ಹಾಸನದಲ್ಲಿ ತಾಯಿ, ಮಗನನ್ನು ಒಂದಾಗಿಸಿದ ಕೊರೊನಾ; 22 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಪುತ್ರ ವಾಪಸ್
ಮಗ ಮನೆ ಬಿಟ್ಟು ಸುಮಾರು 22 ವರ್ಷಗಳಾಗಿತ್ತು. ಇರುವ ಒಬ್ಬ ಮಗನನ್ನು ಕಳೆದುಕೊಂಡ ದಂಪತಿ ಮಗನನ್ನು ನೆನೆದು ಪ್ರತಿದಿನ ಕುಗ್ಗುತ್ತಿದ್ದರು. ಮಗನನ್ನು ನೆನೆಯುತ್ತಾ ಏಕಾಂಗಿಯಾಗಿ ದಂಪತಿ ಜೀವನ ಸಾಗಿಸುತ್ತಿದ್ದರು. ಆದರೆ ಆ ದಂಪತಿಗೆ ಕೊರೊನಾ ಉಡುಗೊರೆ ನೀಡಿದೆ. ಮಗನನ್ನು ತನ್ನ ತಾಯಿಯ ಮಡಿಲು ಸೇರಿಸಿದೆ.
ಹಾಸನ: ಕೊರೊನಾ ದೇಶದೆಲ್ಲೆಡೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿತರ ಪ್ರಕರಣ ಹೆಚ್ಚಾದಂತೆ ಸಾವಿನ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಕೊರೊನಾಗೆ ಇಡೀ ಮನುಕುಲ ಶಾಪ ಹಾಕುತ್ತಿದೆ. ಎಲ್ಲಿಂದ ವಕ್ಕರಿಸತು ಈ ಮಹಾಮಾರಿ. ಬಾಳಿ ಬದುಕಬೇಕಾದ ಜೀವವನ್ನು ಕಸಿದುಕೊಳ್ಳುತ್ತಿದೆ. ಇದರ ಅರ್ಭಟ ಇನ್ನೆಷ್ಟು ದಿನ. ಇದರ ಅಂತ್ಯ ಯಾವಾಗ? ಅಂತಾ ಮನೆ ಮಂದಿಯನ್ನು ಕಳೆದುಕೊಂಡವರು ಕಣ್ಣೀರಿಡುತ್ತಿದ್ದಾರೆ. ಆದರೆ ಜಿಲ್ಲೆಯಲ್ಲೊಂದು ಕುಟುಂಬಕ್ಕೆ ಕೊರೊನಾ ದೊಡ್ಡ ಉಡುಗೊರೆ ನೀಡಿದೆ.
ಮಗ ಮನೆ ಬಿಟ್ಟು ಸುಮಾರು 22 ವರ್ಷಗಳಾಗಿತ್ತು. ಇರುವ ಒಬ್ಬ ಮಗನನ್ನು ಕಳೆದುಕೊಂಡ ದಂಪತಿ ಮಗನನ್ನು ನೆನೆದು ಪ್ರತಿದಿನ ಕುಗ್ಗುತ್ತಿದ್ದರು. ಮಗನನ್ನು ನೆನೆಯುತ್ತಾ ಏಕಾಂಗಿಯಾಗಿ ದಂಪತಿ ಜೀವನ ಸಾಗಿಸುತ್ತಿದ್ದರು. ಆದರೆ ಆ ದಂಪತಿಗೆ ಕೊರೊನಾ ಉಡುಗೊರೆ ನೀಡಿದೆ. ಮಗನನ್ನು ತನ್ನ ತಾಯಿಯ ಮಡಿಲು ಸೇರಿಸಿದೆ.
ಹಾಸನ ತಾಲೂಕಿನ ಹೊಂಗೆರೆ ಗ್ರಾಮದ ಶೇಖರ್ ಎಂಬಾತ 16 ವರ್ಷದಲ್ಲಿದ್ದಾಗ ಮನೆ ಬಿಟ್ಟು ಹೋಗಿದ್ದರು. ಮನೆ ತೊರೆದ ಶೇಖರ್ 22 ವರ್ಷಗಳಿಂದ ಮುಂಬೈನಲ್ಲೇ ನೆಲೆಸಿದ್ದರು. ಗ್ರಾಮದ ರಾಜೇಗೌಡ ಮತ್ತು ಅಕ್ಕಯ್ಯಮ್ಮ ದಂಪತಿ ಮಗ ಬರುತ್ತಾನೆಂದು ಸ್ವಲ್ಪ ಸಮಯ ಕಾದರು. ಆದರೆ ಮಗನ ಬರುವಿಕೆಯ ಸುಳಿವು ಸಿಗದಿದ್ದರಿಂದ ಮಗ ಸತ್ತೇ ಹೋಗಿದ್ದಾನೆ ಎಂದು ಕೊಂಡಿದ್ದರು. ಆದರೆ ಮಗ 22 ವರ್ಷದ ಬಳಿಕ ಮನೆಗೆ ಬಂದಿದ್ದಾರೆ. ಮಗನನ್ನು ನೋಡಿದ ಅಪ್ಪ- ಅಮ್ಮನಿಗೆ ಇನ್ನಿಲ್ಲದ ಸಂತಸ ತಂದಿದೆ. ಮಹಾರಾಷ್ಟ್ರದಲ್ಲಿ ಕೊರೊನ ಹಾವಳಿ ಹೆಚ್ಚಿದ್ದರಿಂದ ನಿನ್ನೆ (ಏಪ್ರಿಲ್ 27) ಶೇಖರ್ (38) ಮನೆಗೆ ಮರಳಿದ್ದು, ಕೊರೊನಾ ಹೊಂಗೆರೆ ಗ್ರಾಮದ ದಂಪತಿಗೆ ಉಡುಗೊರೆ ನೀಡಿದಂತಾಗಿದೆ.
ಇದನ್ನೂ ಓದಿ
ಲಾಕ್ಡೌನ್ ಮಧ್ಯೆಯೂ ಮುಂದುವರಿದ ಹೊಸ ಸಂಸತ್ ಭವನ ನಿರ್ಮಾಣ ಕಾಮಗಾರಿ; ಕಾರ್ಮಿಕರ ಅನುಕೂಲಕ್ಕಾಗಿ ಪೊಲೀಸರಿಗೆ ಪತ್ರ
ಅಮೆರಿಕದಲ್ಲಿ ಇನ್ನು ಮಾಸ್ಕ್ ಧರಿಸಬೇಕಾಗಿಲ್ಲ ಆದರೆ ಗುಂಪಿನಲ್ಲಿದ್ದಾಗ ಮಾಸ್ಕ್ ಇರಲಿ! ಅಧ್ಯಕ್ಷ ಜೋ ಬೈಡೆನ್ ಘೋಷಣೆ
(son who left home 22 years ago has come home at hassan because of corona in Maharashtra)