AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ರಾಜ್ಯಗಳ ಒತ್ತಾಯದಿಂದ ಹೊಸ ಲಸಿಕೆ ಖರೀದಿ ನೀತಿ ಜಾರಿ: ನೀತಿ ಆಯೋಗ ಸದಸ್ಯ ವಿ.ಕೆ.ಪೌಲ್

12 ರಾಜ್ಯಗಳು ಲಸಿಕಾ ಖರೀದಿ ನೀತಿ ಜಾರಿಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಕೇಂದ್ರೀಕೃತ ಕೊರೊನಾ ಲಸಿಕಾ ಖರೀದಿ ನೀತಿ ಜಾರಿ ಮಾಡಲಾಯಿತು ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

12 ರಾಜ್ಯಗಳ ಒತ್ತಾಯದಿಂದ ಹೊಸ ಲಸಿಕೆ ಖರೀದಿ ನೀತಿ ಜಾರಿ: ನೀತಿ ಆಯೋಗ ಸದಸ್ಯ ವಿ.ಕೆ.ಪೌಲ್
ವಿ.ಕೆ. ಪೌಲ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 08, 2021 | 6:59 PM

ದೆಹಲಿ: 12 ರಾಜ್ಯಗಳು ಲಸಿಕಾ ಖರೀದಿ ನೀತಿ ಜಾರಿಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಕೇಂದ್ರೀಕೃತ ಕೊರೊನಾ ಲಸಿಕಾ ಖರೀದಿ ನೀತಿ ಜಾರಿ ಮಾಡಲಾಯಿತು ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. ಈಗಾಗಲೇ ಲಸಿಕಾ ಕಾರ್ಯಕ್ರಮದ ಮಾರ್ಗಸೂಚಿ ರೂಪಿಸಲಾಗಿದೆ. ಪರಿಷ್ಕೃತ ರಾಷ್ಟ್ರೀಯ ಕೊರೊನಾ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ದೇಶದಲ್ಲಿ ಉತ್ಪಾದನೆ ಆಗುವ ಕೊರೊನಾ ಲಸಿಕೆಯ ಶೇ 75ರಷ್ಟು ಡೋಸ್​ಗಳನ್ನು ಕೇಂದ್ರವೇ ಖರೀದಿಸಿ ರಾಜ್ಯಗಳಿಗೆ ಉಚಿತವಾಗಿ ನೀಡಲಿದೆ ಎಂದು ತಿಳಿಸಿದರು.

ಜನಸಂಖ್ಯೆ, ಕೊರೊನಾ ತೀವ್ರತೆ, ಲಸಿಕೆ ಅಭಿಯಾನದ ಪ್ರಗತಿ ಆಧರಿಸಿ ಲಸಿಕೆ ಹಂಚಲಾಗುತ್ತದೆ. ಕೊರೊನಾ ಲಸಿಕೆ ನೀಡುವ ಮೂಲಕ ಸಾವು ತಡೆಯಬೇಕು. ರಾಜ್ಯಗಳೇ ತಮ್ಮ ಆದ್ಯತಾ ಗುಂಪು ಗುರುತಿಸಿಕೊಳ್ಳಬಹುದು. 18 ವರ್ಷ ಮೇಲ್ಪಟ್ಟವರಲ್ಲೂ ಆದ್ಯತೆಯ ಗುಂಪುಗಳನ್ನು ಗುರುತಿಸಿಕೊಳ್ಳಬಹುದು. ಲಸಿಕೆ ಪೂರೈಕೆ ಬಗ್ಗೆ ಒಂದು ತಿಂಗಳಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿದರು.

ಆಗಸ್ಟ್​ ತಿಂಗಳಲ್ಲಿ ಲಸಿಕೆ ಪೂರೈಕೆ ಕುರಿತು ಮಾಹಿತಿ ನೀಡಿದ ಅವರು, 25 ಕೋಟಿ ಡೋಸ್ ಕೊವಿಶೀಲ್ಡ್, 19 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆ ಖರೀದಿಗೆ ಆರ್ಡರ್ ನೀಡಿದ್ದೇವೆ. ಈ ಎರಡು ಕಂಪನಿಗಳಿಗೆ ಲಸಿಕೆ ಪೂರೈಕೆಗಾಗಿ ಶೇ 30ರಷ್ಟು ಮುಂಗಡ ಹಣ ನೀಡಿದ್ದೇವೆ. ಬಯೋಲಾಜಿಕಲ್ಸ್ ಇ ಕಂಪನಿಗೂ 30 ಕೋಟಿ ಡೋಸ್ ಲಸಿಕೆ ಪೂರೈಸಲು ಸೂಚಿಸಲಾಗಿದೆ. ಒಟ್ಟು 74 ಕೋಟಿ ಡೋಸ್ ಲಸಿಕೆ ಪೂರೈಕೆಗೆ ಆರ್ಡರ್ ನೀಡಿದ್ದೇವೆ ಎಂದರು.

ಜುಲೈವರೆಗೂ 53.6 ಕೋಟಿ ಲಸಿಕೆ‌ ಸಿಗಲಿದೆ. ಆಗಸ್ಟ್, ಸೆಪ್ಟಂಬರ್​ನಲ್ಲಿ 74 ಡೋಸ್ ಕೋಟಿ ಲಸಿಕೆ ಸಿಗಲಿದೆ. ಜನವರಿಯಿಂದ ಜುಲೈ ಅಂತ್ಯಕ್ಕೆ 53.6 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಆಗಸ್ಟ್‌-ಡಿಸೆಂಬರ್‌ನೊಳಗೆ 74 ಕೋಟಿ ಡೋಸ್ ಲಸಿಕೆ ಪೂರೈಸುತ್ತೇವೆ. ಡಿಸೆಂಬರ್‌ನೊಳಗೆ ದೇಶಕ್ಕೆ ಒಟ್ಟಾರೆ 127.6 ಕೋಟಿ ಡೋಸ್ ಲಸಿಕೆ ಸಿಗುವಂತೆ ಪಕ್ಕಾ ಪ್ಲಾನ್ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲ ಕಂಪನಿಗಳ ಲಸಿಕೆಯೂ ಪೂರೈಕೆಯಾಗುವ ನಿರೀಕ್ಷೆಯಿದೆ. ನಾವು ಉಳಿದ ಕಂಪನಿಗಳ ಲಸಿಕೆ ಪ್ರಯೋಗ ಯಶಸ್ವಿಯಾಗುವುದನ್ನೇ ಕಾಯುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಲಸಿಕೆ ಪೂರೈಕೆ ಬಗ್ಗೆ ಸುಪ್ರೀಂಕೋರ್ಟ್‌ ಮಾರ್ಗಸೂಚಿ ಗೌರವಿಸುತ್ತೇವೆ. ಸಾರ್ವಜನಿಕರ ಅಭಿಪ್ರಾಯ ಅಭಿಪ್ರಾಯ ರಾತ್ರೋರಾತ್ರಿ ರೂಪುಗೊಳ್ಳುವುದಿಲ್ಲ. ಮೇ 15ರಂದೇ ಲಸಿಕಾ ನೀತಿ ಬದಲಾಯಿಸಲು ಪ್ರಧಾನಿ ನರೇಂದ್ರ ಮೋದಿ ಸೂಚನೆ ಕೊಟ್ಟಿದ್ದರು. ಹತ್ತು, ಹದಿನೈದು ದಿನಗಳ ಮುಂಚೆ ಹೊಸ ಲಸಿಕಾ ನೀತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪ್ರೆಸಂಟೇಷನ್ ನೀಡಲಾಗಿತ್ತು. ಪ್ರತಿಕ್ರಿಯೆ, ದತ್ತಾಂಶ ಆಧರಿಸಿ ಕೇಂದ್ರದ ನೀತಿ ರೂಪಿಸಲಾಗಿದೆ ಎಂದರು.

ಸೋಂಕಿತರ ಚಿಕಿತ್ಸೆ ಮಾರ್ಗಸೂಚಿ​​ ಬಗ್ಗೆ ಗೊಂದಲವಿಲ್ಲ. ಡಿಎಚ್​​ಜಿಎಸ್​​ ವೆಬ್​ಸೈಟ್​​ನಲ್ಲಿ ಚಿಕಿತ್ಸೆಗೆ ಮಾರ್ಗಸೂಚಿ ನೀಡಲಾಗಿದೆ. ವಿದೇಶಕ್ಕೆ ಉದ್ಯೋಗ, ಶಿಕ್ಷಣ, ಕ್ರೀಡಾಕೂಟಕ್ಕೆ ಹೋಗುವವರು 1 ತಿಂಗಳ ಬಳಿಕ 2ನೇ ಡೋಸ್ ಲಸಿಕೆ ಪಡೆಯಬಹುದು. ಮೊದಲ ಡೋಸ್ ಪಡೆಯುವಾಗ ಇಂಥವರು ತಮ್ಮ ಪಾಸ್​ಪೋರ್ಟ್ ನಂಬರ್ ನೀಡಬೇಕು. ಲಸಿಕೆ ಸರ್ಟಿಫಿಕೇಟ್​​ನಲ್ಲಿಯೂ ಪಾಸ್​ಪೋರ್ಟ್ ನಂಬರ್ ಉಲ್ಲೇಖವಾಗಲಿದೆ ಎಂದು ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್​ವಾಲ್ ಹೇಳಿದರು. ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ರೂಪಿಸಿರುವ ಮಾರ್ಗಸೂಚಿ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

(Coronavirus Vaccine New Policy Framed Because of Demands from 12 States)

ಇದನ್ನೂ ಓದಿ: ಕೊವಿಡ್​ 19 ಮೂರನೇ ಅಲೆ ಮಕ್ಕಳಿಗೇ ಬಾಧಿಸುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷಿಯೂ ಇಲ್ಲ: ಡಾ.ವಿಕೆ.ಪೌಲ್​

ಇದನ್ನೂ ಓದಿ: ಲಸಿಕೆ ನೀಡಿಕೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ; ಶೀಘ್ರವೇ ಮಕ್ಕಳಿಗೂ ಲಸಿಕೆ: ವಿ ಕೆ ಪೌಲ್

Published On - 6:58 pm, Tue, 8 June 21

ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್