
ಹಾಸನ: ಪ್ರತಿಭಟನೆ ವೇಳೆ ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಮತ್ತು ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಕೆ ಎಂ ಶಿವಲಿಂಗೇಗೌಡ ಕಡ್ಲೆಕಾಯಿ ಸವಿದು ಟೈಂ ಪಾಸ್ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ. ಕೈ ನಾಯಕರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಬಡವರ ಬಾದಾಮಿ ಮಾರುತ್ತ ಬಂದವರ ಬಳಿ ಕಡ್ಲೆಕಾಯಿ ಖರೀದಿಸಿ ರೇವಣ್ಣ ಮತ್ತು ಶಿವಲಿಂಗೇಗೌಡ ಕುರ್ಚಿ ಮೇಲೆ ಕೂತು ಕಡ್ಲೆಕಾಯಿ ತಿನ್ನುತ್ತ ಸಿಪ್ಪೆಯನ್ನು ರಾಶಿ ರಾಶಿ ಗುಡ್ಡೆ ಹಾಕಿದ್ದಾರೆ. ಕಡ್ಲೆಕಾಯಿ ತಿಂದು ನೀರು ಕುಡಿದು ಪ್ರತಿಭಟನೆಯ ಬ್ರೇಕ್ ಮಾಡಿದ್ದಾರೆ.
ಇಷ್ಟಕ್ಕೂ ರೇವಣ್ಣ ಪ್ರತಿಭಟನೆ ಮಾಡಿದ್ದೇಕೆ ಗೊತ್ತಾ?: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರು ಮತ್ತು ಜೆಡಿಎಸ್ ಶಾಸಕರು ಇಂದು ಹಾಸನ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ, ಕಡ್ಲೆಕಾಯಿ ಮಾರುತ್ತ ಬಂದವ ಬಳಿ ಕಡ್ಲೆಕಾಯಿ ಖರೀದಿಸಿ ರೇವಣ್ಣ ಕಡ್ಲೆಕಾಯಿ ತಿನ್ನಲು ಶುರು ಮಾಡಿದ್ರು. ಈ ವೇಳೆ ಅವರ ಬೆಂಬಲಿಗರು, ಹಿತೈಶಿಗಳು ಅವರಿಗೆ ಕಡ್ಲೆಕಾಯಿ ತಂದು ಕೊಟ್ಟರು. ಪ್ರತಿಭಟನೆ ಮಗಿಯುವ ವರೆಗೂ ರೆವಣ್ಣ ಕಡ್ಲೆಕಾಯಿ ತಿಂದು ಎಂಜಾಯ್ ಮಾಡಿದ್ದಾರೆ. ಜೊತೆಗೆ ತಮ್ಮ ಅಕ್ಕ ಪಕ್ಕದ ಶಾಸಕರಿಗೂ ಕಡ್ಲೆಕಾಯಿ ಹಂಚಿ ಖುಷಿ ಖುಷಿಯಾಗಿ ಪ್ರತಿಭಟನೆ ನಡೆಸಿದರು.
ರೇವಣ್ಣರಿಗೆ ಕೊರೊನಾ ಬರದಿರಲು ನಿಂಬೆ ಹಣ್ಣು ಸಹಾಯ ಮಾಡುತ್ತಂತೆ
ಹಾಸನ ಜಿಲ್ಲೆಯ ಅಧಿಪತಿ ರೇವಣ್ಣ ಅವರು ಈ ಹಿಂದೆ ಕೊರೊನಾ ಟೆಸ್ಟ್ ಮಾಡಿಸಿದಾಗ ಅವರು ವರದಿ ನೆಗೆಟಿವ್ ಬಂದಿತ್ತು. ಹಾಗಂತ ರೇವಣ್ಣ ಅವರೇ ಹೇಳಿದ್ದರು. ಜೊತೆಗೆ ತಮ್ಮ ಕಚೇರಿಯ ಸಿಬ್ಬಂದಿಯ ವರದಿಯೂ ನೆಗಟಿವ್ ಆಗಿದೆ. ಆದ್ರೂ ಸ್ವಲ್ಪ ರೆಸ್ಟ್ ಪಡೀಲಿ ಅಂತಾ ರಜೆ ಮೇಲೆ ಕಳಿಸಿದ್ದೇನೆ ಎಂದು ರೇವಣ್ಣ ತಿಳಿಸಿದ್ದರು.
ಹೌದು, ದೇವೆಗೌಡರ ಪುತ್ರ ಹೆಚ್ ಡಿ ರೇವಣ್ಣ ಅಂದ್ರೆ ಎರಡು ವಿಷ್ಯಗಳು ತಟ್ಟನೆ ನೆನಪಾಗುತ್ತವೆ. ಒಂದು ಅವರು ಹಾಸನವನ್ನ ರಿಪಬ್ಲಿಕ್ ಆಫ್ ರೇವಣ್ಣಾಸ್ ಹಾಸನ ಮಾಡಿಕೊಂಡಿರೋದು, ಮತ್ತೊಂದು ಯಾವಾಗಲೂ ಕೈಯಲ್ಲಿ ಲಿಂಬೆ ಹಣ್ಣು ಹಿಡಿದುಕೊಂಡಿರೋದು. ಹೀಗಾಗಿ ರೇವಣ್ಣ ಅವರಿಗೆ ಕೊರೊನಾ ನೆಗಟಿವ್ ಬರೋಕ್ಕೆೇನಾದ್ರೂ ಲಿಂಬೆ ಹಣ್ಣಿನ ಜಾದು ಕಾರಣವಿರಬಹುದು ಅಂತಾ ಯಾರಾದ್ರೂ ಅಂದುಕೊಂಡ್ರು ಅಂದುಕೊಳ್ಳಬಹುದು.
Published On - 1:30 pm, Wed, 23 June 21