ನಿಮ್ಮ ಬಳಿ 5 ರೂ.ಹಳೇ ನೋಟು ಇದೆಯಾ ಹುಡುಕಿ; ಆ ನೋಟಿನಿಂದ ಮನೆಯಲ್ಲೇ ಕುಳಿತು 30 ಸಾವಿರ ರೂ.ವರೆಗೆ ಗಳಿಸಬಹುದು !
ಕಾಯಿನ್ ಬಜಾರ್ ಪ್ಲಾಟ್ಫಾರಂನಲ್ಲಿ 1 ರೂಪಾಯಿಯ ಹಳೇ ನೋಟನ್ನೂ ಮಾರಾಟ ಮಾಡಬಹುದಾಗಿದೆ. 1 ರೂಪಾಯಿಯ ನೋಟಿನಿಂದ 45,000 ರೂಪಾಯಿವರೆಗೂ ಗಳಿಸಬಹುದಾಗಿದೆ.
ನಿಮ್ಮ ಬಳಿ 5 ರೂಪಾಯಿ ನೋಟು ಇದೆಯಾ? ಹುಡುಕಿ ನೋಡಿ..ಯಾವುದೋ ಬಾಕ್ಸ್ನಲ್ಲಿ, ಹಳೇ ಪರ್ಸ್ನಲ್ಲಿ, ಪಿಗ್ಗಿ ಬ್ಯಾಂಕ್ನಲ್ಲಿ..ಎಲ್ಲಿದ್ದರೂ ಹುಡುಕಿ ತೆಗೆಯಿರಿ. ಯಾಕೆಂದ್ರೆ ಒಂದು 5 ರೂಪಾಯಿ ನೋಟಿನಿಂದ ನೀವು 30,000 ರೂಪಾಯಿ ಪಡೆಯಬಹುದು. ಹೀಗೆ 5 ರೂಪಾಯಿ ನೋಟಿನಿಂದ 30 ಸಾವಿರ ರೂ.ಪಡೆಯಲು ನೀವೆಲ್ಲಿಗೂ ಹೊರಗೆ ಹೋಗಬೇಕಿಲ್ಲ. ಹೆಚ್ಚೇನೂ ಕೆಲಸ ಮಾಡಬೇಕಿಲ್ಲ. ಒಂದು ವೆಬ್ಸೈಟ್ಗೆ ಭೇಟಿ ಕೊಡಬೇಕು ಅಷ್ಟೇ..ಎರಡೇ ನಿಮಿಷದಲ್ಲಿ ನಿಮ್ಮ ಕೆಲಸ ಆಗಿಬಿಡುತ್ತದೆ.
ಇದು ವಿಚಿತ್ರ ಎನ್ನಿಸಿದರೂ ಸತ್ಯ. ಹಳೇ 5 ರೂಪಾಯಿ ನೋಟುಗಳನ್ನು ನೀವು ವೆಬ್ಸೈಟ್ವೊಂದರಲ್ಲಿ ಮಾರಾಟ ಮಾಡಿ ಹೆಚ್ಚಿನ ಮೊತ್ತದ ಹಣ ಗಳಿಸಬಹುದು. ಅದರಲ್ಲೂ ಟ್ರ್ಯಾಕ್ಟರ್ ಚಿತ್ರವಿರುವ 5 ರೂಪಾಯಿ ನೋಟು ಮಾರಾಟ ಮಾಡಿದರೆ 30 ಸಾವಿರ ರೂ. ಗಳಿಸಬಹುದಾಗಿದೆ. ಅದರಲ್ಲೂ 786 ಎಂಬ ಸಂಖ್ಯೆಯಿದ್ದರೆ ಅದನ್ನು ಅತಿ ಅಪರೂಪದ ನೋಟು ಎಂದು ಆರ್ಬಿಐ ಪರಿಗಣಿಸುತ್ತದೆ.
ಇಂಥ ಅಪರೂಪದ 5 ರೂಪಾಯಿ ಹಳೇ ನೋಟನ್ನು ನೀವು coinbazzar.com. ವೆಬ್ಸೈಟ್ನಲ್ಲಿ ಮಾರಾಟ ಮಾಡಿದರೆ, ಅದರ ಬದಲು ಹೆಚ್ಚಿನ ಮೊತ್ತದ ಹಣ ಪಡೆಯಬಹುದು. ಹಾಗಿದ್ದರೆ, 5ರೂ.ನೋಟನ್ನು ಮಾರಾಟ ಮಾಡುವ ವಿಧಾನ ಹೇಗಿದೆ? ಏನೆನೆಲ್ಲ ಪ್ರಕ್ರಿಯೆಗಳು ಇವೆ? ಇಲ್ಲಿದೆ ನೋಡಿ ವಿವರ..
1.ಮೊದಲು coinbazzar.com ಎಂಬ ವೆಬ್ಸೈಟ್ಗೆ ಭೇಟಿ ನೀಡಿ. 2.ಅಲ್ಲಿ ನೀವು ಮಾರಾಟಗಾರರು ಎಂದು ನೋಂದಣಿ ಮಾಡಿಕೊಳ್ಳಿ 3. ನಿಮ್ಮ ಬಳಿ ಇರುವ 5 ರೂಪಾಯಿ ನೋಟಿನ ಫೋಟೋ ತೆಗೆದು ವೆಬ್ಸೈಟ್ಗೆ ಅಪ್ಲೋಡ್ ಮಾಡಬೇಕು. ನಿಮ್ಮ ನೋಟು ಮಾರಾಟಕ್ಕೆ ಇಟ್ಟ ಜಾಹೀರಾತು ಕಾಯಿನ್ ಬಜಾರ್ ಪ್ಲಾಟ್ಫಾರಂನಲ್ಲಿ ಕಾಣಿಸಿಕೊಳ್ಳುತ್ತದೆ. 4. ಆಸಕ್ತಿ ಇರುವ ಜನರು ನಿಮ್ಮ ಜಾಹೀರಾತನ್ನು ನೋಡಿ, ನಿಮ್ಮನ್ನು ಸಂಪರ್ಕಿಸುತ್ತಾರೆ. ನಂತರ ಅವರೊಂದಿಗೆ ಮಾತನಾಡಿ, ರೇಟ್ ಫಿಕ್ಸ್ ಮಾಡಬಹುದಾಗಿದೆ.
ಬರೀ ಇಷ್ಟೇ ಅಲ್ಲ, ಕಾಯಿನ್ ಬಜಾರ್ ಪ್ಲಾಟ್ಫಾರಂನಲ್ಲಿ 1 ರೂಪಾಯಿಯ ಹಳೇ ನೋಟನ್ನೂ ಮಾರಾಟ ಮಾಡಬಹುದಾಗಿದೆ. 1 ರೂಪಾಯಿಯ ನೋಟಿನಿಂದ 45,000 ರೂಪಾಯಿವರೆಗೂ ಗಳಿಸಬಹುದಾಗಿದೆ. ಆದರೆ ಆ ನೋಟಿನ ಮೇಲೆ ಗವರ್ನರ್ ಎಚ್. ಎಂ.ಪಟೇಲ್ ಅವರ ಸಹಿ ಇರಬೇಕು. ಅಂದರೆ 1957ರ ನೋಟಾಗಿದ್ದು, 123456 ಸೀರಿಯಲ್ ನಂಬರ್ ಹೊಂದಿರಬೇಕು.
26ವರ್ಷದ ಹಿಂದೆ ಭಾರತ ಸರ್ಕಾರ 1 ರೂಪಾಯಿ ನೋಟು ಪ್ರಿಂಟ್ ಮಾಡುವುದನ್ನು ನಿಲ್ಲಿಸಿತ್ತು. ಅದನ್ನು 2015ರ ಜನವರಿ 1 ರಿಂದ ಮತ್ತೆ ಪ್ರಾರಂಭಿಸಿತ್ತು. ಹೀಗಾಗಿ ಅನೇಕ ಜನರ ಬಳಿ 26 ವರ್ಷದ ಹಿಂದಿನ ಹಳೇ ನೋಟುಗಳು ಉಳಿದುಹೋಗಿವೆ. ಅಂಥವರು ಈಗ ವೆಬ್ಸೈಟ್ ಮೂಲಕ ಅವುಗಳನ್ನು ಮಾರಾಟ ಮಾಡಲಾಗಿದೆ.
ಇದನ್ನೂ ಓದಿ: Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರೆಗೆ ಓಗೊಟ್ಟು ಮೈಸೂರು ಮೃಗಾಲಯದಿಂದ ಮೂರು ಹಕ್ಕಿಗಳನ್ನು ದತ್ತು ಪಡೆದ ದಂಪತಿ
Get Rs 30000 in exchange of 5 rupee in coinbazaar platform
Published On - 12:04 pm, Tue, 8 June 21