ಬೆಂಗಳೂರು: ಚಾಮರಾಜನಗರ ಜಿಲ್ಲೆಯಲ್ಲಿ 24 ಗಂಟೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಮೃತಪಟ್ಟ ಘಟನೆಯನ್ನು ನೆಟ್ಟಿಗರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. #ResignSudhakar ಟ್ರೆಂಟ್ ಆಗಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ ಸುಧಾಕರ್ ಅವರ ರಾಜೀನಾಮೆ ನೀಡುವಂತೆ ಆಗ್ರಹಿಸಿ 15 ಸಾವಿರಕ್ಕೂ ಹೆಚ್ಚು ಟ್ವೀಟ್ ಮಾಡಲಾಗಿದೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಮಧ್ಯರಾತ್ರಿ ಮನಕಲಕುವ ದೃಶ್ಯಗಳು ಕಂಡುಬಂದಿತ್ತು. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಸಂಜೆ ಆಕ್ಸಿಜನ್ ಖಾಲಿ ಆಗಿದ್ರಿಂದ 24 ಗಂಟೆಯಲ್ಲಿ 22 ಕೊವಿಡ್, ನಾನ್ ಕೊವಿಡ್ ರೋಗಿಗಳು ಆಕ್ಸಿಜನ್ ಸಿಗದೇ ಮೃತಪಟ್ಟಿದ್ದರು. ಈ ಕುರಿತು ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 350 ಆಕ್ಸಿಜನ್ ಸಿಲಿಂಡರ್ಗಳಿವೆ. 6KL ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ಕೂಡ ಇದೆ. ಸುಮಾರು 120 ರೋಗಿಗಳಿಗೆ ಇದ್ರಿಂದ ಆಕ್ಸಿಜನ್ ಪೂರೈಕೆ ಮಾಡ್ತಿದ್ದಾರೆ. ಮೈಸೂರಿನ ಸದರನ್ ಮತ್ತು ಪರ್ಕಿ ಏಜೆನ್ಸಿಗಳಿಂದ ಪ್ರತಿನಿತ್ಯ 350 ಆಕ್ಸಿಜನ್ ಸಿಲಿಂಡರ್ ಪೂರೈಕೆಯಾಗ್ತಿತ್ತು. ಆಕ್ಸಿಜನ್ ಪ್ಲಾಂಟ್ಗೆ ಬಳ್ಳಾರಿಯಿಂದ ಟ್ಯಾಂಕರ್ ಮೂಲಕ ಆಕ್ಸಿಜನ್ ಪೂರೈಕೆಯಾಗುತ್ತಿತ್ತು. ಕಳೆದೆರಡು ದಿನಗಳಿಂದ ಕೇವಲ 30 ಆಕ್ಸಿಜನ್ ಸಿಲಿಂಡರ್ ಪೂರೈಕೆಯಾಗಿವೆ. ಕಳೆದ ಭಾನುವಾರದಿಂದ ಬಳ್ಳಾರಿಯಿಂದ ಬರ್ತಿದ್ದ ಆಕ್ಸಿಜನ್ ಟ್ಯಾಂಕರ್ ಕೂಡ ಬಂದಿಲ್ಲ. ಹೀಗಾಗಿ ಭಾನುವಾರ 9 ಗಂಟೆಯಿಂದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿತ್ತು.
24 people have died due to no oxygen at the District hospital.
Criminal negligence by @BSYBJP and Health Minister of Karnataka #ResignSudhakar pic.twitter.com/h37iIan0Gl— GC ChandraShekhar (@GCC_MP) May 3, 2021
This Government has completely failed to save lives of citizens. Their incompetence and insensitiveness has been exposed again in the 24 unnecessary deaths due to Oxygen shortage in Chamarajanagar. On behalf of the people of Karnataka, we demand accountability.#ResignSudhakar
— DK Shivakumar (@DKShivakumar) May 3, 2021
@Dmpilibhit @swatantraDeval1 यह स्थिति जनपद पीलीभीत के जिला अस्पताल COVID-19 के L-2 वार्ड की इस स्थिति मे कोविड मरीज अपना दम ऐसी दुर्दशा देखकर ही तोड देगा । #JusticeForShahabuddin #SiaCoinToDollar #ResignSudhakar #discoverypluswitharjunkapoor
CBI KNOWS WHO KILLED SUSHANT pic.twitter.com/vT8PTZEJvg— antra arya (@AntraArya) May 3, 2021
#ResignSudhakar https://t.co/klAMFqUsA1
— igchinnappa (@igchinnappa3) May 3, 2021
The reason why Karnataka is in this #Covid mess is because @BJP4Karnataka ignored the advice of health experts. This Govt has ensured that people don’t have any dignity when alive or in death.
State is run by the most incompetent people. State deserves better.#ResignSudhakar— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 3, 2021
ಈ ಕುರಿತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪತ್ರಿಕಾಗೋಷ್ಠಿ ನಡೆಸಿ, ಆಕ್ಸಿಜನ್ ಕೊರತೆಯಿಂದ ಮೂವರು ಮಾತ್ರ ಮೃತಪಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ: K Sudhakar Press Meet: ಆಕ್ಸಿಜನ್ ಕೊರತೆಯಿಂದ ಮೂವರು ಮಾತ್ರ ಸಾವನ್ನಪ್ಪಿದ್ದಾರೆ; ಸಚಿವ ಸುಧಾಕರ್ ಸ್ಪಷ್ಟನೆ
(ResignSudhakar hashtag trending in twitter after 24 people died in Chamarajanagar lack of medical oxygen)
Published On - 6:40 pm, Mon, 3 May 21