ಚಿಕ್ಕಮಗಳೂರು: ಪರಿಷತ್ ಉಪಸಭಾಪತಿ S.L.ಧರ್ಮೇಗೌಡ ಆತ್ಮಹತ್ಯೆ ಕೇಸ್ಗೆ ಸಂಬಂಧಿಸಿ ಪರಿಷತ್ ಸದಸ್ಯರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. 2020 ರ ಡಿಸೆಂಬರ್ 8 ರಂದು ಪರಿಷತ್ನಲ್ಲಿ ನಡೆದಿದ್ದ ಗಲಾಟೆ ಬಗ್ಗೆ S.L.ಧರ್ಮೇಗೌಡ ತಮ್ಮ ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ರೈಲ್ವೆ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಮುಂದಾಗಿದ್ದಾರೆ.
ವಿಧಾನಪರಿಷತ್ ಕಲಾಪದ ಸಮಗ್ರ ಮಾಹಿತಿ ಕೋರಿ ಪರಿಷತ್ ಕಾರ್ಯದರ್ಶಿಗೆ ರೈಲ್ವೆ ಪೊಲೀಸರು ಪತ್ರ ಬರೆದಿದ್ದಾರೆ. ಪರಿಷತ್ ಕಾರ್ಯದರ್ಶಿ ಮಾಹಿತಿ ಆಧರಿಸಿ ಮುಂದಿನ ತನಿಖೆ ನಡೆಸಲಾಗುತ್ತೆ. 2020ರ ಡಿ.28ರಂದು ಧರ್ಮೇಗೌಡರವರು ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್ನೋಟ್ನಲ್ಲಿ ಕಲಾಪದ ಗಲಾಟೆ ಬಗ್ಗೆ ಬರೆದಿದ್ದಾರೆ. ಹೀಗಾಗಿ ಡೆತ್‌ನೋಟ್‌ನಲ್ಲಿನ ಅಂಶ ಆಧರಿಸಿ ತನಿಖೆ ನಡೆಸಲಾಗುತ್ತಿದೆ.
ಜೊತೆಗೆ ಸಾರ್ವಜನಿಕ ವಲಯದ ಟೀಕೆಯಿಂದ ನೊಂದ ಬಗ್ಗೆ ಉಲ್ಲೇಖಿಸಿದ್ದಾರೆ. ಹಾಗೂ ಕೌಟುಂಬಿಕ ವಿಚಾರದ ಬಗ್ಗೆಯೂ ಉಲ್ಲೇಖಿಸಿರುವ ಬಗ್ಗೆ ಮಾಹಿತಿ ಇದೆ. ಈ ಸಂಬಂಧ S.L.ಧರ್ಮೇಗೌಡ ಪತ್ನಿ, ಮಕ್ಕಳು, ಸ್ನೇಹಿತರು, ಸಂಬಂಧಿಕರನ್ನು ರೈಲ್ವೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ 120 ಎಕರೆ ಜಮೀನು, ಬೆಂಗಳೂರಿನ ಮನೆ, ಮಕ್ಕಳಿಗೆ ಸಿಗಬೇಕಾದ ಆಸ್ತಿಯ ಬಗ್ಗೆಯೂ ಧರ್ಮೇಗೌಡರವರು ಡೆತ್ನೋಟ್ನಲ್ಲಿ ಉಲ್ಲೇಖಿಸಿರುವ ಮಾಹಿತಿ ಸಿಕ್ಕಿದೆ. ತಮ್ಮ ಕುಟುಂಬದ ಜವಾಬ್ದಾರಿಯನ್ನ ಎಸ್.ಆರ್.ಭೋಜೇಗೌಡ ನೋಡಿಕೊಳ್ಳುವಂತೆ ಕೋರಿಕೊಂಡಿದ್ದಾರಂತೆ.
ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ವಿಧಾನ ಪರಿಷತ್ ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ