೆ ಎಂದು ಶುಕ್ರವಾರ ಜಿನಿವಾದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ. ಡೆಲ್ಟಾ ರೂಪಾಂತರಿ ವೈರಾಣು ಮೊದಲು ಭಾರತದಲ್ಲಿ ಕಾಣಿಸಿಕೊಂಡಿದ್ದು, ಇದೀಗ 85 ದೇಶಗಳಲ್ಲಿ ಪತ್ತೆಯಾಗಿದೆ.
ಸದ್ಯ ಕೊರೊನಾದ ನಾಲ್ಕು ರೂಪಾಂತರಗಳಾದ ಅಲ್ಪಾ, ಬೀಟಾ, ಗಾಮಾ ಮತ್ತು ಡೆಲ್ಟಾ ವೈರಾಣುಗಳು ಜಗತ್ತಿನಾದ್ಯಂತ ಪ್ರಸರಣಗೊಳುತ್ತಿವೆ. ಆದರೆ ಇವೆಲ್ಲವುಗಳಲ್ಲಿ ಡೆಲ್ಟಾ ಅತ್ಯಂತ ಅಪಾಯಕಾರಿ. ಅಲ್ಪಾ ವೈರಾಣುವಿಗಿಂತಲೂ ವೇಗವಾಗಿ ಹರಡುತ್ತಿದೆ ಎಂದು ಘೆಬ್ರೆಯೆಸಸ್ ಹೇಳಿದ್ದಾರೆ. ಸದ್ಯ ಅಲ್ಪಾ ಯುರೋಪ್ ದೇಶಗಳಲ್ಲಿ ದೊಡ್ಡ ತಲೆನೋವಾಗಿದ್ದು, ತುಂಬ ವೇಗವಾಗಿ ಪ್ರಸರಣ ಆಗುತ್ತಿದೆ ಎನ್ನಲಾಗಿದ್ದು, ಡೆಲ್ಟಾ ಅದಕ್ಕಿಂತಲೂ ಡೇಂಜರ್ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಅಭಿಪ್ರಾಯಪಟ್ಟಿದೆ.
ಇರುವುದರಲ್ಲಿ ಕೊವಿಡ್ 19 ಲಸಿಕೆ ಹಾಕಿಸಿಕೊಂಡರವಿಗೆ ಡೆಲ್ಟಾ ಅಷ್ಟೊಂದು ಬಾಧಿಸುತ್ತಿಲ್ಲ. ಡೆಲ್ಟಾದಿಂದ ಬಾಧಿಸಬಹುದಾದ ತೀವ್ರ ಮಟ್ಟದ ಕಾಯಿಲೆಗಳು, ಸಾವನ್ನು ನಿಯಂತ್ರಿಸಲು ಕೊವಿಡ್ 19 ಲಸಿಕೆಗಳು ಅತ್ಯಂತ ಪರಿಣಾಮಕಾರಿಯಾಗಿದೆ. ವೈರಾಣು ವಿಕಾಸ ನಡೆಯುತ್ತಲೇ ಇರುತ್ತದೆ. ಆದರೆ ನಾವೀಗ ಬೇಕಾದಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ನಮ್ಮ ಸಾರ್ವಜನಿಕ ಆರೋಗ್ಯ, ಸಾಮಾಜಿಕ ನಿಯಂತ್ರಣ ಕ್ರಮಗಳು, ನಮ್ಮ ಲಸಿಕೆ ಅಭಿಯಾನಗಳು ಕೊರೊನಾ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇದನ್ನೂ ಓದಿ: ಕೆಜಿಎಫ್ ಗರುಡನ ಹೊಸ ಲುಕ್ ನೋಡಿದ್ರಾ? ‘ಮಹಾ ಸಮುದ್ರಂ’ ಮಹಾ ರಾಕ್ಷಸ