PMGKY 2021: ದೀಪಾವಳಿವರೆಗೂ ಮುಂದುವರಿದ ಪ್ರಧಾನಮಂತ್ರಿ ಗರೀಬ್​ ಕಲ್ಯಾಣ್​ ಯೋಜನೆ; ಅಪ್ಲೈ ಮಾಡುವ ವಿಧಾನ ಇಲ್ಲಿದೆ..

Pradhan Mantri Garib Kalyan Yojana: ಇದೀಗ ಮುಂದುವರಿದಿರುವ ಗರೀಬ್​ ಕಲ್ಯಾಣ್​ ಯೋಜನೆಯಿಂದ ಬಡವರು ನಿಟ್ಟುಸಿರು ಬಿಡುವಂತಾಗಿದೆ. ಪ್ರಸ್ತುತ ಬಹುತೇಕ ರಾಜ್ಯಗಳಲ್ಲಿ ಲಾಕ್​ಡೌನ್​, ಕರ್ಫ್ಯೂದಂತ ಕೊವಿಡ್​ 19 ನಿಯಂತ್ರಣ ಕ್ರಮಗಳನ್ನು ಹೇರಲಾಗಿದ್ದರಿಂದ ದುಡಿಮೆ ಕಷ್ಟವೇ ಆಗಿತ್ತು.

PMGKY 2021: ದೀಪಾವಳಿವರೆಗೂ ಮುಂದುವರಿದ ಪ್ರಧಾನಮಂತ್ರಿ ಗರೀಬ್​ ಕಲ್ಯಾಣ್​ ಯೋಜನೆ; ಅಪ್ಲೈ ಮಾಡುವ ವಿಧಾನ ಇಲ್ಲಿದೆ..
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: Lakshmi Hegde

Updated on:Jun 08, 2021 | 10:22 AM

ದೆಹಲಿ: ಕೊವಿಡ್​ 19 ಸಾಂಕ್ರಾಮಿಕದಿಂದ ಬಿಕ್ಕಟ್ಟಿನ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ಗರೀಬ್​ ಕಲ್ಯಾಣ್​ ಯೋಜನೆಯನ್ನು ದೀಪಾವಳಿವರೆಗೂ ಮುಂದುವರಿಸುವುದಾಗಿ ಪ್ರಧಾನಿ ಮೋದಿ ನಿನ್ನೆ ಘೋಷಣೆ ಮಾಡಿದ್ದಾರೆ. ಅದರ ಅನ್ವಯ ದೇಶದ 80 ಕೋಟಿ ನಾಗರಿಕರಿಗೆ ದೀಪಾವಳಿಯವರೆಗೆ ಉಚಿತವಾಗಿ ಆಹಾರ ಧಾನ್ಯ ವಿತರಣೆ ಮಾಡುತ್ತೇವೆ. ಇಲ್ಲಿರುವ ಬಡವರು ಯಾರೂ ಹಸಿವಿನಿಂದ ಮಲಗಬಾರದು ಎಂಬುದೇ ನಮ್ಮ ಉದ್ದೇಶ ಎಂದು ನಿನ್ನೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡುವ ವೇಳೆ ಹೇಳಿದ್ದಾರೆ.

2020ರ ಅಕ್ಟೋಬರ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಈ ಉಚಿತ ಆಹಾರ ಧಾನ್ಯ ವಿತರಣೆಯ ಘೋಷಣೆ ಮಾಡಿದ್ದರು. 1.5 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ, 80 ಕೋಟಿ ಬಡವರಿಗೆ, ಏಳುತಿಂಗಳವರೆಗೆ ಉಚಿತ ಆಹಾರ-ಧಾನ್ಯವನ್ನು ಕೇಂದ್ರಸರ್ಕಾರ ಪೂರೈಸಲಿದೆ ಎಂದು ಹೇಳಿದ್ದರು. ಅದನ್ನೀಗ ದೀಪಾವಳಿಯವರೆಗೂ ಮುಂದುವರಿಸಿದ್ದಾರೆ. ಹಾಗೇ, ಜೂನ್​ 21ರ ನಂತರ ದೇಶದ ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡುವುದಾಗಿಯೂ ನರೇಂದ್ರ ಮೋದಿ ತಿಳಿಸಿದ್ದಾರೆ.

ಮುಂಬರುವ ದಿನಗಳಲ್ಲಿ ದೇಶದಲ್ಲಿ ಲಸಿಕೆ ಉತ್ಪಾದನೆ ಪ್ರಮಾಣ ಜಾಸ್ತಿಯಾಗಲಿದೆ. ಸದ್ಯ ದೇಶದ 7 ವಿವಿಧ ಕಂಪನಿಗಳು ವಿವಿಧ ರೀತಿಯ ಲಸಿಕೆ ಉತ್ಪಾದನೆಯಲ್ಲಿ ತೊಡಗಿವೆ. ಮೂರು ಲಸಿಕೆಗಳ ಕ್ಲಿನಿಕಲ್​ ಟ್ರಯಲ್​ ನಡೆಯುತ್ತಿದೆ ಎಂದೂ ಪ್ರಧಾನಿ ನರೇಂದ್ರ ಮೋದಿ ನಿನ್ನೆ ತಿಳಿಸಿದ್ದಾರೆ.

ಇದೀಗ ಮುಂದುವರಿದಿರುವ ಗರೀಬ್​ ಕಲ್ಯಾಣ್​ ಯೋಜನೆಯಿಂದ ಬಡವರು ನಿಟ್ಟುಸಿರು ಬಿಡುವಂತಾಗಿದೆ. ಪ್ರಸ್ತುತ ಬಹುತೇಕ ರಾಜ್ಯಗಳಲ್ಲಿ ಲಾಕ್​ಡೌನ್​, ಕರ್ಫ್ಯೂದಂತ ಕೊವಿಡ್​ 19 ನಿಯಂತ್ರಣ ಕ್ರಮಗಳನ್ನು ಹೇರಲಾಗಿದ್ದರಿಂದ ದುಡಿಮೆ ಕಷ್ಟವೇ ಆಗಿತ್ತು. ಹೀಗಿರುವಾಗ ಗರೀಬ್ ಕಲ್ಯಾಣ್​ ಯೋಜನೆ ತುಂಬ ಅನುಕೂಲವಾಗಿದ್ದು, ಇದಕ್ಕಾಗಿ

ಆನ್​​ಲೈನ್​ನಲ್ಲಿ ಅಪ್ಲೈ ಮಾಡುವ ವಿಧಾನ ಇಲ್ಲಿದೆ.. 1. ಮೊದಲು https://pmuy.gov.in ವೆಬ್​​ಸೈಟ್​​ಗೆ ಭೇಟಿಕೊಡಿ 2. ಅಲ್ಲಿ ಹೋಂ ಪೇಜ್​​ನಲ್ಲಿ ಕಾಣಿಸುವ ಸ್ಕೀಮ್​​ ಆಯ್ಕೆ ಮಾಡಿ, ಅದರ ಫಾರ್ಮ್​​​ನ್ನು ಡೌನ್​​ಲೋಡ್ ಮಾಡಿ. 3. ಉಜ್ವಲ ಯೋಜನೆ ಫಾರ್ಮ್​​ನ್ನು ಸರಿಯಾಗಿ ತುಂಬಿ ನಂತರ ಸಬ್​ಮಿಟ್​ ಬಟನ್​ ಒತ್ತಿ. 4. ಈ ಯೋಜನೆಗೆ ಅಪ್ಲೈ ಮಾಡುವಾಗ ಆಧಾರ್​ಕಾರ್ಡ್​, ರೇಶನ್​ ಕಾರ್ಡ್​, ಬ್ಯಾಂಕ್​ ಪಾಸ್​​ಬುಕ್​ ಮತ್ತು ವೋಟರ್​ ಐಡಿ ಕಾರ್ಡ್​ಗಳ ದೃಢೀಕರಣ ಅತ್ಯಗತ್ಯವಾಗಿದೆ. 5. ಅತಿಮುಖ್ಯವಾಗಿ ಬಿಪಿಎಲ್​ ಕಾರ್ಡ್​ ಹೊಂದಿರುವವರಿಗೆ ಮಾತ್ರ ಈ ಯೋಜನೆ ಅನ್ವಯ ಆಗುತ್ತದೆ.

ಇದನ್ನೂ ಓದಿ: ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ ‘ಮಿಸ್ಸಿ’ ಸಮಸ್ಯೆ, ಬಾಗಲಕೋಟೆಯಲ್ಲಿ ಐವರಿಗೆ ಚಿಕಿತ್ಸೆ

(PM Narendra Modi extends Pradhan Mantri Garib Kalyan Yojana check here to know apply method)

Published On - 10:15 am, Tue, 8 June 21

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ