ಹುಲಿ-ಸಿಂಹಗಳಲ್ಲಿ ಕೊರೊನಾ ವೈರಸ್ ಕಾಣಿಸಿಕೊಳ್ಳುತ್ತಿರಲು ಕಾರಣವೇನು? ಬೆಕ್ಕುಗಳಿಗೇಕೆ ಅತಿ ಹೆಚ್ಚು ಕೊವಿಡ್ 19 ಅಪಾಯ?
ಕಳೆದ ವರ್ಷ ಡಿಸೆಂಬರ್ನಲ್ಲಿ ಒಟ್ಟು 10 ಪ್ರಭೇದಗಳ ಮೇಲೆ ಪ್ರಯೋಗ ನಡೆದಿತ್ತು. ಅವುಗಳಲ್ಲಿ ಕೊರೊನಾ ಸೋಂಕಿನ ಸ್ಪೈಕ್ ಪ್ರೋಟಿನ್ನ್ನು ಯಾವ ಪ್ರಭೇದದ ACE2 ಹೆಚ್ಚಾಗಿ ಸ್ವೀಕರಿಸುತ್ತದೆ ಎಂಬುದನ್ನು ಅಧ್ಯಯನ ಮಾಡಲಾಗಿತ್ತು.
ಚೆನ್ನೈನ ವಂಡಾಲೂರು ಪ್ರಾಣಿಸಂಗ್ರಹಾಲಯದಲ್ಲಿರುವ ನೀಲಾ ಎಂಬ 9 ವರ್ಷದ ಹೆಣ್ಣು ಸಿಂಹ ಇತ್ತೀಚೆಗಷ್ಟೇ ಶಂಕಿತ ಕೊರೊನಾ ಸೋಂಕಿನಿಂದ ಕಳೆದವಾರ ಮೃತಪಟ್ಟಿದೆ. ಅದಕ್ಕೂ ಮೊದಲೂ ಮೂಗಿನಿಂದ ನೀರು ಸುರಿಯುತ್ತಿತ್ತು. ಅಂದಿನಿಂದಲೂ ಹುಲಿ, ಪ್ರಾಣಿಗಳ ಮೇಲೆ ಒಂದು ಕಣ್ಣಿಡಲಾಗಿದೆ. ಭೋಪಾಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ನಲ್ಲಿರುವ ಸುಮಾರು 9 ಸಿಂಹಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.
ಕಳೆದ ವಾರ ರಾಂಚಿಯ ಭಗವಾನ್ ಬಿರ್ಸಾ ಬಯಾಲಜಿಕಲ್ ಪಾರ್ಕ್ನಲ್ಲಿದ್ದ 10 ವರ್ಷದ ಹುಲಿಯೊಂದು ಜ್ವರದಿಂದ ಸಾವನ್ನಪ್ಪಿತ್ತು. ಮೃತ ಹುಲಿಯ ಗಂಟಲು ಮಾದರಿಯನ್ನು ಕೊರೊನಾ ಟೆಸ್ಟ್ಗೆ ಒಳಪಡಿಸಿದಾಗ ವರದಿ ನೆಗೆಟಿವ್ ಬಂದಿತ್ತು. ಆದರೂ ಅದರ ಒಳಾಂಗಗಳನ್ನು ಬರೇಲಿಯ ಭಾರತೀಯ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ ತಪಾಸಣೆಗಾಗಿ ಕಳಿಸಲಾಗಿತ್ತು. ಉಳಿದ ಹುಲಿಗಳಿಗೂ ತಪಾಸಣೆ ಮಾಡಲಾಗಿತ್ತು. ಹೀಗೆ ಪದೇಪದೆ ಪ್ರಾಣಿಗಳಿಗೂ ಕೊರೊನಾ ಬಾಧಿಸುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ.
ಹುಲಿ, ಸಿಂಹಗಳು ದುರ್ಬಲ ಪ್ರಾಣಿಗಳೇ? ಕೊರೊನಾ ವೈರಸ್ ತನ್ನ ಮೇಲ್ಮೈ ಮೇಲೆ ಸ್ಪೈಕ್ ಪ್ರೋಟಿನ್ ಹೊಂದಿರುತ್ತದೆ. ಈ ಸ್ಪೈಕ್ ಪ್ರೋಟಿನ್, ಯಾವುದೇ ಪ್ರಬೇಧದ ಜೀವಿಗಳ ದೇಹದಲ್ಲಿರುವ ACE2 ಎಂಬ ಆತಿಥೇಯ ಪ್ರೊಟೀನ್ ಜತೆ ಬಂಧಿಸಲ್ಪಟ್ಟು ಸೋಂಕನ್ನು ಉಂಟು ಮಾಡುತ್ತವೆ. ವಿವಿಧ ಪ್ರಭೇದದ ಜೀವಿಗಳು ವಿಭಿನ್ನ ರೀತಿಯಲ್ಲಿ ACE2ನ್ನು ಹೊರಸೂಸುತ್ತವೆ. ಆಯಾ ಜೀವಿಗಳಲ್ಲಿರುವ ACE2 ಪ್ರೊಟೀನ್ ಹೇಗೆ ಹೊಂದಿಕೊಳ್ಳುತ್ತದೆ ಎಂಬ ಆಧಾರದ ಮೇಲೆ ಸೋಂಕು ತಗುಲುವ ಪ್ರಮಾಣ ಆಧಾರಿತವಾಗುತ್ತಿದೆ. ಸಾಕು ಬೆಕ್ಕುಗಳು ಮತ್ತು ಅದೇ ಪ್ರಭೇದದ ದೊಡ್ಡ ಪ್ರಾಣಿಗಳಿಗೆ ಕೊರೊನಾ ಸೋಂಕು ತಗುಲುತ್ತದೆ ಎಂಬುದನ್ನು ಹಲವು ಅಧ್ಯಯನಗಳು ಸಾಬೀತುಪಡಿಸಿವೆ. ಮನುಷ್ಯರು ಮತ್ತು ಬೆಕ್ಕುಗಳ ದೇಹದಲ್ಲಿರುವ ACE2 ಪ್ರೋಟಿನ್ಗಳ ಮಾದರಿ ಒಂದೇ ತೆರೆನಾಗಿ ಇರುವುದಿರಂದ ಈ ಪ್ರಭೇದಗಳಲ್ಲಿ ಸೋಂಕಿನ ಆತಂಕ ಜಾಸ್ತಿಯಾಗಿರುತ್ತದೆ ಎಂಬುದು ಅಧ್ಯಯನಗಳ ವರದಿ ಹೇಳಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಒಟ್ಟು 10 ಪ್ರಭೇದಗಳ ಮೇಲೆ ಪ್ರಯೋಗ ನಡೆದಿತ್ತು. ಅವುಗಳಲ್ಲಿ ಕೊರೊನಾ ಸೋಂಕಿನ ಸ್ಪೈಕ್ ಪ್ರೋಟಿನ್ನ್ನು ಯಾವ ಪ್ರಭೇದದ ACE2 ಹೆಚ್ಚಾಗಿ ಸ್ವೀಕರಿಸುತ್ತದೆ ಎಂಬುದನ್ನು ಅಧ್ಯಯನ ಮಾಡಲಾಗಿತ್ತು. ಈ ಅಧ್ಯಯನದ ಪ್ರಕಾರ ಮನುಷ್ಯನನ್ನು ಬಿಟ್ಟರೆ ಅತಿ ವೇಗವಾಗಿ ಕೊರೊನಾ ಸೋಂಕಿಗೆ ಒಳಗಾಗುವ ಪ್ರಭೇದಗಳೆಂದರೆ ಫೆರೆಟ್, ಬೆಕ್ಕು ಮತ್ತು ಸಿವೆಟ್ಸ್ಗಳು ಎಂಬುದು ಸಾಬೀತಾಗಿದೆ.
ಬೆಕ್ಕುಗಳಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಇದರ ದೈತ್ಯತಳಿಗಳ ಜೀನೋಮ್ ಮೇಲೆ ನಾವು ಪ್ರಯೋಗ ನಡೆಸಿಲ್ಲ. ಆದರೆ ಹುಲಿ-ಸಿಂಹಗಳೂ ಈ ಪ್ರಭೇದಕ್ಕೆ ಹತ್ತಿರದಲ್ಲೇ ಇರುವುದರಿಂದ ಅವಕ್ಕೂ ಕೊರೊನಾ ತಗುಲುವ ಸಾಧ್ಯತೆ ಅಧಿಕವಾಗಿದೆ ಎಂದು ಪಿಎಲ್ಒಎಸ್ PLOS ಕಂಪ್ಯೂಟೇಶನಲ್ ಬಯಾಲಜಿಹ ಹಿರಿಯ ಲೇಖಕ ಲ್ಯೂಯಿಸ್ ಸೆರೆನೋ ಹೇಳಿದ್ದಾರೆ.
ಕಳೆದ ಆಗಸ್ಟ್ನಲ್ಲಿ ಫ್ರಂಟರೀಸ್ ಇನ್ ವೆಟರ್ನರಿ ಬಯಾಲಜಿಯಲ್ಲಿ ಈ ಬಗ್ಗೆ ವರದಿಯೊಂದು ಪ್ರಕಟವಾಗಿತ್ತು. ಬೊಲೊಗ್ನಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ್ದ ಅಧ್ಯಯನ ವರದಿ ಇದಾಗಿತ್ತು. ಈ ಅಧ್ಯಯನಕಾರರು ಆರು ಬೆಕ್ಕುಗಳು ಮತ್ತು ಒಂದು ಹುಲಿಯ ಅಂಗಾಂಶಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದರು. ಇವುಗಳ ಜಠರಗರುಳಿನ ಟ್ರ್ಯಾಕ್ಟ್ನಲ್ಲಿರುವ ACE2 ವ್ಯಾಪಕ ಅಭಿವ್ಯಕ್ತಿಯ ಬಗ್ಗೆ ಅಧ್ಯಯನ ಮಾಡಿದ್ದರು. ಈ ವೇಳೆ ಸೋಂಕಿಗೆ ಒಳಗಾಗುವ ಆತಂಕ ಹುಲಿಗಳಿಗಿಂತ, ಬೆಕ್ಕಿನಲ್ಲೇ ಜಾಸ್ತಿ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: Viral Video: ವರ ಪಕ್ಕದಲ್ಲಿರುವಾಗಲೇ ಸ್ನೇಹಿತ ಕೊಟ್ಟ ಗಿಫ್ಟ್ ನೋಡು ವಧು ಕಂಗಾಲು! ಏನದು ಕುತೂಹಲ ಕೆರಳಿಸಿದ ಉಡುಗೊರೆ?
Published On - 2:56 pm, Wed, 9 June 21