ಯಾವ್ಯಾವ ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್‌ ಎಷ್ಟೆಷ್ಟು ಹಾಕಲಾಗಿದೆ? ಎಡವುತ್ತಿರುವ ಆರೋಗ್ಯ ಇಲಾಖೆ: ಇಲ್ಲಿದೆ ಮಾಹಿತಿ

|

Updated on: Apr 28, 2021 | 12:51 PM

ಕಳೆದೊಂದು ತಿಂಗಳಿನಿಂದ ವ್ಯಾಕ್ಸಿನೇಷನ್‌ ಮತ್ತೆ ಡಿಮ್ಯಾಂಡ್ ಹೆಚ್ಚಾಗಿದೆ. ಆರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಎಷ್ಟೇ ಬೊಬ್ಬೆ ಹೊಡೆದರು ಜನ ಹಿಂದೇಟು ಹಾಕ್ತಿದ್ರು. ಲಸಿಕೆಯಿಂದಾಗಿ ಸೈಡ್ ಎಫೆಕ್ಟ್ ಆಗಬಹುದು ಅನ್ನೋ ಭೀತಿಯಲ್ಲಿದ್ರು. ಆದ್ರೆ ಕಳೆದೊಂದು ತಿಂಗಳಿನಿಂದ ಲಸಿಕೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಅಂತಾ ಇದೀಗ ಮುಗಿಬೀಳ್ತಿದ್ದಾರೆ.

ಯಾವ್ಯಾವ ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್‌ ಎಷ್ಟೆಷ್ಟು ಹಾಕಲಾಗಿದೆ? ಎಡವುತ್ತಿರುವ ಆರೋಗ್ಯ ಇಲಾಖೆ: ಇಲ್ಲಿದೆ ಮಾಹಿತಿ
ಕೊರೊನಾ ಲಸಿಕೆ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಮಿತಿ ಮೀರಿದೆ. ಸದ್ಯ ಪ್ರತಿ ಜಿಲ್ಲೆಯಲ್ಲೂ ಮೊದಲ ಡೋಸ್ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದೆ. ಆದರೆ ಎರಡನೇ ಡೋಸ್ ಪಡೆಯುವವರ ಸಂಖ್ಯೆ ಬಹಳ ಕಡಿಮೆ ಇದೆ. ಅಂಕಿ ಅಂಶಗಳ ಲೆಕ್ಕಾಚಾರದ ಪ್ರಕಾರ ಕಂಪ್ಲೀಟ್ ಡೋಸ್ ಸಂಪೂರ್ಣಗೊಳಿಸುವುದರಲ್ಲಿ ಶೇಖಡ 20 ರಷ್ಟೂ ಪ್ರಗತಿ ಆಗಿಲ್ಲ. ಹಾಗಾದ್ರೆ ಜಿಲ್ಲಾವಾರು ಮೊದಲ ಡೋಸ್ ಮತ್ತು ಎರಡನೇ ಡೋಸ್ ಅಂಕಿಅಂಶ ಇಲ್ಲಿದೆ.

ಆಯಾ ಜಿಲ್ಲೆಯ ಜನಸಂಖ್ಯೆ ಎಷ್ಟು?
ಜಿಲ್ಲಾವಾರು ಜನಸಂಖ್ಯೆ ಅಂಕಿ ಅಂಶವನ್ನ ಆರೋಗ್ಯ ಇಲಾಖೆ ಸ್ಪಷ್ಟವಾಗಿ ನೀಡ್ತಿಲ್ಲ. ಬದಲಿಗೆ ಮೊದಲ ಡೋಸ್ ಹಾಗೂ ಎರಡನೇ ಡೋಸ್ ಎಷ್ಟು ಪ್ರಮಾಣದಲ್ಲಿ ಪೂರ್ಣಗೊಳಿಸಿದ್ದೇವೆ ಅನ್ನೋ ಲೆಕ್ಕಚಾರ ನೀಡ್ತಿದೆ.

ಜಿಲ್ಲಾವಾರು ಮೊದಲ ಡೋಸ್- ಎರಡನೇ ಡೋಸ್ ಅಂಕಿಅಂಶ
1. ಬೆಳಗಾಂ = 212146-10424
2. ಬೆಂಗಳೂರು ನಗರ = 78456-5784
3. ಮೈಸೂರು = 276044-8000
4. ಗುಲ್ಬರ್ಗ = 8845-7481
5. ಚಿತ್ರದುರ್ಗ = 84217-5902
6. ದಕ್ಷಿಣ ಕನ್ನಡ = 95695-3279
7. ಬಾಗಲಕೋಟೆ = 109185-7938
8. ಚಾಮರಾಜನಗರ = 51952-1711
9. ಬೀದರ್ = 67521-8403
10. ಚಿಕ್ಕಮಗಳೂರು = 75181-184
11. ಬಳ್ಳಾರಿ = 170143-1352
12. ದಾವಣಗೆರೆ = 66027-3907
13. ಬೆಂಗಳೂರು ಗ್ರಾಮಾಂತರ = 89984-3983
14. ಕೋಲಾರ = 66890-5407
15. ದಾರವಾಡ = 82536-3095
16. ಹಾವೇರಿ = 47985-1619
17. ಗದಗ = 56231-4938
18. ಉತ್ತರ ಕನ್ನಡ = 82186-4034
19. ಕೊಪ್ಪಳ = 80721-5575
20. ಕೊಡಗು = 30798-1286
21. ರಾಯಚೂರು = 75543-6598
22. ಯಾದಗಿರಿ = 54814-5465
23. ಉಡುಪಿ = 67358-3290
24. ಶಿವಮೊಗ್ಗ = 95826-2224
25. ತುಮಕೂರು =123058-12813
26. ಹಾಸನ = 101635-5043
27. ಮಂಡ್ಯ = 102517-5217
28. ಚಿಕ್ಕಬಳ್ಳಾಪುರ = 92058-4091
29. ರಾಮನಗರ = 75962-3035
30. ವಿಜಯಪುರ = 98323-3772
31. ಬಿಬಿಎಂಪಿ = 543310-34694
ಕಳೆದೊಂದು ತಿಂಗಳಿನಿಂದ ವ್ಯಾಕ್ಸಿನೇಷನ್‌ ಮತ್ತೆ ಡಿಮ್ಯಾಂಡ್ ಹೆಚ್ಚಾಗಿದೆ. ಆರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಎಷ್ಟೇ ಬೊಬ್ಬೆ ಹೊಡೆದರು ಜನ ಹಿಂದೇಟು ಹಾಕ್ತಿದ್ರು. ಲಸಿಕೆಯಿಂದಾಗಿ ಸೈಡ್ ಎಫೆಕ್ಟ್ ಆಗಬಹುದು ಅನ್ನೋ ಭೀತಿಯಲ್ಲಿದ್ರು. ಆದ್ರೆ ಕಳೆದೊಂದು ತಿಂಗಳಿನಿಂದ ಲಸಿಕೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಅಂತಾ ಇದೀಗ ಮುಗಿಬೀಳ್ತಿದ್ದಾರೆ.

ಮೇ ತಿಂಗಳಲ್ಲಿ ಲಸಿಕೆ ಪಡೆಯಬೇಕಿರುವ 18ರಿಂದ 45 ವಯಸ್ಸಿನವರು ಎಷ್ಟು ಜನ?
– ಕರ್ನಾಟಕದಲ್ಲಿ 18 ವರ್ಷ ಮೇಲ್ಪಟ್ಟವರು- 3.2 ಕೋಟಿ ಜನರಿದ್ದಾರೆ
– ಕರ್ನಾಟಕದಲ್ಲಿ 45 ವರ್ಷ ಮೇಲ್ಪಟ್ಟವರು- 1.71 ಕೋಟಿ ಜನರಿದ್ದಾರೆ
– ಹೆಲ್ತ್‌ಕೇರ್ ವರ್ಕರ್- 8 ಲಕ್ಷ ಜನರು
– ಫ್ರಂಟ್ ಲೈನ್ ವರ್ಕರ್- 2.88 ಲಕ್ಷ ಜನರು.
– ಒಬ್ಬರಿಗೆ ಎರಡು ಡೋಸ್ ಲಸಿಕೆ ಬೇಕು.

ಇದನ್ನೂ ಓದಿ: ಲಾಕ್​ಡೌನ್​ ಮಧ್ಯೆಯೂ ಮುಂದುವರಿದ ಹೊಸ ಸಂಸತ್ ಭವನ ನಿರ್ಮಾಣ ಕಾಮಗಾರಿ; ಕಾರ್ಮಿಕರ ಅನುಕೂಲಕ್ಕಾಗಿ ಪೊಲೀಸರಿಗೆ ಪತ್ರ