ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್​ ದೇಶಮುಖ್​ಗೆ ಇ.ಡಿ.ಯಿಂದ ಸಮನ್ಸ್​; ಆಪ್ತರಿಬ್ಬರ ಬಂಧನ

ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಕೆಲವೇ ತಿಂಗಳುಗಳಲ್ಲಿ ಸುಮಾರು 12 ಬಾರ್​ ಮಾಲೀಕರಿಂದ 4 ಕೋಟಿ ರೂಪಾಯಿ ಸುಲಿಗೆ ಮಾಡಿದ್ದರು. ಆ ಹಣ ನಂತರ ಬೇರೆ ಪ್ರದೇಶಗಳಲ್ಲಿರುವ (ಮಹಾರಾಷ್ಟ್ರದಲ್ಲಿ ಇಲ್ಲದ) ಕೆಲವು ಶೆಲ್​ ಕಂಪನಿಗಳ ಮೂಲಕ ಅನಿಲ್​ ದೇಶಮುಖ್​ ಕೈಸೇರಿದೆ ಎಂದು ಇ.ಡಿ.ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್​ ದೇಶಮುಖ್​ಗೆ ಇ.ಡಿ.ಯಿಂದ ಸಮನ್ಸ್​; ಆಪ್ತರಿಬ್ಬರ ಬಂಧನ
ಅನಿಲ್​ ದೇಶ್​ಮುಖ್​
Follow us
TV9 Web
| Updated By: Lakshmi Hegde

Updated on: Jun 26, 2021 | 11:31 AM

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್​ ದೇಶಮುಖ್​​ರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್​ ನೀಡಿದ್ದು, ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಅಷ್ಟೇ ಅಲ್ಲದೆ, ಇ.ಡಿ. ಶುಕ್ರವಾರ ಅನಿಲ್​ ದೇಶಮುಖ್​​ ಖಾಸಗಿ ಸಹಾಯಕ ಕುಂದನ್​ ಶಿಂಧೆ ಮತ್ತು ವೈಯಕ್ತಿಕ ಕಾರ್ಯದರ್ಶಿ ಸಂಜೀವ ಪಾಲಂದೆ ಅವರನ್ನು ಬಂಧಿಸಿದೆ. ಇವರಿಬ್ಬರನ್ನೂ ಬಂಧಿಸುವುದಕ್ಕೂ ಮೊದಲು, ಸುಮಾರು 9 ಸುತ್ತುಗಳ ವಿಚಾರಣೆ ನಡೆಸಿತ್ತು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಇಬ್ಬರನ್ನೂ ಅರೆಸ್ಟ್ ಮಾಡಲಾಗಿದೆ. ಇವರಿಬ್ಬರನ್ನು ಇಂದು ವಿಶೇಷ ಕೋರ್ಟ್​ಗೆ ಹಾಜರುಪಡಿಸಲಿದೆ.

ಶುಕ್ರವಾರ ಬೆಳಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಾಗ್ಪುರ, ಮುಂಬೈನ ವರ್ಲಿ ಮತ್ತು ಮಲ್ಬಾರ್​ನಲ್ಲಿರುವ ದೇಶಮುಖ್​ ನಿವಾಸಗಳ ಮೇಲೆ ದಾಳಿ ನಡೆಸಿದ್ದರು. ಅದೇ ಸಮಯದಲ್ಲಿ ಶಿಂಧೆ ಮತ್ತು ಪಾಲಂದೆ ನಿವಾಸದ ಮೇಲೆ ಕೂಡ ರೇಡ್​ ಮಾಡಿದ್ದರು. ಇಡಿ ಅಧಿಕಾರಿಗಳು ರೇಡ್​ ಮಾಡುವ ಸಂದರ್ಭದಲ್ಲಿ ಅನಿಲ್ ದೇಶಮುಖ್​ ಮತ್ತು ಅವರ ಒಬ್ಬ ಪುತ್ರ ವರ್ಲಿಯಲ್ಲಿರುವ ನಿವಾಸದಲ್ಲಿ ಇದ್ದರು. ದಾಳಿ ಮುಗಿಯುತ್ತಿದ್ದಂತೆ ಅನಿಲ್​ ದೇಶಮುಖ್​ ಅವರ ಖಾಸಗಿ ಸಹಾಯಕ ಮತ್ತು ವೈಯಕ್ತಿಕ ಕಾರ್ಯದರ್ಶಿ ಇಬ್ಬರನ್ನೂ ದಕ್ಷಿಣ ಮುಂಬೈನಲ್ಲಿರುವ ಇಡಿ ಕಚೇರಿಗೆ ಕರೆದುಕೊಂಡು ಹೋಗಲಾಗಿತ್ತು.

ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಕೆಲವೇ ತಿಂಗಳುಗಳಲ್ಲಿ ಸುಮಾರು 12 ಬಾರ್​ ಮಾಲೀಕರಿಂದ 4 ಕೋಟಿ ರೂಪಾಯಿ ಸುಲಿಗೆ ಮಾಡಿದ್ದರು. ಆ ಹಣ ನಂತರ ಬೇರೆ ಪ್ರದೇಶಗಳಲ್ಲಿರುವ (ಮಹಾರಾಷ್ಟ್ರದಲ್ಲಿ ಇಲ್ಲದ) ಕೆಲವು ಶೆಲ್​ ಕಂಪನಿಗಳ ಮೂಲಕ ಅನಿಲ್​ ದೇಶಮುಖ್​ ಕೈಸೇರಿದೆ ಎಂದು ಇ.ಡಿ.ಮೂಲಗಳು ತಿಳಿಸಿವೆ. ಆ ಕಂಪನಿಗಳು ಅನಿಲ್​ ದೇಶಮುಖ್​ ಅವರ ಹತ್ತಿರದ ಸಂಬಂಧಿಗಳದ್ದೇ ಎಂದು ಹೇಳಲು ಪುರಾವೆಗಳೂ ಇವೆ. ಸದ್ಯ ಅನಿಲ್​ ದೇಶಮುಖ್​ರನ್ನು ಬಂಧಿಸಲು ಅಗತ್ಯವಿರುವಷ್ಟು ಸಾಕ್ಷಿ ಇ.ಡಿ. ಬಳಿ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಕೊವಿಡ್​ ಆತಂಕದ ಜೊತೆಗೆ ರಾಜ್ಯದಲ್ಲಿ ಅಪರೂಪದ ಎನೆಕ್ ಕಾಯಿಲೆ ಬಾಲಕನಲ್ಲಿ ಪತ್ತೆ!

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ