ತಡರಾತ್ರಿಯಲ್ಲಿ ನಡೆಯಿತು ಭೀಕರ ಆ್ಯಂಬುಲೆನ್ಸ್‌ ಅಪಘಾತ: ಚಾಲಕನ ಸ್ಥಿತಿ ಗಂಭೀರ

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನೀರುಕೊಲ್ಲಿ ಗ್ರಾಮದ ಬಳಿ ಆ್ಯಂಬುಲೆನ್ಸ್‌ ಮತ್ತು ಎಸ್ಟೀಮ್ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ತಡರಾತ್ರಿಯಲ್ಲಿ ನಡೆಯಿತು ಭೀಕರ ಆ್ಯಂಬುಲೆನ್ಸ್‌ ಅಪಘಾತ: ಚಾಲಕನ ಸ್ಥಿತಿ ಗಂಭೀರ
ಮಡಿಕೇರಿ ಬಳಿ ನಡೆದ ರಸ್ತೆ ಅಪಘಾತ.
Updated By: ಸಾಧು ಶ್ರೀನಾಥ್​

Updated on: Dec 15, 2020 | 12:25 PM

ಕೊಡಗು: ಆ್ಯಂಬುಲೆನ್ಸ್‌ ಮತ್ತು ಎಸ್ಟೀಮ್ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ಚಾಲಕನಿಗೆ ಗಂಭೀರ ಗಾಯವಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನೀರುಕೊಲ್ಲಿ ಗ್ರಾಮದ ಬಳಿ ಸಂಭವಿಸಿದೆ.

ನೀರುಕೊಲ್ಲಿಯ ಬಳಿ ತಡ ರಾತ್ರಿ ನಡೆದ ಭೀಕರ ಅಪಘಾತದಲ್ಲಿ ಕಾರು ಚಾಲಕ ದೀಪಕ್‌(30) ಗಂಭೀರವಾಗಿ ಗಾಯಗೊಂಡಿದ್ದಾನೆ. ಆಂಬುಲೆನ್ಸ್ ಮತ್ತು ಕಾರಿನ ನಡುವೆ ನಡೆದ ಈ ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಗಾಯಾಳು ದೀಪಕ್​ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರುಗಳ ಮಧ್ಯೆ ಡಿಕ್ಕಿ, ಮೂವರು MBBS ವಿದ್ಯಾರ್ಥಿಗಳ ಸಾವು