ಬಾಗಲಕೋಟೆ: ಬಸ್​ಗೆ ಡಿಕ್ಕಿ ಹೊಡೆದ ಬೈಕ್​: ಸವಾರ ಸ್ಥಳದಲ್ಲೇ ಸಾವು

ಚಂದ್ರಕಾಂತ ಗೋಂದಳೆ(50)ಮೃತ ಬೈಕ್ ಸವಾರ. ಮೃತ ವ್ಯಕ್ತಿ ಬಬಲೇಶ್ವರ ಪಟ್ಟಣದ ನಿವಾಸಿಯಾಗಿದ್ದಾನೆ. ಅಂದಹಾಗೆ, ಈತನ ಮೇಲೆ ಹರಿದು ಹೋದ ವಾಹನ ಯಾವುದು ಎನ್ನುವ ವಿಚಾರ ಇನ್ನೂ ತಿಳಿದು ಬಂದಿಲ್ಲ.

ಬಾಗಲಕೋಟೆ: ಬಸ್​ಗೆ ಡಿಕ್ಕಿ ಹೊಡೆದ ಬೈಕ್​: ಸವಾರ ಸ್ಥಳದಲ್ಲೇ ಸಾವು
ಸಾಂದರ್ಭಿಕ ಚಿತ್ರ

Updated on: Dec 26, 2020 | 7:04 PM

ಬಾಗಲಕೋಟೆ: ಬಸ್​ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಬೈಕ್​ ಸವಾರನ ಮೇಲೆ ಅಪರಿಚಿತ ವಾಹನ ಹರಿದಿದೆ. ಪರಿಣಾಮ ಬೈಕ್​ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂನ ಬಾಡಗಂಡಿ ಬಳಿ ಹಾದು ಹೋದ ವಿಜಯಪುರ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಬಸ್​ ಬಾಗಲಕೋಟೆಯಿಂದ ವಿಜಯಪುರಕ್ಕೆ ಹೊರಟಿತ್ತು. ಬಬಲೇಶ್ವರದಿಂದ ಬೀಳಗಿ ಮಾರ್ಗವಾಗಿ ಬೈಕ್ ಸವಾರ ಬರುತ್ತಿದ್ದ. ಈ ವೇಳೆ ಅಪಘಾತ ಸಂಭವಿಸಿದೆ.

ಚಂದ್ರಕಾಂತ ಗೋಂದಳೆ(50)ಮೃತ ಬೈಕ್ ಸವಾರ. ಮೃತ ವ್ಯಕ್ತಿ ಬಬಲೇಶ್ವರ ಪಟ್ಟಣದ ನಿವಾಸಿಯಾಗಿದ್ದಾನೆ. ಅಂದಹಾಗೆ, ಈತನ ಮೇಲೆ ಹರಿದು ಹೋದ ವಾಹನ ಯಾವುದು ಎನ್ನುವ ವಿಚಾರ ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಆಂಧ್ರದ ಅನಂತಪುರ ಬಳಿ ಭೀಕರ ಅಪಘಾತ: ಕರ್ನಾಟಕದ ನಾಲ್ವರು ಸ್ಥಳದಲ್ಲೇ ಸಾವು