AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವರ ಪಕ್ಕದಲ್ಲಿರುವಾಗಲೇ ಸ್ನೇಹಿತ ಕೊಟ್ಟ ಗಿಫ್ಟ್​ ನೋಡಿ ವಧು ಕಂಗಾಲು! ಏನದು ಕುತೂಹಲ ಕೆರಳಿಸಿದ ಉಡುಗೊರೆ?

ಮದುವೆಯಲ್ಲಿ ಉಡುಗೊರೆ ಏನು ಬರಬಹುದು ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಬರುವ ಉಡುಗೊರೆಯ ಕುರಿತಾಗಿ ನಿರೀಕ್ಷೆಗಳೂ ಇರಬಹುದು. ಇನ್ನೊಂದಿಷ್ಟು ಗಿಫ್ಟ್​ಗಳು ನಗು ತರಿಸುತ್ತವೆ. ಸ್ನೇಹಿತರು ಪ್ಲಾನ್​ ಮಾಡಿ ತಂದ ಗಿಫ್ಟ್​ ನೋಡಿದ್ರೆ ನೀವೂ ನಗುತ್ತೀರಾ.

Viral Video: ವರ ಪಕ್ಕದಲ್ಲಿರುವಾಗಲೇ ಸ್ನೇಹಿತ ಕೊಟ್ಟ ಗಿಫ್ಟ್​ ನೋಡಿ ವಧು ಕಂಗಾಲು! ಏನದು ಕುತೂಹಲ ಕೆರಳಿಸಿದ ಉಡುಗೊರೆ?
ವರ ಪಕ್ಕದಲ್ಲಿರುವಾಗಲೇ ಸ್ನೇಹಿತ ಕೊಟ್ಟ ಗಿಫ್ಟ್​ ನೋಡು ವಧು ಕಂಗಾಲು!
TV9 Web
| Updated By: Digi Tech Desk|

Updated on:Jun 09, 2021 | 6:43 PM

Share

ಮದುವೆ ಅಂದಾಕ್ಷಣ ಮನೆಯ ತುಂಬ ಜನ. ಎಲ್ಲರ ಮುಖದಲ್ಲಿ ಸಂತೋಷ. ವರ-ವಧುವಿಗೆ ಹೊಸ ಅನುಭವ. ಮೋಜು-ಮಸ್ತಿಯಲ್ಲಿ ಹೊಸ ಜೀವನಕ್ಕೆ ಕಾಲಿಡುವ ಒಂದು ಸಾಂಪ್ರದಾಯಿಕ ಆಚರಣೆಯದು. ಬಣ್ಣ-ಬಣ್ಣದ ಉಡುಪು ತೊಟ್ಟು ಮದುವೆ ಹಾಲ್​ ತುಂಬಾ ಮಕ್ಕಳೆಲ್ಲಾ ಖುಷಿಯಿಂದ ಓಡಾಡುತ್ತಾರೆ. ಅದೆಷ್ಟೋ ವರ್ಷಗಳ ಬಳಿಗ ಮದುವೆಗೆಂದೇ ಸ್ನೇಹಿತರು ಬಂದಿರುವುದು ವರ-ವಧುವಿಗೆ ಸಂತಸ. ತಮಾಷೆಗಾಗಿ ಇಂದಿಷ್ಟು ಕಾಲೆಳೆಯುತ್ತಾ ಮೋಜು-ಮಸ್ತಿಯೊಂದಿಗೆ ಸಂಭ್ರಮ ಸುಸೂತ್ರವಾಗಿ ನೆರವೇರುತ್ತದೆ. ಮದುವೆಯಲ್ಲಿ, ಸ್ನೇಹಿತ ಕೊಟ್ಟ ಉಡುಗೊರೆ ನೋಡಿ ವಧು ಕಂಗಾಲಾಗಿದ್ದಾಳೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸುದ್ದಿಯಲ್ಲಿದೆ. 

ಸಂಭ್ರಮದ ಜತೆಗೆ ಒಂದಿಷ್ಟು ಉಡುಗೊರೆ, ತುಂಟಾಟ, ವಧು-ವರದದ ಸ್ನೇಹಿತರೆಲ್ಲಾ ಒಟ್ಟುಗೂಡಿ ವಧು ವರರ ಕಾಲೆಡೆಯುತ್ತಾ ತಮಾಷೆ ಮಾಡುತ್ತಾ ಮನೆತುಂಬ ತಿರುಗಾಡುತ್ತಾರೆ. ಇಲ್ಲೋರ್ವ ಸ್ನೇಹಿತ ಮಧುವಿಗೆ ಒಂದು ಸರ್ಪ್ರೈಸ್​ ಗಿಫ್ಟ್​ ನೀಡಿದ್ದಾನೆ. ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

ಮದುವೆಯಲ್ಲಿ ಉಡುಗೊರೆ ಏನು ಬರಬಹುದು ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಬರುವ ಉಡುಗೊರೆಯ ಕುರಿತಾಗಿ ನಿರೀಕ್ಷೆಗಳೂ ಇರಬಹುದು. ಇನ್ನೊಂದಿಷ್ಟು ಗಿಫ್ಟ್​ಗಳು ನಗು ತರಿಸುತ್ತವೆ. ಸ್ನೇಹಿತರು ಪ್ಲಾನ್​ ಮಾಡಿ ತಂದ ಗಿಫ್ಟ್​ ನೋಡಿದ್ರೆ ನೀವೂ ನಗುತ್ತೀರಾ.

ಸ್ನೇಹಿರತೆಲ್ಲಾ ಸೇರಿ ಗಿಫ್ಟ್​ ಬಾಕ್ಸ್​ನಿಂದ ಒಂದೊಂದೆ ಉಡುಗೊರೆಯನ್ನು ಹೊರತೆಗೆಯುತ್ತಾರೆ. ಮೊದಲಿಗೆ ಅಡುಗೆ ಮಾಡುವ ಸೌಟು, ಸಿಲಿಂಡರ್​ ಹೀಗೆ ಒಂದಾದ ಮೇಲೊಂದು ಗಿಫ್ಟ್​ಗಳನ್ನು ವಧುವಿಗೆ ನೀಡುತ್ತಾರೆ. ಕೊನೆಯಲ್ಲಿ ರೊಟ್ಟಿ ತಟ್ಟುವ ಲಟ್ಟಣಿಗೆಯನ್ನು ವಧುವಿನ ಕೈಯಲ್ಲಿ ಹಿಡಿಸಿ ಫೋಟೋ ತೆಗೆಸಿಕೊಂಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಮೊದಲು ವಿಡಿಯೋ ಹಂಚಿಕೊಳ್ಳಲಾಗಿದೆ. ನಂತರ ಫೇಸ್​ಬುಕ್​, ಟ್ವಿಟರ್​ ಹೀಗೆ ವಿವಿಧ ಪ್ಲಾಟ್​ಫಾರ್ಮ್​ಗಳಲ್ಲಿ ಪೋಸ್ಟ್​ ಮಾಡಲಾಗಿದೆ. ವಿಡಿಯೋ ನೋಡುತ್ತಿದ್ದಂತೆಯೆ ನೆಟ್ಟಿಗರು, ಇನ್ನುಮುಂದೆ ವರನ ಕಥೆ ಮುಗಿಯಿತು. ವಧುವಿನ ಕೈಯಲ್ಲಿ ರೊಟ್ಟಿ ತಟ್ಟುವ ಲಟ್ಟಣಿಗೆ ಸಿಕ್ಕರೆ ಕೇಳಬೇಕೆ? ಎಂದು ತಮಾಷೆ ಮಾಡಿದ್ದಾರೆ. ಸ್ನೇಹಿತರು ಬಾರಿ ಕಿಲಾಡಿಗಳು.. ಪ್ಲಾನ್​ ಮಾಡಿ ಒಳ್ಳೆಯ ಉಡುಗೊರೆಯನ್ನೇ ಕೊಟ್ಟಿದ್ದಾರೆ ಎಂದು ಇನ್ನು ಕೆಲವರು ನಗುತ್ತಾ ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

Viral Video: ನಾಯಿಯಿಂದಾದ ಅಚಾತುರ್ಯಕ್ಕೆ ವ್ಯಕ್ತಿಗೆ ಶಿಕ್ಷೆ! ನಿಜವಾಗಿಯೂ ಏನಾಯ್ತು ಅಲ್ಲಿ?

Viral Video: ಒಂದು ಕಾಲು ಕಳೆದುಕೊಂಡರೇನು? ಈಕೆಯ ಸಾಲ್ಸಾ ನೃತ್ಯ ನೋಡಿದರೆ ನಾವೇ ನಾಚಬೇಕು!

Published On - 2:46 pm, Wed, 9 June 21

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!