Coronavirus cases in India: ಎರಡು ತಿಂಗಳ ಅವಧಿಯಲ್ಲಿ ಮೊದಲ ಬಾರಿಗೆ 1 ಲಕ್ಷಕ್ಕಿಂತ ಕಡಿಮೆ ಹೊಸ ಕೊವಿಡ್ ಪ್ರಕರಣ, 2123 ಮಂದಿ ಸಾವು
Covid 19: ಮಂಗಳವಾರದ ಅಂಕಿಅಂಶದ ಪ್ರಕಾರ ಕೊರೊನಾ ವೈರಸ್ ಕಾಯಿಲೆಯಿಂದ 182,282 ಮಂದಿ ಚೇತರಿಸಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 27,341,462 ಆಗಿದೆ. ರಾಷ್ಟ್ರೀಯ ಚೇತರಿಕೆ ದರ ಶೇ 94.30 ಆಗಿದೆ.
ದೆಹಲಿ: ಕಳೆದ 24 ಗಂಟೆಗಳಲ್ಲಿ 86,498 ಸೋಂಕುಗಳು ದಾಖಲಾಗಿದ್ದು, ಭಾರತದ ದೈನಂದಿನ ಕೊರೊನಾ ವೈರಸ್ ಕಾಯಿಲೆಯ ಪ್ರಕರಣಗಳು (ಕೊವಿಡ್ -19) ಎರಡು ತಿಂಗಳ ಅವಧಿಯಲ್ಲಿ ಮೊದಲ ಬಾರಿಗೆ 100,000 ಕ್ಕಿಂತಲೂ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ಹೇಳಿದೆ. ಒಂದು ದಿನದಲ್ಲಿ ಕೊವಿಡ್ -19 ನಿಂದಾಗಿ 2123 ಮಂದಿ ಸಾವಿಗೀಡಾಗಿದ್ದು ದೇಶದಲ್ಲಿ ಸಾವಿನ ಸಂಖ್ಯೆ 351309 ಕ್ಕೆ ಏರಿದೆ. ಇದೀಗ ದೇಶದಲ್ಲಿ ಕೊವಿಡ್ -19 ಪ್ರಕರಣಗಳ ಸಂಖ್ಯೆ 28,996,473 ಕ್ಕೆ ತಲುಪಿದೆ. ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ 86,498 ಹೊಸ ಕೊವಿಡ್ -19 ಪ್ರಕರಣಗಳು 66 ದಿನಗಳಲ್ಲಿ ಅತಿ ಕಡಿಮೆ ಏಕದಿನ ಏರಿಕೆ ಇದಾಗಿದೆ. ಏಪ್ರಿಲ್ 6 ರಂದು ದೇಶವು 96,982 ಹೊಸ ಸೋಂಕು ಪ್ರಕರಣ ಮತ್ತು 446 ಸಾವು ಪ್ರಕರಣ ವರದಿ ಮಾಡಿದೆ. ಏಪ್ರಿಲ್ 5 ರಂದು, ದೈನಂದಿನ ಕೊವಿಡ್ -19 ಪ್ರಕರಣಗಳು ಮೊದಲ ಬಾರಿಗೆ 1,00,000 ಗಡಿ ದಾಟಿತ್ತು. ಮಂಗಳವಾರದ ಅಂಕಿಅಂಶದ ಪ್ರಕಾರ ಕೊರೊನಾ ವೈರಸ್ ಕಾಯಿಲೆಯಿಂದ 1,82,282 ಮಂದಿ ಚೇತರಿಸಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 2,73,41,462 ಆಗಿದೆ. ರಾಷ್ಟ್ರೀಯ ಚೇತರಿಕೆ ದರ ಶೇ 94.30 ಆಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳು 97,907 ರಷ್ಟು ಇಳಿದಿದ್ದು ಒಟ್ಟು 1,303,702 ಆಗದೆ. ಇದು ಒಟ್ಟು ಪ್ರಕರಣಗಳ ಶೇ4.50 ರಷ್ಟಿದೆ.
India reports 86,498 new #COVID19 cases, 1,82,282 discharges, and 2123 deaths in the last 24 hours, as per Health Ministry
Total cases: 2,89,96,473 Total discharges: 2,73,41,462 Death toll: 3,51,309 Active cases: 13,03,702
Total vaccination: 23,61,98,726 pic.twitter.com/d3U55MKQ3n
— ANI (@ANI) June 8, 2021
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಂಗಳವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಜೂನ್ 7 ರಂದು 1,873,485 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಒಂದು ದಿನದ ಹಿಂದೆ 1,587,589 ರಷ್ಟಿತ್ತು. ಇದರೊಂದಿಗೆ ಈವರೆಗೆ 368,207,596 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.
A total of 36,82,07,596 samples have been tested for #COVID19 in the country, up to June 7 including 18,73,485 samples tested yesterday: Indian Council of Medical Research (ICMR) pic.twitter.com/0emOeIZBx4
— ANI (@ANI) June 8, 2021
ಕೊವಿಡ್ -19 ವಿರುದ್ಧ ನೀಡಲಾದ ಲಸಿಕೆ ಡೋಸ್ ಸಂಖ್ಯೆ ಒಂದೇ ದಿನ 3,364,476 ಏರಿಕೆ ಕಂಡಿದ್ದು ಒಟ್ಟು 236,198,726 ರಷ್ಟು ಡೋಸ್ ನೀಡಲಾಗಿದೆ. ಸೋಮವಾರ ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರವು ಈಗ ಫಲಾನುಭವಿಗಳಿಗೆ ಉಚಿತ ಲಸಿಕೆ ನೀಡುವುದಾಗಿ ಹೇಳಿದ್ದರು.
ಇದನ್ನೂ ಓದಿ: PM Narendra Modi: ದೇಶದ 80 ಕೋಟಿ ಜನರಿಗೆ ದೀಪಾವಳಿಯವರೆಗೂ ಉಚಿತ ಆಹಾರ ಧಾನ್ಯ: ಪ್ರಧಾನಿ ಮೋದಿ ಘೋಷಣೆ
ಇದನ್ನೂ ಓದಿ: PM Modi Speech: ಭಾರತದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ: ಪ್ರಧಾನಿ ನರೇಂದ್ರ ಮೋದಿ
(India’s daily cases of the Covid-19 dipped below the 1,00,000 mark 86,498 new cases reported in last 24 hours)
Published On - 10:40 am, Tue, 8 June 21