Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಲಸಿಕೆ ನೀತಿಯ ನಂತರ ಕೊವಿಶೀಲ್ಡ್ ಮತ್ತು ಕೊವಾಕ್ಸಿನ್‌ನ 44 ಕೋಟಿ ಡೋಸ್‌ಗಳಿಗೆ ಕೇಂದ್ರ ಸರ್ಕಾರ ಆರ್ಡರ್

New Vaccine Policy: ರಾಷ್ಟ್ರೀಯ ಕೊವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮದ ಮಾರ್ಗಸೂಚಿಗಳಲ್ಲಿ ಈ ಬದಲಾವಣೆಗಳ ಬಗ್ಗೆ ಪ್ರಧಾನಮಂತ್ರಿಯವರ ಪ್ರಕಟಣೆಯನ್ನು ತಕ್ಷಣ ಅನುಸರಿಸುವಲ್ಲಿ, ಕೇಂದ್ರವು ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದೊಂದಿಗೆ 25 ಕೋಟಿ ಡೋಸ್ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಗೆ 19 ಕೋಟಿ ಡೋಸ್ ಕೊವಾಕ್ಸಿನ್ ಗೆ ಆರ್ಡರ್ ನೀಡಿದೆ.

ಹೊಸ ಲಸಿಕೆ ನೀತಿಯ ನಂತರ ಕೊವಿಶೀಲ್ಡ್ ಮತ್ತು ಕೊವಾಕ್ಸಿನ್‌ನ 44 ಕೋಟಿ ಡೋಸ್‌ಗಳಿಗೆ ಕೇಂದ್ರ ಸರ್ಕಾರ ಆರ್ಡರ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 09, 2021 | 1:05 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಲಸಿಕೆ ನೀತಿ ಘೋಷಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಕೊವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಯ44 ಕೋಟಿ ಡೋಸ್‌ಗಳಿಗೆ ಆರ್ಡರ್ ನೀಡಿದೆ. ಈ 44 ಕೋಟಿ ಡೋಸ್ ಕೊವಿಡ್ ಲಸಿಕೆಗಳನ್ನು ಅವುಗಳ ತಯಾರಕರು ಆಗಸ್ಟ್ ಮತ್ತು ಡಿಸೆಂಬರ್ 2021 ರ ನಡುವೆ ತಲುಪಿಸಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ರಾಷ್ಟ್ರೀಯ ಕೊವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮದ ಮಾರ್ಗಸೂಚಿಗಳಲ್ಲಿ ಈ ಬದಲಾವಣೆಗಳ ಬಗ್ಗೆ ಪ್ರಧಾನಮಂತ್ರಿಯವರ ಪ್ರಕಟಣೆಯನ್ನು ತಕ್ಷಣ ಅನುಸರಿಸುವಲ್ಲಿ, ಕೇಂದ್ರವು ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದೊಂದಿಗೆ 25 ಕೋಟಿ ಡೋಸ್ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಗೆ 19 ಕೋಟಿ ಡೋಸ್ ಕೊವಾಕ್ಸಿನ್ ಗೆ ಆರ್ಡರ್ ನೀಡಿದೆ.

ಹೆಚ್ಚುವರಿಯಾಗಿ ಕೊವಿಡ್-19 ಲಸಿಕೆಗಳನ್ನು ಖರೀದಿಸಲು 30 ಪ್ರತಿಶತದಷ್ಟು ಮುಂಗಡ ಹಣವನ್ನು ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಗೆ ನೀಡಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ವರ್ಷದ ಜನವರಿ 16 ರಿಂದ “ಇಡೀ ಸರ್ಕಾರಿ ವಿಧಾನ” ದ ಅಡಿಯಲ್ಲಿ ಪರಿಣಾಮಕಾರಿ ವ್ಯಾಕ್ಸಿನೇಷನ್ ಚಾಲನೆಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳಿಗೆ ಕೇಂದ್ರವು ಬೆಂಬಲ ನೀಡುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಕೇಂದ್ರವು ಸ್ವೀಕರಿಸಿದ ವಿವಿಧ ಪ್ರಾತಿನಿಧ್ಯಗಳ ಆಧಾರದ ಮೇಲೆ, ಮೇ 1 ರಿಂದ ಪ್ರಾರಂಭವಾದ ವ್ಯಾಕ್ಸಿನೇಷನ್ ಡ್ರೈವ್ ನ ಮೂರನೇ ಹಂತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವಯಸ್ಕರಿಗೆ ವ್ಯಾಕ್ಸಿನೇಷನ್ ನೀಡಲಾಗುತ್ತಿದೆ.

ಈಗ ದೇಶಾದ್ಯಂತ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಮತ್ತಷ್ಟು ಸಾರ್ವತ್ರಿಕಗೊಳಿಸುವ ಉದ್ದೇಶದಿಂದ, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರು ಸರ್ಕಾರಿ ಆರೋಗ್ಯ ಸೌಲಭ್ಯಗಳಲ್ಲಿ ಕೊವಿಡ್ ಲಸಿಕೆ ಪ್ರಮಾಣವನ್ನು ಉಚಿತವಾಗಿ ಪಡೆಯಬಹುದು ”ಎಂದು ಅಧಿಕಾರಿ ಹೇಳಿದರು.

ಕೇಂದ್ರ ಸರ್ಕಾರವು ಜೂನ್ 21 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಚುಚ್ಚುಮದ್ದು ನೀಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತ ಕೊರೊನಾವೈರಸ್ ಲಸಿಕೆಗಳನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಪರಿಷ್ಕೃತ ರಾಷ್ಟ್ರೀಯ ಕೊರೊನಾ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ದೇಶದಲ್ಲಿ ಉತ್ಪಾದನೆ ಆಗುವ ಕೊರೊನಾ ಲಸಿಕೆಯ ಶೇ 75ರಷ್ಟು ಡೋಸ್ ಗಳನ್ನು  ಕೇಂದ್ರವೇ ಖರೀದಿಸಿ ರಾಜ್ಯಗಳಿಗೆ ಉಚಿತವಾಗಿ ನೀಡಲಿದೆ ಎಂದು ತಿಳಿಸಿದರು.

ಈಗಾಗಲೇ ಲಸಿಕಾ ಕಾರ್ಯಕ್ರಮದ ಮಾರ್ಗಸೂಚಿ ರೂಪಿಸಲಾಗಿದೆ. ಪರಿಷ್ಕೃತ ರಾಷ್ಟ್ರೀಯ ಕೊರೊನಾ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ದೇಶದಲ್ಲಿ ಉತ್ಪಾದನೆ ಆಗುವ ಕೊರೊನಾ ಲಸಿಕೆಯ ಶೇ 75ರಷ್ಟು ಡೋಸ್​ಗಳನ್ನು ಕೇಂದ್ರವೇ ಖರೀದಿಸಿ ರಾಜ್ಯಗಳಿಗೆ ಉಚಿತವಾಗಿ ನೀಡಲಿದೆ ಎಂದು  ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಮಂಗಳವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಜನಸಂಖ್ಯೆ, ಕೊರೊನಾ ತೀವ್ರತೆ, ಲಸಿಕೆ ಅಭಿಯಾನದ ಪ್ರಗತಿ ಆಧರಿಸಿ ಲಸಿಕೆ ಹಂಚಲಾಗುತ್ತದೆ. ಕೊರೊನಾ ಲಸಿಕೆ ನೀಡುವ ಮೂಲಕ ಸಾವು ತಡೆಯಬೇಕು. ರಾಜ್ಯಗಳೇ ತಮ್ಮ ಆದ್ಯತಾ ಗುಂಪು ಗುರುತಿಸಿಕೊಳ್ಳಬಹುದು. 18 ವರ್ಷ ಮೇಲ್ಪಟ್ಟವರಲ್ಲೂ ಆದ್ಯತೆಯ ಗುಂಪುಗಳನ್ನು ಗುರುತಿಸಿಕೊಳ್ಳಬಹುದು. ಲಸಿಕೆ ಪೂರೈಕೆ ಬಗ್ಗೆ ಒಂದು ತಿಂಗಳಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿದರು.

ಆಗಸ್ಟ್​ ತಿಂಗಳಲ್ಲಿ ಲಸಿಕೆ ಪೂರೈಕೆ ಕುರಿತು ಮಾಹಿತಿ ನೀಡಿದ ಅವರು, 25 ಕೋಟಿ ಡೋಸ್ ಕೊವಿಶೀಲ್ಡ್, 19 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆ ಖರೀದಿಗೆ ಆರ್ಡರ್ ನೀಡಿದ್ದೇವೆ. ಈ ಎರಡು ಕಂಪನಿಗಳಿಗೆ ಲಸಿಕೆ ಪೂರೈಕೆಗಾಗಿ ಶೇ 30ರಷ್ಟು ಮುಂಗಡ ಹಣ ನೀಡಿದ್ದೇವೆ. ಬಯೋಲಾಜಿಕಲ್ಸ್ ಇ ಕಂಪನಿಗೂ 30 ಕೋಟಿ ಡೋಸ್ ಲಸಿಕೆ ಪೂರೈಸಲು ಸೂಚಿಸಲಾಗಿದೆ. ಒಟ್ಟು 74 ಕೋಟಿ ಡೋಸ್ ಲಸಿಕೆ ಪೂರೈಕೆಗೆ ಆರ್ಡರ್ ನೀಡಿದ್ದೇವೆ ಎಂದರು.

ಜುಲೈವರೆಗೂ 53.6 ಕೋಟಿ ಲಸಿಕೆ‌ ಸಿಗಲಿದೆ. ಆಗಸ್ಟ್, ಸೆಪ್ಟಂಬರ್​ನಲ್ಲಿ 74 ಡೋಸ್ ಕೋಟಿ ಲಸಿಕೆ ಸಿಗಲಿದೆ. ಜನವರಿಯಿಂದ ಜುಲೈ ಅಂತ್ಯಕ್ಕೆ 53.6 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಆಗಸ್ಟ್‌-ಡಿಸೆಂಬರ್‌ನೊಳಗೆ 74 ಕೋಟಿ ಡೋಸ್ ಲಸಿಕೆ ಪೂರೈಸುತ್ತೇವೆ. ಡಿಸೆಂಬರ್‌ನೊಳಗೆ ದೇಶಕ್ಕೆ ಒಟ್ಟಾರೆ 127.6 ಕೋಟಿ ಡೋಸ್ ಲಸಿಕೆ ಸಿಗುವಂತೆ ಪಕ್ಕಾ ಪ್ಲಾನ್ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲ ಕಂಪನಿಗಳ ಲಸಿಕೆಯೂ ಪೂರೈಕೆಯಾಗುವ ನಿರೀಕ್ಷೆಯಿದೆ. ನಾವು ಉಳಿದ ಕಂಪನಿಗಳ ಲಸಿಕೆ ಪ್ರಯೋಗ ಯಶಸ್ವಿಯಾಗುವುದನ್ನೇ ಕಾಯುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಲಸಿಕೆ ಪೂರೈಕೆ ಬಗ್ಗೆ ಸುಪ್ರೀಂಕೋರ್ಟ್‌ ಮಾರ್ಗಸೂಚಿ ಗೌರವಿಸುತ್ತೇವೆ. ಸಾರ್ವಜನಿಕರ ಅಭಿಪ್ರಾಯ ಅಭಿಪ್ರಾಯ ರಾತ್ರೋರಾತ್ರಿ ರೂಪುಗೊಳ್ಳುವುದಿಲ್ಲ. ಮೇ 15ರಂದೇ ಲಸಿಕಾ ನೀತಿ ಬದಲಾಯಿಸಲು ಪ್ರಧಾನಿ ನರೇಂದ್ರ ಮೋದಿ ಸೂಚನೆ ಕೊಟ್ಟಿದ್ದರು. ಹತ್ತು, ಹದಿನೈದು ದಿನಗಳ ಮುಂಚೆ ಹೊಸ ಲಸಿಕಾ ನೀತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪ್ರೆಸಂಟೇಷನ್ ನೀಡಲಾಗಿತ್ತು. ಪ್ರತಿಕ್ರಿಯೆ, ದತ್ತಾಂಶ ಆಧರಿಸಿ ಕೇಂದ್ರದ ನೀತಿ ರೂಪಿಸಲಾಗಿದೆ ಎಂದರು.

ಇದನ್ನೂ ಓದಿ:  12 ರಾಜ್ಯಗಳ ಒತ್ತಾಯದಿಂದ ಹೊಸ ಲಸಿಕೆ ಖರೀದಿ ನೀತಿ ಜಾರಿ: ನೀತಿ ಆಯೋಗ ಸದಸ್ಯ ವಿ.ಕೆ.ಪೌಲ್

ಇದನ್ನೂ ಓದಿ:  Covid Vaccination Programme: ಲಸಿಕೆ ವಿತರಣೆ ಬಗ್ಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ

ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್