AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 28 ಪತ್ನಿಯರು, 35 ಮಕ್ಕಳೆದುರು 37ನೇ ಮದುವೆಯಾದ ಧೈರ್ಯಶಾಲಿ ವ್ಯಕ್ತಿ..!

ಐಪಿಎಸ್​ ಅಧಿಕಾರಿ ರುಪಿನ್​ ಶರ್ಮಾ ಎಂಬುವರು 45 ಸೆಕೆಂಡ್​​ಗಳ ವಿಡಿಯೋವನ್ನು ಪೋಸ್ಟ್​ ಮಾಡಿದ್ದು, ಅತ್ಯಂತ ಧೈರ್ಯಶಾಲಿ ವ್ಯಕ್ತಿ ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ. ಆದರೆ ಈ ವಿಡಿಯೋ ಎಲ್ಲಿ, ಯಾವಾಗ ಚಿತ್ರೀಕರಿಸಿದ್ದು ಎಂಬುದು ಗೊತ್ತಾಗಿಲ್ಲ.

Viral Video: 28 ಪತ್ನಿಯರು, 35 ಮಕ್ಕಳೆದುರು 37ನೇ ಮದುವೆಯಾದ ಧೈರ್ಯಶಾಲಿ ವ್ಯಕ್ತಿ..!
37ನೇ ಮದುವೆಯಾದ ಹಿರಿಯ ವ್ಯಕ್ತಿ
Follow us
TV9 Web
| Updated By: Lakshmi Hegde

Updated on:Jun 09, 2021 | 11:16 AM

ಹಿಂದೆಲ್ಲ ರಾಜರು ಡಜನ್​​ಗಟ್ಟಲೆ ಮದುವೆಯಾಗುತ್ತಿದ್ದರು ಎಂಬ ಕತೆಗಳನ್ನು ಓದಿದ್ದೇವೆ. ರಾಜ ಎಷ್ಟೇ ಮದುವೆಯಾದರೂ ಉಳಿದ ಪತ್ನಿಯರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರಲಿಲ್ಲ. ಆದರೆ ಈಗೆಲ್ಲ ಹಾಗಿಲ್ಲ. ಇಬ್ಬರು ಪತ್ನಿಯರು ಇದ್ದರೂ ಬೇರೆಬೇರೆ ಮನೆಯಲ್ಲೇ ಇರುತ್ತಾರೆ. ಒಂದು ಮದುವೆಯಾಗಿದ್ದು, ಇನ್ನೊಬ್ಬಳು ಪತ್ನಿಗೆ ಗೊತ್ತಾಗದಂತೆ ನೋಡಿಕೊಳ್ಳುವವರೇ ತುಂಬ ಮಂದಿ ಇದ್ದಾರೆ. ಆದರೆ ಈ 21ನೇ ಶತಮಾನದಲ್ಲೂ ವ್ಯಕ್ತಿಯೊಬ್ಬ ಬರೋಬ್ಬರಿ 37 ಮದುವೆಯಾಗಿದ್ದಾನೆ. ಅದೂ, ಉಳಿದ ಪತ್ನಿಯರ ಎದುರಿಗೇ 37ನೇ ಪತ್ನಿಯನ್ನು ವರಿಸಿದ್ದಾನೆ. ಹಿರಿಯ ವ್ಯಕ್ತಿಯೊಬ್ಬರು ಮದುವೆಯಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಅವರ 37ನೇ ಮದುವೆ ಎಂದು ಹೇಳಲಾಗಿದ್ದು, ಈ ವಿವಾಹಕ್ಕೆ ಅವರ ಉಳಿದ 28 ಪತ್ನಿಯರು, 35 ಮಕ್ಕಳು ಮತ್ತು 126 ಮರಿಮೊಮ್ಮಕ್ಕಳು ಸಾಕ್ಷಿಯಾಗಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.

ಐಪಿಎಸ್​ ಅಧಿಕಾರಿ ರುಪಿನ್​ ಶರ್ಮಾ ಎಂಬುವರು 45 ಸೆಕೆಂಡ್​​ಗಳ ವಿಡಿಯೋವನ್ನು ಪೋಸ್ಟ್​ ಮಾಡಿದ್ದು, ಅತ್ಯಂತ ಧೈರ್ಯಶಾಲಿ ವ್ಯಕ್ತಿ ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ. ಆದರೆ ಈ ವಿಡಿಯೋ ಎಲ್ಲಿ, ಯಾವಾಗ ಚಿತ್ರೀಕರಿಸಿದ್ದು ಎಂಬುದು ಗೊತ್ತಾಗಿಲ್ಲ. ಆದರೆ ನೆಟ್ಟಿಗರು ವಿವಿಧ ಕಾಮೆಂಟ್​​ಗಳನ್ನು ಹಾಕಿದ್ದಾರೆ.

ಈ ಹಿಂದೆ ತೈವಾನ್​​ನ ವ್ಯಕ್ತಿಯೊಬ್ಬ ಒಂದೇ ಮಹಿಳೆಯನ್ನು 37 ದಿನಗಳಲ್ಲಿ, ನಾಲ್ಕು ಬಾರಿ ಮದುವೆಯಾಗಿ, ಮೂರು ಬಾರಿ ವಿಚ್ಛೇದನ ನೀಡಿ ಸುದ್ದಿಯಾಗಿದ್ದರು. ವೇತನ ಸಹಿತ ರಜೆ ಪಡೆಯಲು ಈ ಐಡಿಯಾ ಮಾಡಿದ್ದ ಈತ ಒಬ್ಬ ಬ್ಯಾಂಕ್​ ಕ್ಲರ್ಕ್ ಆಗಿದ್ದರು. ಈತ ಕಳೆದ ಏಪ್ರಿಲ್​ 6ರಂದು ಮೊದಲಬಾರಿಗೆ ಮದುವೆಯಾಗಿದ್ದರು. ಆಗ ಅವರಿಗೆ ವೇತನ ಸಹಿತ ರಜೆ ಸಿಕ್ಕಿತ್ತು. ಅದು ಮುಗಿದ ಬಳಿಕ ಮತ್ತಷ್ಟು ರಜೆ ಪಡೆಯಲು ಹೀಗೆ ಪತ್ನಿಗೆ ಡಿವೋರ್ಸ್​ ಮಾಡಿ, ಮತ್ತೆ ಆಕೆಯನ್ನೇ ವಿವಾಹವಾಗಿದ್ದ. 37 ದಿನಗಳಲ್ಲಿ ಇದು ನಾಲ್ಕು ಬಾರಿ ಮರುಕಳಿಸಿತ್ತು.

ಇದನ್ನೂ ಓದಿ: Shirley Temple: ಶಿರ್ಲೆ ಟೆಂಪಲ್​ ಅವರಿಗೆ ಡೂಡಲ್​ ಮೂಲಕ ವಿಶೇಷ ಗೌರವ ಸಲ್ಲಿಸಿದ ಗೂಗಲ್​

Published On - 10:45 am, Wed, 9 June 21