ಸಿಬಿಐ ಸಿಬ್ಬಂದಿ,ಅಧಿಕಾರಿಗಳು ಗಡ್ಡ ಬಿಡುವಂತಿಲ್ಲ; ಜೀನ್ಸ್- ಟೀಶರ್ಟ್ ಧರಿಸುವಂತಿಲ್ಲ

ಸಿಬಿಐ ಸಿಬ್ಬಂದಿ,ಅಧಿಕಾರಿಗಳು ಗಡ್ಡ ಬಿಡುವಂತಿಲ್ಲ; ಜೀನ್ಸ್- ಟೀಶರ್ಟ್ ಧರಿಸುವಂತಿಲ್ಲ
ಸುಭೋದ್​ ಕುಮಾರ್ ಜೈಸ್ವಾಲ್​

CBI: ಸಿಬಿಐನ ಮಹಿಳಾ ಉದ್ಯೋಗಿಗಳಿಗೆ ಸೀರೆ, ಸೂಟ್, ಫಾರ್ಮಲ್ ಶರ್ಟ್ ಮತ್ತು ಪ್ಯಾಂಟ್ ಮಾತ್ರ ಧರಿಸಲು ಹೇಳಲಾಗಿದೆ. "ಯಾವುದೇ ಜೀನ್ಸ್, ಟೀ ಶರ್ಟ್, ಸ್ಪೋರ್ಟ್ಸ್ ಶೂಗಳು, ಚಪ್ಪಲಿಗಳು ಮತ್ತು ಕ್ಯಾಶುಯಲ್ ಉಡುಪನ್ನು ಕಚೇರಿಯಲ್ಲಿ ಅನುಮತಿಸಲಾಗುವುದಿಲ್ಲ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

TV9kannada Web Team

| Edited By: Rashmi Kallakatta

Jun 04, 2021 | 6:04 PM

ದೆಹಲಿ: ಕೇಂದ್ರೀಯ ತನಿಖಾ ದಳ (ಸಿಬಿಐ) ಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕಚೇರಿಯಲ್ಲಿ ಫಾರ್ಮಲ್ ಉಡುಗೆ ಧರಿಸಬೇಕು. ಜೀನ್ಸ್ ಮತ್ತು ಸ್ಪೋರ್ಟ್ಸ್ ಶೂಗಳಂತಹ ಯಾವುದೇ ಕ್ಯಾಶುಯಲ್ ಉಡುಗೆಗಳನ್ನು ಧರಿಸುವಂತಿಲ್ಲ ಏಜೆನ್ಸಿಯ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಹೇಳಿದ್ದಾರೆ. ಜೈಸ್ವಾಲ್ ಅವರ ಆದೇಶ ಪ್ರಕಾರ, ಪುರುಷರ ಡ್ರೆಸ್ ಕೋಡ್ ಶರ್ಟ್, ಫಾರ್ಮಲ್ ಪ್ಯಾಂಟ್ ಮತ್ತು ಫಾರ್ಮಲ್ ಬೂಟುಗಳಾಗಿರುತ್ತದೆ. ಅವರು ಗಡ್ಡ ಬಿಡಬಾರದು, ಕ್ಲೀನ್ ಶೇವ್ ಮಾಡಿರಬೇಕು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಸಿಬಿಐನ ಮಹಿಳಾ ಉದ್ಯೋಗಿಗಳಿಗೆ ಸೀರೆ, ಸೂಟ್, ಫಾರ್ಮಲ್ ಶರ್ಟ್ ಮತ್ತು ಪ್ಯಾಂಟ್ ಮಾತ್ರ ಧರಿಸಲು ಹೇಳಲಾಗಿದೆ. “ಯಾವುದೇ ಜೀನ್ಸ್, ಟೀ ಶರ್ಟ್, ಸ್ಪೋರ್ಟ್ಸ್ ಶೂಗಳು, ಚಪ್ಪಲಿಗಳು ಮತ್ತು ಕ್ಯಾಶುಯಲ್ ಉಡುಪನ್ನು ಕಚೇರಿಯಲ್ಲಿ ಅನುಮತಿಸಲಾಗುವುದಿಲ್ಲ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದೇಶಾದಾದ್ಯಂತ ಸಿಬಿಐ ಕಚೇರಿಗಳಿಗೆ ಈ ನಿಯಮಗಳನ್ನು ಅನ್ವಯಿಸಲಾಗುವುದು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಶಾಖೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ.

ಹೆಸರು ಹೇಳಲಿಚ್ಛಿಸದೆ ಈ ಕುರಿತು ಮಾತನಾಡಿದ ಸಿಬಿಐ ಅಧಿಕಾರಿಯೊಬ್ಬರು ಇದು ಸಮತೋಲಿತ ಆದೇಶ ಎಂದು ಹೇಳಿದ್ದಾರೆ. ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ಯಾವಾಗಲೂ ಫಾರ್ಮಲ್ ಉಡುಗೆ ಧರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

“ಆದಾಗ್ಯೂ, ವರ್ಷಗಳ ಹಿಂದೆಯಷ್ಟೇ ಜನರು ಕ್ಯಾಶುಯಲ್ ಧರಿಸಲು ಪ್ರಾರಂಭಿಸಿದರು.ಜೀನ್ಸ್ ಮತ್ತು ಟೀ ಶರ್ಟ್ ಧರಿಸುತ್ತಿದ್ದರೂ ಯಾರೂ ಅದನ್ನು ನಿಲ್ಲಿಸಲಿಲ್ಲ. ಸಿಬಿಐ ಅಧಿಕಾರಿಗಳು ಕನಿಷ್ಠ ಫಾರ್ಮ್ಲ್ ಕಾಲರ್ಡ್ ಶರ್ಟ್, ಪ್ಯಾಂಟ್ ಮತ್ತು ಬೂಟುಗಳನ್ನು ಧರಿಸಬೇಕು ”ಎಂದು ಆ ಅಧಿಕಾರಿ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಉಲ್ಲೇಖಿಸಿದೆ.

ಜೈಸ್ವಾಲ್ ಕಳೆದ ವಾರ ಏಜೆನ್ಸಿಯ 33 ನೇ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಅವರು ಸಿಬಿಐನ ದಕ್ಷತೆಯನ್ನು ಸುಧಾರಿಸಲು ಕೆಲವು ಪ್ರಮುಖ ಆಡಳಿತಾತ್ಮಕ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ.

ಇದನ್ನೂ  ಓದಿ: ಒಂದೂ ಭ್ರಷ್ಟಾಚಾರ ಕಳಂಕ ಇಲ್ಲದ ಸುಬೋಧ್​ ಕುಮಾರ್​ ಜೈಸ್ವಾಲ್​ ಸಿಬಿಐ ನೂತನ ನಿರ್ದೇಶಕ; ಇನ್ನೆರಡು ವರ್ಷ ಅಧಿಕಾರ ಅವಧಿ

Follow us on

Related Stories

Most Read Stories

Click on your DTH Provider to Add TV9 Kannada