ಮಂಗಳೂರು: ಕಳೆದ ಎರಡು ವರ್ಷದ ಹಿಂದೆ ರಾಜ್ಯದಲ್ಲಿ ಪ್ರಪ್ರಥಮ ಭಾರಿಗೆ ನದಿ ಉತ್ಸವ ಮಂಗಳೂರಿನಲ್ಲಿ ಆರಂಭವಾಗಿತ್ತು. ಕಳೆದ ವರ್ಷ ಕೋವಿಡ್ ಕಾರಣದಿಂದ ಇದಕ್ಕೆ ಬ್ರೇಕ್ ಬಿದ್ದಿತ್ತು. ಇನ್ನು ಈ ವರ್ಷ ಮತ್ತೆ ನದಿ ಉತ್ಸವ ಅದ್ದೂರಿಯಾಗಿ ನಡೆಯಿತು. ಎರಡು ದಿನಗಳ ಕಾಲ ನಡೆದ ಈ ನದಿ ಉತ್ಸವವಕ್ಕೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಚಾಲನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಎರಡು ದಿನಗಳ ಕಾಲ ನಂದಿನಿ ನದಿ ಉತ್ಸವನ್ನು ನಡೆಸಿತು. ಈ ಕಾರ್ಯಕ್ರಮ ಉದ್ಘಾಟನೆ ವೇಳೆ ನಂದಿನಿ ಆರತಿ ಮಾಡುವ ವೇಳೆ ಅಲ್ಲಿ ಹಾಕಲಾಗಿದ್ದ ಸ್ಟೇಜ್ ಕುಸಿದು ಸಿ.ಪಿ.ಯೋಗೇಶ್ವರ್ ನದಿಗೆ ಬೀಳುವಂತಾಗಿದ್ದು, ಅದೃಷ್ಟವಷಾತ್ ಪಾರಾಗಿದರು. ಈ ಘಟನೆ ಮದ್ಯೆ ಆರಂಭವಾದ ನಂದಿನಿ ನದಿ ಉತ್ಸವ ಚೆನ್ನಾಗಿ ಸಮರೋಪಗೊಂಡಿತು. 2019 ರಲ್ಲಿ ಫಲ್ಗುಣಿ ನದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ರಾಜ್ಯದಲ್ಲೇ ಮೊದಲ ಬಾರಿಗೆ ನದಿ ಉತ್ಸವ ಆರಂಭಿಸಿತ್ತು. ಎರಡನೇ ನದಿ ಉತ್ಸವವಾದ ನಂದಿನಿ ನದಿ ಉತ್ಸವದಲ್ಲಿ ಕಯಾಕಿಂಗ್ ಸ್ಪರ್ಧೆ ಮೊದಲ ಭಾರಿಗೆ ನಡೆಯಿತು. ಕಯಕಿಂಗ್ ಸಿಂಗಲ್, ಡಬಲ್, ಸ್ಟಾಂಡಿಂಗ್ ಎಂಬ ಮೂರು ವಿಧದ ಸ್ಪರ್ಧೆಗಳನ್ನು ಇಡಲಾಗಿತ್ತು. ಕಯಾಕ್ಗಳು ಸ್ಪರ್ಧೆ ಮೂಲಕ ನೆರಿದಿದ್ದವರನ್ನು ರಂಜಿಸಿದರು. ಇನ್ನು ಪ್ರವಾಸಿಗರಿಗೂ ಕಯಾಕ್ ಬಗ್ಗೆ ಹೇಳಿಕೊಡಲಾಯಿತು. ನಾವೇನು ಕಮ್ಮಿ ಇಲ್ಲ ಅಂತಾ ಮೀನುಗಾರರು ಸಾಂಪ್ರದಾಯಿಕ ದೋಣಿ ಸ್ಪರ್ಧೆಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದರು.
ಸಸಿಹಿತ್ಲು ತಡದಿಂದ ಉತ್ಸವದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಉಚಿತವಾಗಿ ಎಲ್ಲಾ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿತ್ತು. ಸಸಿಹಿತ್ಲು ಬಳಿಯಿಂದ ಉಚಿತವಾಗಿ ಬೋಟ್ ಮತ್ತು ಫೆರಿ ವ್ಯವಸ್ಥೆ ಮಾಡಲಾಗಿತ್ತು. ನಿನ್ನೆ (ಮಾರ್ಚ್ 21) ಭಾನುವಾರ ಆಗಿರುವುದರಿಂದ ಮಂಗಳೂರಿಗರು ಸಾಕಷ್ಟು ಸಂಖ್ಯೆಯಲ್ಲಿ ಉತ್ಸವಕ್ಕೆ ಬಂದು ಎಂಜಾಯ್ ಮಾಡಿದರು. ಈ ನದಿ ಉತ್ಸವದಲ್ಲಿ ಆಕರ್ಷಣೆಯನ್ನುಂಟು ಮಾಡಿದ್ದು ಆಹಾರ ಮೇಳ. ಆಹಾರ ಮೇಳದಲ್ಲಿ ನದಿಯಲ್ಲಿ ಹಿಡಿದ ಮೀನಿನ ಖಾದ್ಯವನ್ನು ಎಲ್ಲರು ಸವಿದರು.
ಇದನ್ನೂ ಓದಿ
ನಿಂದಿಸಿದವರೇ ಬೆನ್ನು ತಟ್ತಿದ್ದಾರಲ್ಲಾ! ಭಾರತವೇ ಈ ಬಾರಿಯ T20 ವಿಶ್ವಕಪ್ ಚಾಂಪಿಯನ್ ಎಂದ ಮೈಕಲ್ ವಾನ್