ಬಿಲ್ಡಪ್‌ಗಾಗಿ ಮಾರಕಾಸ್ತ್ರ ಹಿಡಿದು ಯುವಕರನ್ನು ಥಳಿಸಿ ವಿಡಿಯೋ ಮಾಡ್ತಿದ್ದ ತಂಡ ಸೆರೆ.. ತಲ್ವಾರ್, ಲಾಂಗ್ ಜಪ್ತಿ

ದರೋಡೆ, ಲ್ಯಾಂಡ್ ಡೀಲ್ ಮಾಡುತ್ತಿದ್ದ ಆರೋಪಿಗಳು ಬಿಲ್ಡಪ್‌ಗಾಗಿ ಹಲವರನ್ನು ಥಳಿಸಿ ವಿಡಿಯೋ ಮಾಡುತ್ತಿದ್ದರು. ಇದೇ ರೀತಿ ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ಯುವಕನೋರ್ವನನ್ನು ಹಿಗ್ಗಾಮುಗ್ಗಾ ಥಳಿಸುವ ವಿಡಿಯೋ ಮಾಡಿದ್ದಾರೆ...

  • TV9 Web Team
  • Published On - 8:28 AM, 28 Jan 2021
ಬಿಲ್ಡಪ್‌ಗಾಗಿ ಮಾರಕಾಸ್ತ್ರ ಹಿಡಿದು ಯುವಕರನ್ನು ಥಳಿಸಿ ವಿಡಿಯೋ ಮಾಡ್ತಿದ್ದ ತಂಡ ಸೆರೆ.. ತಲ್ವಾರ್, ಲಾಂಗ್ ಜಪ್ತಿ
ಯುವಕನೋರ್ವನನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವುದು

ಕಲಬುರಗಿ: ಕಳೆದ ರಾತ್ರಿ ಹೊರವಲಯದಲ್ಲಿ ಕಲಬುರಗಿ ನಗರ ರೌಡಿ ನಿಗ್ರಹ ಪಡೆಯಿಂದ 6 ದರೋಡೆಕೋರರ ಬಂಧನವಾಗಿದೆ. ಮಿರ್ಜಾ ಬೇಗ್, ಮಿರ್ಜಾ ಸಲ್ಮಾನ್, ಮೊಹಮ್ಮದ್ ರಫೀಕ್, ಶೇಖ್ ವಸೀಂ, ಮೊಹಮ್ಮದ್ ಜುಬೇರ್, ವಾಜೀದ್ ಬಂಧಿತ ಆರೋಪಿಗಳು.

ದರೋಡೆ, ಲ್ಯಾಂಡ್ ಡೀಲ್ ಮಾಡುತ್ತಿದ್ದ ಆರೋಪಿಗಳು ಬಿಲ್ಡಪ್‌ಗಾಗಿ ಹಲವರನ್ನು ಥಳಿಸಿ ವಿಡಿಯೋ ಮಾಡುತ್ತಿದ್ದರು. ಇದೇ ರೀತಿ ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ಯುವಕನೋರ್ವನನ್ನು ಹಿಗ್ಗಾಮುಗ್ಗಾ ಥಳಿಸುವ ವಿಡಿಯೋ ಮಾಡಿದ್ದಾರೆ.

ತಲೆ ಕೆಳಗೆ ಕೈ ಕಾಲು ಮೇಲೆ ಮಾಡಿ ಹಿಡಿದು ಥಳಿಸಿರೋ ವಿಡಿಯೋ ಮಾಡಿದ್ದರು. ಸದ್ಯ ಈಗ ಈ ಬಿಲ್ಡಪ್‌ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 2 ತಲ್ವಾರ್, 3 ಲಾಂಗ್ ಜಪ್ತಿ ಮಾಡಲಾಗಿದೆ. ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ರೌಡಿ ನಿಗ್ರಹ ಪಡೆ ಪಿಎಸ್ ಐ ವಹೀದ್ ಕೊತ್ವಾಲ್ ನೇತೃತ್ವದ ತಂಡದಿಂದ ಬಂಧನವಾಗಿದೆ.

ರಾಜ್​ದೀಪ್​ ಸರ್​ದೇಸಾಯಿ.. ಸುಳ್ಳು ಸುದ್ದಿಯ ಸರದಾರ?: ಟ್ವಿಟರ್​ನಲ್ಲಿ ಬಂಧನಕ್ಕೆ ಆಗ್ರಹ