Covid-19 Karnataka Update: ಕರ್ನಾಟಕದಲ್ಲಿ ಒಂದೇ ದಿನ 10,959 ಮಂದಿಗೆ ಕೊರೊನಾ ಸೋಂಕು, 192 ಸಾವು

ಬೆಂಗಳೂರಲ್ಲಿ 2,395 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 50 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 27,28,248ಕ್ಕೆ ಏರಿಕೆಯಾಗಿದೆ.

Covid-19 Karnataka Update: ಕರ್ನಾಟಕದಲ್ಲಿ ಒಂದೇ ದಿನ 10,959 ಮಂದಿಗೆ ಕೊರೊನಾ ಸೋಂಕು, 192 ಸಾವು
ಸಾಂದರ್ಭಿಕ ಚಿತ್ರ
Follow us
| Edited By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 09, 2021 | 8:06 PM

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ ಮತ್ತೆ 10 ಸಾವಿರದ ಗಡಿ ದಾಟಿದೆ. ನಿನ್ನೆಯಷ್ಟೇ ಸೋಂಕಿತರ ಒಂದು ದಿನದ ಸಂಖ್ಯೆ 10 ಸಾವಿರಕ್ಕಿಂತಲೂ ಕಡಿಮೆ ವರದಿಯಾಗಿತ್ತು. ಬುಧವಾರ (ಜೂನ್ 9) ಒಂದೇ ದಿನ ಒಟ್ಟು 10,959 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 192 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ 2,395 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 50 ಜನರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 27,28,248ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 24,80,411 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 32,291 ಜನರು ಮೃತಪಟ್ಟಿದ್ದಾರೆ. 2,15,525 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 2395 ಜನರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 11,89.541ಕ್ಕೆ ಏರಿಕೆಯಾಗಿದೆ. ಈ ಪೈಕಿ 10,76,247 ಜನರು ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 50 ಜನರು ಮೃತಪಟ್ಟಿದ್ದಾರೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ ಸತ್ತವರ ಒಟ್ಟು ಸಂಖ್ಯೆ 15,168ಕ್ಕೆ ಏರಿಕೆಯಾಗಿದೆ. 98,125 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಕು? ರಾಜ್ಯದಲ್ಲಿಂದು ಹೊಸದಾಗಿ 10,959 ಜನರಿಗೆ ಕೊರೊನಾ ದೃಢಪಟ್ಟಿದೆ. ಬೆಂಗಳೂರು ನಗರದಲ್ಲಿ ಅತಿಹೆಚ್ಚು, ಅಂದರೆ 2395 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಉಳಿದಂತೆ ಬಾಗಲಕೋಟೆ 96, ಬಳ್ಳಾರಿ 211, ಬೆಳಗಾವಿ 341, ಬೆಂಗಳೂರು ಗ್ರಾಮಾಂತರ 385, ಬೀದರ್ 9, ಚಾಮರಾಜನಗರ 254, ಚಿಕ್ಕಬಳ್ಳಾಪುರ 268, ಚಿಕ್ಕಮಗಳೂರು 339, ಚಿತ್ರದುರ್ಗ 200, ದಕ್ಷಿಣ ಕನ್ನಡ 594, ದಾವಣಗೆರೆ 227, ಧಾರವಾಡ 275, ಗದಗ 95, ಹಾಸನ 745, ಹಾವೇರಿ 97, ಕಲಬುರಗಿ 48, ಕೊಡಗು 216, ಕೋಲಾರ 239, ಕೊಪ್ಪಳ 157, ಮಂಡ್ಯ 397, ಮೈಸೂರು 1163, ರಾಯಚೂರು 20, ರಾಮನಗರ 50, ಶಿವಮೊಗ್ಗ 562, ತುಮಕೂರು 662, ಉಡುಪಿ 413, ಉತ್ತರ ಕನ್ನಡ 312, ವಿಜಯಪುರ 158, ಯಾದಗಿರಿ 31 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು? ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ಒಟ್ಟು 192 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಅತಿಹೆಚ್ಚು ಅಂದರೆ 50 ಜನರು ಸಾವನ್ನಪ್ಪಿದ್ದಾರೆ. ಮೈಸೂರು 22, ಹಾವೇರಿ 12, ಬಳ್ಳಾರಿ 11, ಧಾರವಾಡ, ಶಿವಮೊಗ್ಗದಲ್ಲಿ ತಲಾ 9, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಹಾಸನ, ತುಮಕೂರಿನಲ್ಲಿ ತಲಾ 8, ದಾವಣಗೆರೆ, ಕೋಲಾರದಲ್ಲಿ ತಲಾ 7, ಚಾಮರಾಜನಗರ 5, ಕೊಪ್ಪಳ, ಉಡುಪಿದಲ್ಲಿ ತಲಾ 4, ಚಿಕ್ಕಮಗಳೂರು, ದಕ್ಷಿಣ ಕನ್ನಡ, ವಿಜಯಪುರದಲ್ಲಿ ತಲಾ 3, ಗದಗ, ರಾಯಚೂರು, ಉತ್ತರ ಕನ್ನಡದಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 32,291 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ಮಾಹಿತಿ ನೀಡಿದೆ.

(Coronavirus Karnataka Update 10959 People Infected 192 Death on June 9)

ಇದನ್ನೂ ಓದಿ: ಕೊರೊನಾಗೆ ಭಯಪಟ್ಟು ಗ್ರಾಮ ತೊರೆದ್ರು.. ಜಮೀನಿನಲ್ಲಿ ಗುಡಿಸಲು ಕಟ್ಟಿ ನೆಮ್ಮದಿಯ ಜೀವನ

ಇದನ್ನೂ ಓದಿ: ಹುಲಿ-ಸಿಂಹಗಳಲ್ಲಿ ಕೊರೊನಾ ವೈರಸ್​ ಕಾಣಿಸಿಕೊಳ್ಳುತ್ತಿರಲು ಕಾರಣವೇನು? ಬೆಕ್ಕುಗಳಿಗೇಕೆ ಅತಿ ಹೆಚ್ಚು ಕೊವಿಡ್​ 19 ಅಪಾಯ?

Published On - 8:02 pm, Wed, 9 June 21

ತಾಜಾ ಸುದ್ದಿ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್