Shirley Temple: ಶಿರ್ಲೆ ಟೆಂಪಲ್​ ಅವರಿಗೆ ಡೂಡಲ್​ ಮೂಲಕ ವಿಶೇಷ ಗೌರವ ಸಲ್ಲಿಸಿದ ಗೂಗಲ್​

Google Doodles: ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರೂ ಮೆಚ್ಚುವಂತಹ ಸಾಧನೆ ಮಾಡಿ ಇಂದಿಗೂ ಜನ-ಮನದಲ್ಲಿ ಹೆಸರು ಪಡೆದ ಶೆರ್ಲಿ ಟೆಂಪಲ್​ ಅವರಿಗೆ ಗೂಗಲ್​ ಡೀಡಲ್​ ವಿಶೇಷ ಗೌರವ ಸೂಚಿಸಿದೆ.

Shirley Temple: ಶಿರ್ಲೆ ಟೆಂಪಲ್​ ಅವರಿಗೆ ಡೂಡಲ್​ ಮೂಲಕ ವಿಶೇಷ ಗೌರವ ಸಲ್ಲಿಸಿದ ಗೂಗಲ್​
ಶಿರ್ಲೆ ಟೆಂಪಲ್​ ಅವರಿಗೆ ಗೂಗಲ್​ ಡೂಡಲ್​ ಮೂಲಕ ವಿಶೇಷ ಗೌರವ
Follow us
TV9 Web
| Updated By: shruti hegde

Updated on: Jun 09, 2021 | 10:03 AM

ಅಮೆರಿಕದ ನಟಿ, ಗಾಯಕಿ ಮತ್ತು ನರ್ತಕಿ  ಶೆರ್ಲಿ ಟೆಂಪಲ್​ ಅವರಿಗೆ ಗೂಗಲ್​ ಇಂದು( ಬುಧವಾರ) ಡೂಡಲ್​ ನೀಡಿ ಗೌರವಿಸಿದೆ. 2015ರಲ್ಲಿ ಸಾಂಟಾ ಮೊನಿಕಾ ಹಿಸ್ಟರಿ ಮ್ಯೂಸಿಯಂ ‘ಲವ್​ ಶೆರ್ಲಿ ಟೆಂಪಲ್​’ಅನ್ನು ನಿರ್ಮಿಸಲಾಯಿತು. ಶೆರ್ಲಿ ಅವರ ಅಪರೂಪದ ಸ್ಮರಣಿಕೆಗಳ ಸಂಗ್ರಹವನ್ನು ಒಳಗೊಂಡ ಮ್ಯೂಸಿಯಂ ಇದಾಗಿದೆ.

ಗೂಗಲ್​​ ಡೂಡಲ್​ನಲ್ಲಿ ಪ್ರಶಸ್ತಿ ವಿಜೇತ ನಟಿ ಮತ್ತು ಯುವ ನೃತ್ಯ ಯುವತಿಯಾಗಿ ಜನಪ್ರಿಯತೆ ಗಳಿಸಿಕೊಂಡ ಶೆರ್ಲಿ ಟೆಂಪಲ್​ ಅವರು ಕಾಣಿಸಿಕೊಂಡಿದ್ದಾರೆ. ಗೂಗಲ್​ ಸರ್ಚ್​ ಎಂಜಿನ್​ನ ಹೆಸರು ಡೂಡಲ್​ನ ಕೆಳ ಭಾಗದಲ್ಲಿ ಮೂರು ರೀತಿಯ ವಿವಿಧ ವಿನ್ಯಾಸದೊಂದಿಗೆ ಗೋಚರಿಸುತ್ತಿದೆ.

ಅಪ್ರತಿಮ ಬಾಲನಟಿಯಿಂದ ಅವರ ಸಾಧನೆಯು ಅಸಾಧಾರಣವಾಗಿದೆ. 1928 ಏಪ್ರಿಲ್​ 23 ರಂದು ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಜನಿಸಿದ ಶೆರ್ಲಿ ಟೆಂಪಲ್​ ಅವರು ಮೂರನೇ ತರಗತಿಯಲ್ಲಿದ್ದಾಗ ನರ್ತಕಿಯಾಗಿ ತರಗತಿ ನೀಡಲು ಪ್ರಾರಂಭಿಸಿದರು. 1934 ರಲ್ಲಿ ಹೊಂಬಣ್ಣದ ರಿಂಗ್ಲೆಟ್​ ಸುರುಳಿಗಳೊಂದಿಗೆ ನೃತ್ಯ ಮಾಡಿ ಎಲ್ಲರ ಮನಗೆದ್ದರು.

ಎಂಎಸ್​ ಟೆಂಪಲ್​ ಅವರು 1934ರಲ್ಲಿ ‘ಬ್ರೈಟ್​ ಐಸ್​’ ಚಿತ್ರದಲ್ಲಿ ನಟಿಸಿದರು. ಸಿನಿಮಾಗಳಲ್ಲಿಯೂ ಅವರು ಸಾಧನೆ ಮಾಡುತ್ತಾ ಅನೇಕ ಚಿತ್ರದಲ್ಲಿ ನಟಿಯಾಗಿ ಕಾಣಿಸಿಕೊಂಡರು. ತಮ್ಮ 6ನೇ ವಯಸ್ಸಿನಲ್ಲಿಯೇ ಅತ್ಯಂತ ಜನಪ್ರಿಯ ನಟಿಯಾಗಿ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿಕೊಂಡ ಹೆಗ್ಗಳಿಕೆಗೆ ಪಾತ್ರರಾದರು.

1942ರಲ್ಲಿ ನ್ಯೂಯಾರ್ಕ್​ನಲ್ಲಿ ಅಪ್ರತಿಮ ಸಾಧನೆಗೈದ ಹದಿಹರೆಯದ ಬಾಲಕಿ ‘ಜೂನಿಯರ್​ ಮಿಸ್​’ ಎಂಬ ಕೀರ್ತಿಯನ್ನು ಪಡೆದುಕೊಂಡರು. ಸಿನಿಮಾ ಕ್ಷೇತ್ರದಲ್ಲಿಯೂ ಅನೇಕ ಸಾಧನೆಗಳನ್ನು ಮಾಡಿ ತನ್ನ 22ನೇ ವಯಸ್ಸಿನಲ್ಲಿ ಚಲನಚಿತ್ರೋದ್ಯಮದದಿಂದ ಹಾಲಿವುಡ್​ ಐಕಾನ್​ ಪಟ್ಟ ಮುಡಿಗೇರಿಸಿಕೊಂಡರು. ಜನ-ಮನದಲ್ಲಿ ಇವರ ಹೆಸರು ಇಂದಿಗೂ ಉಳಿದಿದೆ.

1969 ರಲ್ಲಿ ಶೆರ್ಲಿ ಟೆಂಪಲ್​ ಅವರನ್ನು ವಿಶ್ವಸಂಸ್ಥೆಯ ಅಮೆರಿಕಾ ಪ್ರತಿನಿಧಿಯಾಗಿ ನೇಮಿಸಲಾಯಿತು. ಹೆಚ್ಚು ಪರಿಸರಕ್ಕೆ ಒತ್ತು ಕೊಟ್ಟು ಪರಿಸರವಾದಿಯಾಗಿ ರಾಜಕೀಯ ರಂಗದಲ್ಲಿ ಗುರುತಿಸಿಕೊಂಡರು. 1972ರ ಮಾನವ ಪರಿಸರ ಕುರಿತಾಗಿ ನಡೆದ ಸಮ್ಮೇಳನದಲ್ಲಿ ತನ್ನ ರಾಷ್ಟ್ರವನ್ನು ಪ್ರತಿನಿಧಿಸಿದರು. ಆ ಮೂಲಕ ರಾಜ್ಯ ಇಲಾಖೆಯ ಪ್ರಥಮ ಮಹಿಳಾ ಮುಖ್ಯಸ್ಥರಾಗಿ ನೇಮಕಗೊಂಡರು. ಹಾಗೂ ಅವರ ಸಾಮರ್ಥ್ಯವನ್ನು ಮೆಚ್ಚಿ 1988ರಲ್ಲಿ ವಿದೇಶಿ ಸೇವಾ ಅಧಿಕಾರಿಯಾಗಿ ನೇಮಕ ಮಾಡಲಾಯಿತು.

ಅವರು 2014 ಫೆಬ್ರವರಿ 10ರಂದು ತಮ್ಮ 85ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರೂ ಮೆಚ್ಚುವಂತಹ ಸಾಧನೆ ಮಾಡಿ ಇಂದಿಗೂ ಜನ-ಮನದಲ್ಲಿ ಹೆಸರು ಪಡೆದ ಶೆರ್ಲಿ ಟೆಂಪಲ್​ ಅವರಿಗೆ ಗೂಗಲ್​ ಡೀಡಲ್​ ವಿಶೇಷ ಗೌರವ ಸೂಚಿಸಿದೆ.

ಇದನ್ನೂ ಓದಿ:

Frank Kameny: ಅಮೆರಿಕ ಸಲಿಂಗಕಾಮ ಹಕ್ಕುಗಳ ಕಾರ್ಯಕರ್ತ ಫ್ರಾಂಕ್ ಕಾಮೆನಿ ಅವರಿಗೆ ವಿಶೇಷ ಗೂಗಲ್​ ಡೂಡಲ್​ ಗೌರವ

ಭಾರತದ ವೈವಿಧ್ಯತೆ ಸಾರಿದ ‘ಗೂಗಲ್ ಡೂಡಲ್​’; ಗಣರಾಜ್ಯೋತ್ಸವಕ್ಕೆ ಗೌರವ ಸಲ್ಲಿಸಿದ ಇಂಟರ್​ನೆಟ್​ ದೈತ್ಯ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ