Janata Curfew Anniversary: ಜನತಾ ಕರ್ಫ್ಯೂಗೆ ಒಂದು ವರ್ಷ; ನೆನಪಿದೆಯಾ? ಇಡೀ ದೇಶ ಸ್ತಬ್ಧವಾಗಿದ್ದು.. ಸಂಜೆ ಚಪ್ಪಾಳೆ, ಜಾಗಟೆ ಹೊಡೆದಿದ್ದು!
ಇದೀಗ ಜನತಾ ಕರ್ಫ್ಯೂವಿಗೆ ಒಂದು ವರ್ಷ. ಭಾರತೀಯರು ಜನತಾ ಕರ್ಫ್ಯೂವಿನ ಆ್ಯನಿವರ್ಸರಿ ಆಚರಿಸುತ್ತಿದ್ದಾರೆ. ಕಳೆದ ವರ್ಷದ ಕೆಲವು ಕ್ಷಣಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಫನ್ನಿ ವಿಡಿಯೋಗಳೊಂದಿಗೆ, ಫನ್ನಿ ಎನ್ನಿಸುವ ಕ್ಯಾಪ್ಷನ್ ಕೂಡ ಬರೆದಿದ್ದಾರೆ. ಟ್ವಿಟರ್ನಲ್ಲಿ #JanataCurfew ಟ್ರೆಂಡ್ ಆಗುತ್ತಿದೆ.
ದೆಹಲಿ: ನಿಮಗೆ ನೆನಪಿದೆಯಾ? ಸರಿಯಾಗಿ ಒಂದು ವರ್ಷದ ಹಿಂದೆ, ಅಂದರೆ ಮಾರ್ಚ್ 22ರಂದು ಕೊರೊನಾ ವಿರುದ್ಧ ಹೋರಾಟದ ಮೊದಲ ಹೆಜ್ಜೆ ಪ್ರಾರಂಭವಾಗಿತ್ತು. ಅಂದರೆ ಪ್ರಧಾನಿ ನರೇಂದ್ರ ಮೋದಿಯವರು ಜನತಾ ಕರ್ಫ್ಯೂ ಘೋಷಣೆ ಮಾಡಿದ್ದರು. ಈ ಜನತಾ ಕರ್ಫ್ಯೂ ಬೆಳಗ್ಗೆ 7ಗಂಟೆಯಿಂದ ಸಂಜೆ 9ಗಂಟೆಯವರೆಗೆ ಜಾರಿಯಲ್ಲಿತ್ತು. ಹಾಗೆ, ಅಂದು ಸಂಜೆ 5ಗಂಟೆ ಹೊತ್ತಿಗೆ ಎಲ್ಲರೂ ತಮ್ಮ ಮನೆಯಿಂದ ಹೊರಬಂದು, ಕೊರೊನಾ ವಾರಿಯರ್ಸ್ಗೆ ಗೌರವ ಸಲ್ಲಿಸುವ ಸಲುವಾಗಿ ಚಪ್ಪಾಳೆ ಹೊಡೆಯಿರಿ ಎಂದು ಮೋದಿಯವರು ಹೇಳಿದ್ದರು. ಮೋದಿಯವರ ಮಾತಿಗೆ ಗೌರವ ಕೊಟ್ಟು ದೇಶಾದ್ಯಂತ ಜನರು ಕ್ಲ್ಯಾಪ್ಸ್ ಹೊಡೆದಿದ್ದರು. ಕೆಲವರಂತೂ ಜಾಗಟೆ, ಡ್ರಮ್ಗಳ ಸೌಂಡ್ ಕೂಡ ಮಾಡಿದ್ದರು.
ಮೋದಿಯವರು ಘೋಷಿಸಿದ್ದ ಜನತಾ ಕರ್ಫ್ಯೂಗೆ ದೇಶದೆಲ್ಲೆಡೆಯಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿತ್ತು. ಆದಾಗ್ಯೂ ಕೆಲವು ಪ್ರದೇಶಗಳಲ್ಲಿ ಜನರು ರಸ್ತೆಗಿಳಿದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದೂ ಇದೆ. ಅಂದು ಪ್ರಧಾನಿ ನರೇಂದ್ರ ಮೋದಿಯವರ ಮಾತಿಗೆ ಬೆಲೆ ಕೊಟ್ಟು ರಸ್ತೆಗೆ ಇಳಿಯದ ಜನರು ಸರಿಯಾಗಿ 5ಗಂಟೆಗೆ ತಮ್ಮತಮ್ಮ ಮನೆಯ ಅಂಗಳ, ಬಾಲ್ಕನಿ, ಕಿಟಕಿಯ ಬಳಿ ಬಂದು ಚಪ್ಪಾಳೆ ಹೊಡೆದಿದ್ದರು. ಕೆಲವರು ಪ್ಲೇಟ್ಗಳನ್ನು ಬಡಿದಿದ್ದರು.. ಶಂಖನಾದ ಮೊಳಗಿಸಿದ್ದರು.. ಈ ಮೂಲಕ ಕೊರೊನಾ ವಾರಿರ್ಯಸ್ ಆಗಿರುವ ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸಿದ್ದರು.
ಇದೀಗ ಜನತಾ ಕರ್ಫ್ಯೂವಿಗೆ ಒಂದು ವರ್ಷ. ಭಾರತೀಯರು ಜನತಾ ಕರ್ಫ್ಯೂವಿನ ಆ್ಯನಿವರ್ಸರಿ ಆಚರಿಸುತ್ತಿದ್ದಾರೆ. ಕಳೆದ ವರ್ಷದ ಕೆಲವು ಕ್ಷಣಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಫನ್ನಿ ವಿಡಿಯೋಗಳೊಂದಿಗೆ, ಫನ್ನಿ ಎನ್ನಿಸುವ ಕ್ಯಾಪ್ಷನ್ ಕೂಡ ಬರೆದಿದ್ದಾರೆ. ಟ್ವಿಟರ್ನಲ್ಲಿ #JanataCurfew ಟ್ರೆಂಡ್ ಆಗುತ್ತಿದೆ. ಆದರೆ ಈ ವರ್ಷವೂ ಕೂಡ ಮಾರ್ಚ್ 10ರಿಂದೀಚೆಗೆ ಕೊರೊನಾ ಸೋಂಕಿನ ಸಂಖ್ಯೆ ಮಿತಿಮೀರುತ್ತಿದೆ. ದಿನದಿನವೂ ಸೋಂಕಿನ ಪ್ರಸರಣದ ಪ್ರಮಾಣ ಏರುತ್ತಿದೆ. ದೇಶದಲ್ಲಿ ಮತ್ತೆ ಲಾಕ್ಡೌನ್ ಅನಿವಾರ್ಯವಾಗಲಿದೆಯಾ ಎಂಬ ಆತಂಕದೊಂದಿಗಿನ ಅನುಮಾನ ಸಹಜವಾಗಿಯೇ ಮೂಡಿದೆ.
ಇಲ್ಲಿದೆ ನೋಡಿ ಜನತಾ ಕರ್ಫ್ಯೂ ಒಂದನೇ ವರ್ಷದ ಆ್ಯನಿವರ್ಸರಿಯಂದು ನೆಟ್ಟಿಗರು ಶೇರ್ ಮಾಡಿಕೊಂಡ ಕೆಲವು ವಿಡಿಯೋಗಳು..
How many of you remember this moment??#JanataCurfew Anniversary pic.twitter.com/ofm5YxgKDT
— Simham single ga vastadi? (@likhiteshNBK_) March 22, 2021
Modi Ji’s masterstroke. #JanataCurfew. All hell broke loose at #5Baje5Min pic.twitter.com/Cfl7oTWoDS
— Mahi™ (@Mahi0x00) March 22, 2021
22nd March Legends! Go Corona Go Go Back Go Back China Virus Go Back#JanataCurfew ???♂️ pic.twitter.com/zXis7NiX37
— شهيد الشيخ (@shahidsheik03) March 22, 2021
On This day, last year… Happy #JanataCurfew anniversary!! pic.twitter.com/6EmZxNJ9KT
— Aman Masih (@Aman_masih) March 22, 2021
22 March I can’t Forget this day in my entire life. ?#JanataCurfew pic.twitter.com/wccFGpnGe6
— Sujal Jaiswal (@sujal_jaiswal16) March 22, 2021
Me and my Bois screaming during #JanataCurfew on the balcony—#JanataCurfew pic.twitter.com/xjSS1Fg1LJ
— || ?????? ????? || ?? (@niteshsingh____) March 22, 2021
Some memories of #JanataCurfew 22nd March 2020 ! ?#1st Anniversary….. pic.twitter.com/KwI00zbDoE
— देश के युवाओं की आवाज (@VASUSHARMAVasu2) March 22, 2021
Published On - 3:01 pm, Mon, 22 March 21