Viral Video: ಸಮವಸ್ತ್ರದಲ್ಲೇ ಹಿಂದಿ ಹಾಡಿಗೆ ಆ್ಯಕ್ಟಿಂಗ್​; ಜವಾಬ್ದಾರಿ ಮರೆತ ಪೊಲೀಸರಿಗೆ ಶೋಕಾಸ್​ ನೋಟಿಸ್​

ಇಬ್ಬರು ಪೊಲೀಸ್​ ಕಾನ್​ಸ್ಟೇಬಲ್​ ಕೂಡಾ, ಟುಕುರ್​ ಟುಕುರ್​ ದೇಕ್ತೇ ಹೋ ಕ್ಯಾ.. ಬಾಲಿವುಡ್​ ಹಾಡಿಗೆ ಆ್ಯಕ್ಟ್​ ಮಾಡಿದ್ದಾರೆ.​ ಸಮವಸ್ತ್ರದಲ್ಲಿಯೇ ಆ್ಯಕ್ಟ್​ ಮಾಡಿರುವುದು ವಿಡಿಯೋ ಮೂಲಕ ಸ್ಪಷ್ಟವಾಗಿದೆ.

Viral Video: ಸಮವಸ್ತ್ರದಲ್ಲೇ ಹಿಂದಿ ಹಾಡಿಗೆ ಆ್ಯಕ್ಟಿಂಗ್​; ಜವಾಬ್ದಾರಿ ಮರೆತ ಪೊಲೀಸರಿಗೆ ಶೋಕಾಸ್​ ನೋಟಿಸ್​
ಸಮವಸ್ತ್ರದಲ್ಲೇ ಹಿಂದಿ ಹಾಡಿಗೆ ಆ್ಯಕ್ಟಿಂಗ್
Follow us
TV9 Web
| Updated By: shruti hegde

Updated on:Jun 09, 2021 | 4:36 PM

ದೆಹಲಿ ಪೊಲೀಸರಿಬ್ಬರು ಹಿಂದಿ ಹಾಡಿಗೆ ನೃತ್ಯ ಮಾಡಿದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಬಾರೀ ಚರ್ಚೆಯಾಗಿದೆ. ಇದೀಗ, ಕರ್ತವ್ಯದಲ್ಲಿದ್ದಾಗಲೇ ಸಮವಸ್ತ್ರ ಧರಿಸಿ ಮನೋರಂಜನಾ ವಿಡಿಯೋ ಮಾಡಿದ್ದರಿಂದ ಶೋಕಾಸ್​ ನೊಟೀಸ್​ ನೀಡಲಾಗಿದೆ.

ಇಬ್ಬರು ಪೊಲೀಸ್​ ಕಾನ್​ಸ್ಟೇಬಲ್​ ಕೂಡಾ, ಟುಕುರ್​ ಟುಕುರ್​ ದೇಕ್ತೇ ಹೋ ಕ್ಯಾ.. ಬಾಲಿವುಡ್​ ಹಾಡಿಗೆ ಆ್ಯಕ್ಟ್​ ಮಾಡಿದ್ದಾರೆ.​ ಸಮವಸ್ತ್ರದಲ್ಲಿಯೇ ಆ್ಯಕ್ಟ್​ ಮಾಡಿರುವುದು ವಿಡಿಯೋ ಮೂಲಕ ಸ್ಪಷ್ಟವಾಗಿದೆ. ಸಾಮಾಜಿಕ ಜಾತಲಾಣದಲ್ಲಿ ಪೋಸ್ಟ್​ ಮಾಡುತ್ತಿದ್ದಂತೆಯೇ ಪರ-ವಿರೋಧ ಚರ್ಚೆಗಳಿಗೆ ಕಾರಣವಾಯಿತು. ಕೆಲವೇ ಗಂಟೆಗಳಲ್ಲಿ ವಿಡಿಯೋ ವೈರಲ್​ ಆಗಿದ್ದು, ಇಬ್ಬರು ಕಾನ್​ಸ್ಟೇಬಲ್​ಗಳಿಗೂ ಶೋಕಾಸ್​ ನೋಟಿಸ್​ ನೀಡಲಾಗಿದೆ.

ವರದಿಯ ಪ್ರಕಾರ, ಮಾಡೆಲ್​ ಟೌಲ್​ ಪೊಲೀಸ್​ ಠಾಣೆಯ ಮಹಿಳಾ ಹೆಡ್​ ಕಾನ್​ಸ್ಟೇಬಲ್​ ಶಶಿ ಮತ್ತು ಕಾನ್​ಸ್ಟೇಬಲ್​ ವಿವೇಕ್​ ಮಾಥುರ್​ ಅವರು ಕರ್ತವ್ಯ ನಿರ್ಲಕ್ಷ್ಯ ತೋರಿದ್ದರಿಂದ ಹಾಗೂ ಸಮವಸ್ತ್ರದಲ್ಲಿಯೇ ಹಿಂದಿ ಹಾಡಿಗೆ ಆ್ಯಕ್ಟ್​ ಮಾಡಿರುವುದರಿಂದ ಇವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ದೆಹಲಿ ಡಿಸಿಪಿ ಉಷಾ ರಂಗ್ನಾನಿ ನೋಟೀಸ್​ ನೀಡಿದ್ದಾರೆ.

ಕೊವಿಡ್​ ಸಮಯದಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸಲಾಗಿದೆ. ಹೀಗಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಇಬ್ಬರೂ ಕೂಡಾ ಮಾಸ್ಕ್​ ಧರಿಸಲ್ಲ. ಕೊವಿಡ್​19 ಸೋಂಕು ಹರಡುತ್ತಿರುವ ಸಮಯದಲ್ಲಿ ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಎಂದು ಅಧಿಕಾರಿಗಳು ನೊಟೀಸ್​ ನೀಡಿದ್ದಾರೆ. ವೃತ್ತಿಗೆ ತಕ್ಕನಾದ ನಡತೆಯನ್ನು ತೋರುವಲ್ಲಿ ಅವರು ವಿಫಲರಾಗಿದ್ದಾರೆ. ಕರ್ತವ್ಯದಲ್ಲಿದ್ದಾಗ ಅಜಾಗರೂಕತೆ, ನಿರ್ಲಕ್ಷ್ಯತನವನ್ನು ತೋರಿದ್ದಾರೆ. ಈ ಕುರಿತಂತೆ ಶೋಕಾಸ್​ ನೋಡಿಸ್​ ನೀಡಲಾಗಿದೆ.

ಇದನ್ನೂ ಓದಿ:

Viral Video: ವರ ಪಕ್ಕದಲ್ಲಿರುವಾಗಲೇ ಸ್ನೇಹಿತ ಕೊಟ್ಟ ಗಿಫ್ಟ್​ ನೋಡು ವಧು ಕಂಗಾಲು! ಏನದು ಕುತೂಹಲ ಕೆರಳಿಸಿದ ಉಡುಗೊರೆ?

Viral Video: ನಾಯಿಯಿಂದಾದ ಅಚಾತುರ್ಯಕ್ಕೆ ವ್ಯಕ್ತಿಗೆ ಶಿಕ್ಷೆ! ನಿಜವಾಗಿಯೂ ಏನಾಯ್ತು ಅಲ್ಲಿ?

Published On - 4:30 pm, Wed, 9 June 21