ಕೊವಿಡ್​ 19 ಮೂರನೇ ಅಲೆ ಮಕ್ಕಳಿಗೇ ಬಾಧಿಸುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷಿಯೂ ಇಲ್ಲ: ಡಾ.ವಿಕೆ.ಪೌಲ್​

ಕೊವಿಡ್​ 19 ಮೂರನೇ ಅಲೆ ಮಕ್ಕಳಿಗೇ ಬಾಧಿಸುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷಿಯೂ ಇಲ್ಲ: ಡಾ.ವಿಕೆ.ಪೌಲ್​
ಪ್ರಾತಿನಿಧಿಕ ಚಿತ್ರ

ದೆಹಲಿ ಏಮ್ಸ್​ ನಿರ್ದೇಶಕ ಡಾ. ರಣದೀಪ್​ ಗುಲೇರಿಯಾ ಸಹ ಇದನ್ನೇ ಹೇಳಿದ್ದಾರೆ. ಕೊವಿಡ್​ 19 ಮೂರನೇ ಅಲೆಯಲ್ಲಿ ಮಕ್ಕಳಿಗೇ ಸೋಂಕು ತಗಲುತ್ತದೆ ಎಂಬುದಕ್ಕೆ ಹೆಚ್ಚೇನೂ ಪುರಾವೆಗಳಿಲ್ಲ ಎಂದು ತಿಳಿಸಿದ್ದಾರೆ.

TV9kannada Web Team

| Edited By: Lakshmi Hegde

Jun 08, 2021 | 11:00 AM

ಕೊವಿಡ್​ 19 ಎರಡನೇ ಅಲೆ ಸ್ವಲ್ಪಮಟ್ಟಿಗೆ ಕುಗ್ಗುತ್ತಿದೆ. ಆ ಸಮಾಧಾನದ ಜತೆಗೆ ಮೂರನೇ ಅಲೆಯ ಭಯವೂ ಕಾಡುತ್ತಿದೆ. ಅದರಲ್ಲೂ ಮೂರನೇ ಅಲೆಯಲ್ಲಿ ಮಕ್ಕಳಿಗೇ ಸೋಂಕಿನ ಅಪಾಯ ಜಾಸ್ತಿ ಎಂಬುದು ಹಲವು ತಜ್ಞರ ವರದಿ. ಇದು ಸಹಜವಾಗಿಯೇ ಪಾಲಕರಿಗೆ ಆತಂಕ ಮೂಡಿಸಿದೆ. ಅದರಲ್ಲೂ ದೇಶದ ಅನೇಕ ಕಡೆಗಳಲ್ಲಿ ಈಗಾಗಲೇ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಆದರೆ ಇದೀಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಡಾಟಾದಲ್ಲಿ, ಮಕ್ಕಳಿಗೆ ಅಂಥ ಯಾವುದೇ ಅಪಾಯಗಳೂ ಇಲ್ಲ ಎಂದು ಉಲ್ಲೇಖಿಸಿದೆ.

ಪಿಎಂ ಕೊವಿಡ್​ ನಿರ್ವಹಣಾ ತಂಡದ ಪ್ರಮುಖ ಸದಸ್ಯರಾಗಿರುವ ಡಾ. ವಿ.ಕೆ.ಪೌಲ್​ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಕೊವಿಡ್​ 19 ಮೂರನೇ ಅಲೆಗೆ ಸಂಬಂಧಪಟ್ಟ ವಿಚಾರಗಳನ್ನು ತಿಳಿಸಿದ್ದಾರೆ. ಕೊವಿಡ್​ 19 ಮೂರನೇ ಅಲೆ ಮಕ್ಕಳ ಮೇಲೇ ಪರಿಣಾಮ ಬೀರುತ್ತದೆ ಎಂಬುದನ್ನು ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಇದುವರೆಗೆ ಮಕ್ಕಳಲ್ಲೂ ಸಹ ರೋಗಕಾರಕ ಅಂಶಗಳು ವಯಸ್ಕರಂತೆ ಗೋಚರಿಸುತ್ತಿವೆ ಎಂದು ವಿ.ಕೆ.ಪೌಲ್​ ತಿಳಿಸಿದ್ದಾರೆ.

ದೆಹಲಿ ಏಮ್ಸ್​ ನಿರ್ದೇಶಕ ಡಾ. ರಣದೀಪ್​ ಗುಲೇರಿಯಾ ಸಹ ಇದನ್ನೇ ಹೇಳಿದ್ದಾರೆ. ಕೊವಿಡ್​ 19 ಮೂರನೇ ಅಲೆಯಲ್ಲಿ ಮಕ್ಕಳಿಗೇ ಸೋಂಕು ತಗಲುತ್ತದೆ ಎಂಬುದಕ್ಕೆ ಹೆಚ್ಚೇನೂ ಪುರಾವೆಗಳಿಲ್ಲ. ಹಾಗಾಗಿ ಮೂರನೇ ಅಲೆ ಮಕ್ಕಳನ್ನೇ ಬಾಧಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಮಕ್ಕಳನ್ನು ಕಾಪಾಡಲು ಪಾಲಕರು ಲಸಿಕೆ ತೆಗೆದುಕೊಳ್ಳಿ ಇನ್ನು ಮಕ್ಕಳಿಗೆ ಕೊರೊನಾ ಸೋಂಕು ತಗುಲಲು ದೊಡ್ಡವರೇ ಕಾರಣರಾಗಿರುತ್ತಾರೆ. ಹಾಗಾಗಿ ಪಾಲಕರು ತಪ್ಪದೆ, ಆದಷ್ಟು ಬೇಗ ಲಸಿಕೆ ಪಡೆದುಕೊಳ್ಳಬೇಕು. ಆಗ ಮಕ್ಕಳಿಗೆ ಸೋಂಕು ತಗುಲುವುದನ್ನು ತಡೆಗಟ್ಟಬಹುದು ಎಂದು ಡಾ. ಪೌಲ್​ ತಿಳಿಸಿದ್ದಾರೆ.

ಸಾಮಾನ್ಯವಾಗಿ ನವೆಂಬರ್​ ಹೊತ್ತಿಗೆ ಕೊವಿಡ್​ 19 ಮೂರನೇ ಅಲೆ ಬರಬಹುದು. ಈ ಅಲೆ ಮಕ್ಕಳಿಗೆ ಹೆಚ್ಚು ಬಾಧಿಸುತ್ತದೆ. ಮಕ್ಕಳಲ್ಲಿ ಗಂಭೀರ ಸ್ವರೂಪದ ಲಕ್ಷಣಗಳು ಗೋಚರವಾಗಬಹುದು ಎಂಬಿತ್ಯಾದಿ ವರದಿಗಳು ತಜ್ಞರಿಂದ ಹೊರಬೀಳುತ್ತಿವೆ. ಇದೇ ಕಾರಣಕ್ಕೆ ಇನ್ನಷ್ಟು ಆತಂಕ ಸೃಷ್ಟಿಯಾಗಿದೆ. ಅದರಲ್ಲೂ ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಬೆಡ್​, ಆಕ್ಸಿಜನ್​ ಕೊರತೆಯಿಂದ ಸೃಷ್ಟಿಯಾದ ನರಕವನ್ನು ನೋಡಿದ ಮೇಲಂತೂ, ಪಾಲಕರು ಇನ್ನಷ್ಟು ದಿಗಿಲಾಗಿದ್ದು ಸುಳ್ಳಲ್ಲ.

ಇದನ್ನೂ ಓದಿ: Coronavirus cases in India: ಎರಡು ತಿಂಗಳ ಅವಧಿಯಲ್ಲಿ ಮೊದಲ ಬಾರಿಗೆ 1 ಲಕ್ಷಕ್ಕಿಂತ ಕಡಿಮೆ ಹೊಸ ಕೊವಿಡ್ ಪ್ರಕರಣ, 2123 ಮಂದಿ ಸಾವು

Follow us on

Most Read Stories

Click on your DTH Provider to Add TV9 Kannada