ಲಸಿಕೆ ನೀಡಿಕೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ; ಶೀಘ್ರವೇ ಮಕ್ಕಳಿಗೂ ಲಸಿಕೆ: ವಿ ಕೆ ಪೌಲ್

ಲಸಿಕೆ ನೀಡಿಕೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ; ಶೀಘ್ರವೇ ಮಕ್ಕಳಿಗೂ ಲಸಿಕೆ: ವಿ ಕೆ ಪೌಲ್
ವಿ.ಕೆ. ಪೌಲ್

ಸೆಪ್ಟೆಂಬರ್‌ನಿಂದ ಪ್ರತಿ ತಿಂಗಳು 5.5 ಕೋಟಿ ಡೋಸ್ ಲಸಿಕೆ ಪೂರೈಕೆ ಆಗಲಿದೆ. ಮುಂದಿನ ದಿನಗಳಲ್ಲಿ ಲಸಿಕೆ ಲಭ್ಯತೆ ಹೆಚ್ಚಾಗಲಿದೆ ಎಂದು ವಿ.ಕೆ. ಪೌಲ್ ಮಾಹಿತಿ ನೀಡಿದ್ದಾರೆ.

TV9kannada Web Team

| Edited By: ganapathi bhat

Jun 04, 2021 | 7:19 PM

ದೆಹಲಿ: ಕೊವಿಡ್ ಮೊದಲ ಲಸಿಕೆ ನೀಡಿಕೆಯಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕಿದ್ದೇವೆ. ಭಾರತದಲ್ಲಿ 17.2 ಕೋಟಿ ಜನರಿಗೆ ಮೊದಲ ಡೋಸ್ ಲಸಿಕೆ ನೀಡಿಕೆ ಆಗಿದೆ. ಅಮೆರಿಕದಲ್ಲಿ 16 ಕೋಟಿ ಜನರಿಗೆ ಮೊದಲ ಡೋಸ್ ನೀಡಿಕೆ ಆಗಿದೆಯಷ್ಟೆ. ಭಾರತದಲ್ಲಿ 45 ವರ್ಷ ಮೇಲ್ಪಟ್ಟ ಶೇ. 63ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರದಿಂದಲೇ ಲಸಿಕೆ ಪೂರೈಕೆಯಾಗಿದೆ ಎಂದು ದೆಹಲಿಯಲ್ಲಿ ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ತಿಳಿಸಿದ್ದಾರೆ.

ಹೀಗಾಗಿ ಶೇ.37ರಷ್ಟು ಜನರು ಆದಷ್ಟು ಬೇಗ ಲಸಿಕೆ ಪಡೆಯಿರಿ. ಮುಂದೆ, ಸೆಪ್ಟೆಂಬರ್‌ನಿಂದ ಪ್ರತಿ ತಿಂಗಳು 5.5 ಕೋಟಿ ಡೋಸ್ ಲಸಿಕೆ ಪೂರೈಕೆ ಆಗಲಿದೆ. ಮುಂದಿನ ದಿನಗಳಲ್ಲಿ ಲಸಿಕೆ ಲಭ್ಯತೆ ಹೆಚ್ಚಾಗಲಿದೆ ಎಂದು ವಿ.ಕೆ. ಪೌಲ್ ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಕೊರೊನಾ ಎರಡನೇ ಅಲೆ ಇಳಿಮುಖವಾಗುತ್ತಿದೆ. ಹಾಗೆಂದು, ನಾವು ನಿರ್ಲಕ್ಷ್ಯವಹಿಸಿದರೆ ಮತ್ತೆ ಕೊರೊನಾ ಅಲೆ ಹೆಚ್ಚಾಗುವ ಸಂಭವವಿದೆ. ಹಾಗಾಗಿ, ಪ್ರತಿಯೊಬ್ಬರು ಕೂಡ ಕೊವಿಡ್ ಮುಂಜಾಗ್ರತಾ ಕ್ರಮ ಪಾಲಿಸಬೇಕು ಎಂದು ವಿ.ಕೆ. ಪೌಲ್ ಸೂಚನೆ ನೀಡಿದ್ದಾರೆ. ಟೆಸ್ಟ್, ಟ್ರ್ಯಾಕಿಂಗ್, ಸೆಲ್ಫ್​ ಐಸೋಲೇಷನ್ ಆಗಬೇಕು. ಕೊರೊನಾ ಪ್ರಕರಣ ಮತ್ತೆ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಶೀಘ್ರವೇ ಮಕ್ಕಳಿಗೂ ಲಸಿಕೆ ಭಾರತದಲ್ಲೂ ಶೀಘ್ರವೇ ಮಕ್ಕಳಿಗೆ ಕೊರೊನಾ ಲಸಿಕೆ ಸಾಧ್ಯತೆ ಇದೆ. ಈಗಾಗಲೇ ಮಕ್ಕಳ ಮೇಲೆ ಎರಡು ಲಸಿಕೆಗಳ ಪ್ರಯೋಗ ನಡೆಯುತ್ತಿದೆ. ಮಕ್ಕಳ ಮೇಲೆ ಝೈಡಸ್, ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ ಶುರುವಾಗಿದೆ. ಪ್ರಯೋಗ ಯಶಸ್ವಿಯಾದ್ರೆ ಮಕ್ಕಳಿಗೆ ಲಸಿಕೆ ನೀಡಲು ಯೋಜನೆ ಹಾಕಿಕೊಳ್ಳುತ್ತೇವೆ. ಮಕ್ಕಳಿಗಾಗಿಯೇ 25 ಕೋಟಿ ಲಸಿಕೆ ಅಗತ್ಯವಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪೌಲ್ ಮಾಹಿತಿ ನೀಡಿದ್ದಾರೆ.

32 ರಾಜ್ಯಗಳಲ್ಲಿ ಗುಣಮುಖರಾದವರ ಪ್ರಮಾಣ ಹೆಚ್ಚಳ 257 ಜಿಲ್ಲೆಯಲ್ಲಷ್ಟೇ ನಿತ್ಯ 100ಕ್ಕೂ ಹೆಚ್ಚು ಕೊರೊನಾ ಕೇಸ್ ಪತ್ತೆಯಾಗುತ್ತಿದೆ. ಮೇ 27 ರಿಂದ ಜೂನ್ 2ರ ಅವಧಿಯಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ 257 ಜಿಲ್ಲೆಗಳಲ್ಲಿ ಮಾತ್ರ ನಿತ್ಯ 100ಕ್ಕೂ ಹೆಚ್ಚು ಕೊರೊನಾ ಕೇಸ್ ಕಂಡುಬಂದಿದೆ ಎಂದು ದೆಹಲಿಯಲ್ಲಿ ಕೇಂದ್ರದ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್​ ಹೇಳಿಕೆ ನೀಡಿದ್ದಾರೆ.

ಮೇ 10ರಿಂದ ಈವರೆಗೂ 21 ಲಕ್ಷ ಸಕ್ರಿಯ ಕೇಸ್​ನಲ್ಲಿ ಇಳಿಕೆಯಾಗಿದೆ. 32 ರಾಜ್ಯಗಳಲ್ಲಿ ಗುಣಮುಖ ಆದವರ ಪ್ರಮಾಣ ಹೆಚ್ಚಾಗಿದೆ. ಹೊಸ ಕೊರೊನಾ ಕೇಸ್​ಗಿಂತ ಗುಣಮುಖ ಪ್ರಮಾಣ ಹೆಚ್ಚು ಕಂಡುಬಂದಿದೆ. ದೇಶದಲ್ಲಿ ಈಗ ಶೇ.93.1ರಷ್ಟು ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ದೇಶದ ಪಾಸಿಟಿವಿಟಿ ಪ್ರಮಾಣ ಇಳಿಕೆ ದೇಶದ ಪಾಸಿಟಿವಿಟಿ ಪ್ರಮಾಣದ ಬಗ್ಗೆ ಮಾತನಾಡಿ, ಈ ವಾರದಲ್ಲಿ ಶೇ.7.27ರಷ್ಟು ಪಾಸಿಟಿವಿಟಿ ದರ ಇದೆ. ಕಳೆದ 24 ಗಂಟೆಯಲ್ಲಿ ಶೇ.6.83ರಷ್ಟು ಪಾಸಿಟಿವಿಟಿ ದರ ಇದೆ. 377 ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇದೆ. ಈವರೆಗೂ 22.41 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. 4.56 ಕೋಟಿ ಜನರಿಗೆ ಎರಡು ಡೋಸ್ ಲಸಿಕೆ ನೀಡಿಕೆ ಆಗಿದೆ ಎಂದು ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಶುಲ್ಕ ವಸೂಲಿ ಮಾಡುವಂತಿಲ್ಲ ರೋಗಿಗಳಿಂದ ಹೆಚ್ಚು ಶುಲ್ಕವನ್ನು ವಸೂಲಿ ಮಾಡುತ್ತಿದ್ದರೆ ಕ್ರಮ ಕೈಗೊಳ್ಳಿ ಎಂದು ರಾಜ್ಯಗಳೇ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಈ ಬಗ್ಗೆ ಲವ್ ಅಗರ್ವಾಲ್ ಹೇಳಿಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಪಂಜಾಬ್‌ನಲ್ಲಿ ಹೆಚ್ಚಿನ ಬೆಲೆಗೆ ಲಸಿಕೆ ಮಾರಾಟ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಪಂಜಾಬ್ ಸರ್ಕಾರವೇ ಉತ್ತರ ನೀಡಬೇಕು. ವಿದೇಶಿ ಲಸಿಕಾ ಕಂಪನಿಗಳು ಕಾನೂನು ರಕ್ಷಣೆ ಕೇಳುತ್ತಿವೆ. ಕಾನೂನು ರಕ್ಷಣೆ ನೀಡುವ ಸಂಬಂಧ ಚರ್ಚೆಯಾಗುತ್ತಿದೆ. ಕಂಪನಿಗಳ ಜೊತೆ ಸಂಧಾನ, ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ ಲಸಿಕೆ ಖರೀದಿಗಾಗಿ ಗ್ಲೋಬಲ್ ಟೆಂಡರ್ ವಿಫಲ: ಒಗ್ಗೂಡಲು ಎಲ್ಲ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಜಗನ್ ಮೋಹನ್ ರೆಡ್ಡಿ

ಕೊರೊನಾ ಲಾಕ್​ಡೌನ್​ನಿಂದ ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟ; ಮುದ್ದಿನ ಸಾಕುಪ್ರಾಣಿಗಳೀಗ ಮಾಲೀಕರಿಗೆ ಭಾರ

Follow us on

Related Stories

Most Read Stories

Click on your DTH Provider to Add TV9 Kannada