ವರ್ಗಾವಣೆಗೂ ಮುನ್ನ ಭೂ ಅಕ್ರಮದ ಬಗ್ಗೆ ತನಿಖೆಗೆ ಆದೇಶಿಸಿದ ರೋಹಿಣಿ ಸಿಂಧೂರಿ; ಆದೇಶ ಪ್ರತಿ ವೈರಲ್

| Updated By: ganapathi bhat

Updated on: Jun 09, 2021 | 9:07 PM

ಮುಡಾ ಆಯುಕ್ತರಿಗೆ ರೋಹಿಣಿ ಸಿಂಧೂರಿ ನಿರ್ದೇಶಿಸಿರುವ ಆದೇಶದ ಪ್ರತಿ ವೈರಲ್ ಆಗಿದೆ. ಪ್ರಭಾವಿಯೊಬ್ಬರಿಂದ ಲಿಂಗಾಬುಧಿ ಕೆರೆ ಬಳಿ 2 ಎಕರೆ ಅಕ್ರಮ ಮಾಡಲಾಗಿದೆ. ಸರ್ವೆ ನಂಬರ್ 124/2ರಲ್ಲಿ ಅಕ್ರಮ ಬಗ್ಗೆ ತನಿಖೆಗೆ ಸೂಚನೆ ನೀಡಲಾಗಿದೆ.

ವರ್ಗಾವಣೆಗೂ ಮುನ್ನ ಭೂ ಅಕ್ರಮದ ಬಗ್ಗೆ ತನಿಖೆಗೆ ಆದೇಶಿಸಿದ ರೋಹಿಣಿ ಸಿಂಧೂರಿ; ಆದೇಶ ಪ್ರತಿ ವೈರಲ್
ಈಜುಕೊಳ ನಿರ್ಮಾಣದಲ್ಲಿ ಅಕ್ರಮ ಎಸಗಿಲ್ಲ ಎಂದ ಸಿಂಧೂರಿ; ಒಂದೇ ದಿನದಲ್ಲಿ 2 ವರದಿ ಮಂಡಿಸಿದ ಪ್ರಾದೇಶಿಕ ಆಯುಕ್ತ? ಈಜುಕೊಳದ ಒಳಸುಳಿ ಏನು?
Follow us on

ಮೈಸೂರು: ಇಲ್ಲಿನ ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ವರ್ಗಾವಣೆಗೂ ಮುನ್ನ ಭೂ ಅಕ್ರಮದ ಬಗ್ಗೆ ತನಿಖೆಗೆ ಆದೇಶ ಹೊರಡಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಮೈಸೂರಿನ ಭೂ ಅಕ್ರಮ ವಿಚಾರವಾಗಿ ತನಿಖೆಗೆ ಆದೇಶಿಸಿರುವ ಅಂದಿನ ಡಿಸಿ ರೋಹಿಣಿ ಸಿಂಧೂರಿ ಸೂಕ್ತ ಮಾಹಿತಿಗೆ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಈಗ ಜಿಲ್ಲಾಧಿಕಾರಿ ನೀಡಿರುವ ಆದೇಶದ ಪ್ರತಿಗಳು ವೈರಲ್ ಆಗಿದೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೇಯರ್ ಶಿಲ್ಪಾ ನಾಗ್ ಪ್ರಕರಣ ರಾಜ್ಯದ ಗಮನ ಸೆಳೆದಿತ್ತು. ಬಳಿಕ, ಇಬ್ಬರು ಅಧಿಕಾರಿಗಲ ವರ್ಗಾವಣೆಗೆ ಆದೇಶಿಸುವ ಮೂಲಕ ಪ್ರಕರಣ ಒಂದು ಹಂತದ ಕೊನೆಕಂಡಿತ್ತು. ಇದೀಗ ಮತ್ತೆ ಈ ವಿಚಾರ ಸಾಮಾಜಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಮುಡಾ ಆಯುಕ್ತರಿಗೆ ರೋಹಿಣಿ ಸಿಂಧೂರಿ ನಿರ್ದೇಶಿಸಿರುವ ಆದೇಶದ ಪ್ರತಿ ವೈರಲ್ ಆಗಿದೆ. ಪ್ರಭಾವಿಯೊಬ್ಬರಿಂದ ಲಿಂಗಾಬುಧಿ ಕೆರೆ ಬಳಿ 2 ಎಕರೆ ಅಕ್ರಮ ಮಾಡಲಾಗಿದೆ. ಸರ್ವೆ ನಂಬರ್ 124/2ರಲ್ಲಿ ಅಕ್ರಮ ಬಗ್ಗೆ ತನಿಖೆಗೆ ಸೂಚನೆ ನೀಡಲಾಗಿದೆ. ಕೇರ್ಗಳ್ಳಿ ಗ್ರಾಮದ ಸರ್ವೆ ನಂಬರ್ 155ರಲ್ಲಿ ಭೂ ಅಕ್ರಮ ನಡೆದಿದೆ.

ಈ ಬಗ್ಗೆ ತಪ್ಪು ಮಾಹಿತಿ ನೀಡಿರುವವರ ವಿರುದ್ಧ ಕ್ರಮಕೈಗೊಳ್ಳಿ. ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಲು ಆಯುಕ್ತರಿಗೆ ಸೂಚನೆ ನೀಡಿಲಾಗಿದೆ. ಜೂನ್ 4, 5ರಂದು ಮುಡಾ ಆಯುಕ್ತರಿಗೆ ನಿರ್ದೇಶಿಸಿರುವ ಆದೇಶದ ಪ್ರತಿ ಇದೀಗ ವೈರಲ್ ಆಗಿದೆ.

ಕಾಂಗ್ರೆಸ್ ಅಭ್ಯರ್ಥಿ ಮೇಯರ್ ಆಗುವುದು ಬಹುತೇಕ ಖಚಿತ
ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ವಿಚಾರವಾಗಿ ಲಭ್ಯವಾಗಿರುವ ಮಾಹಿತಿಯಂತೆ, ಕಾಂಗ್ರೆಸ್ ಅಭ್ಯರ್ಥಿ ಮೇಯರ್ ಆಗುವುದು ಬಹುತೇಕ ಖಚಿತವಾಗಿದೆ. ಈ ಬಾರಿ‌ ಮೈಸೂರು ಮೇಯರ್ ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ, ಮುಂದಿನ ಬಾರಿ‌ ಮೇಯರ್, ಉಪ ಮೇಯರ್ ಸ್ಥಾನ ಜೆಡಿಎಸ್​ಗೆ. ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಸ್ಪಷ್ಟನೆ ನೀಡಿದ್ದಾರೆ.

ಸಾ.ರಾ.ಮಹೇಶ್ ಪ್ರಸ್ತಾವನೆಯನ್ನು ಹೈಕಮಾಂಡ್​ ಒಪ್ಪಿದೆ. ಈ‌ ಬಾರಿ ಮೇಯರ್ ಸ್ಥಾನ ಕಾಂಗ್ರೆಸ್​ ತೆಗೆದುಕೊಳ್ಳಲಿ. ಮುಂದಿನ ಬಾರಿ ಮೇಯರ್, ಉಪ ಮೇಯರ್ ಜೆಡಿಎಸ್​ಗೆ ಬಿಡಿ ಎಂಬ ಸಾ.ರಾ.ಮಹೇಶ್ ಪ್ರಸ್ತಾವನೆಗೆ ನಮ್ಮ ಹೈಕಮಾಂಡ್​ ಒಪ್ಪಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Rohini Sindhuri : ಯಾವ ಜಿಲ್ಲೆ, ಸಂಸ್ಥೆಗೂ ಈ ರೀತಿ ಆಗಬಾರದು. ರೋಹಿಣಿ ಸಿಂಧೂರಿ ಬೇಸರದ ಮಾತು

Sa Ra Mahesh on DK Ravi : ರೋಹಿಣಿ ಸಿಂಧೂರಿ ಬಗ್ಗೆ ಸಿನೆಮಾ ಬಂದ್ರೆ ಡಿಕೆ ರವಿ ಬಗ್ಗೆ ಸಿನೆಮಾ ಮಾಡ್ತೀನಿ