ಒಂದೂ ಭ್ರಷ್ಟಾಚಾರ ಕಳಂಕ ಇಲ್ಲದ ಸುಬೋಧ್ ಕುಮಾರ್ ಜೈಸ್ವಾಲ್ ಸಿಬಿಐ ನೂತನ ನಿರ್ದೇಶಕ; ಇನ್ನೆರಡು ವರ್ಷ ಅಧಿಕಾರ ಅವಧಿ
New CBI Chief ಸುಬೋಧ್ ಜೈಸ್ವಾಲ್ (58) ಈ ಹಿಂದೆ ಮುಂಬೈನ ಪೊಲೀಸ್ ಆಯುಕ್ತ ಮತ್ತು ಮಹಾರಾಷ್ಟ್ರ ಡಿಜಿಪಿಯಾಗಿಯೂ ಕೆಲಸ ಮಾಡಿದ್ದಾರೆ. ಸದ್ಯ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಪಟ್ಟಿಮಾಡಲಾದ ಮೂವರಲ್ಲಿ ಸುಬೋಧ್ ಜೈಸ್ವಾಲ್ ಅವರೇ ಹಿರಿಯ ಅಧಿಕಾರಿಯೂ ಹೌದು.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CSIF) ಯ ಮುಖ್ಯಸ್ಥರಾಗಿದ್ದ ಸುಬೋಧ್ ಕುಮಾರ್ ಜೈಸ್ವಾಲ್ರನ್ನು ಸಿಬಿಐನ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಇವರು 1985ನೇ ಬ್ಯಾಚ್ನ ಮಹಾರಾಷ್ಟ್ರ ಕೇಡರ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಸಿಬಿಐನ ನಿರ್ದೇಶಕನ ಸ್ಥಾನಕ್ಕೆ ಸುಬೋಧ್ ಕುಮಾರ್ ಜೈಸ್ವಾಲ್ (Subodh Kumar Jaiswal) ಜತೆ ಕೆ.ಆರ್. ಚಂದ್ರ ಮತ್ತು ವಿ.ಎಸ್.ಕೌಮುದಿ ಹೆಸರೂ ಪಟ್ಟಿಯಲ್ಲಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್. ವಿ. ರಮಣ, ಲೋಕಸಭೆ ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೊಳಗೊಂಡ ಸಮಿತಿ ಈ ಮೂವರ ಹೆಸರನ್ನು ಆಯ್ಕೆ ಮಾಡಿತ್ತು. ಅದರಲ್ಲಿ ಸುಬೋಧ್ ಜೈಸ್ವಾಲ್ ಹೆಸರು ಮುಂಚೂಣಿಯಲ್ಲಿತ್ತು.
ಸಮಿತಿಯ ಶಿಫಾರಸಿನ ಅನ್ವಯ ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು, 2 ವರ್ಷಗಳ ಅವಧಿಗೆ ಸಿಬಿಐನ ನೂತನ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ.
ಇನ್ನು ಸುಬೋಧ್ ಜೈಸ್ವಾಲ್ (58) ಈ ಹಿಂದೆ ಮುಂಬೈನ ಪೊಲೀಸ್ ಆಯುಕ್ತ ಮತ್ತು ಮಹಾರಾಷ್ಟ್ರ ಡಿಜಿಪಿಯಾಗಿಯೂ ಕೆಲಸ ಮಾಡಿದ್ದಾರೆ. ಸದ್ಯ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಪಟ್ಟಿಮಾಡಲಾದ ಮೂವರಲ್ಲಿ ಸುಬೋಧ್ ಜೈಸ್ವಾಲ್ ಅವರೇ ಹಿರಿಯ ಅಧಿಕಾರಿಯೂ ಹೌದು. ಇವರಿಗೆ ಗುಪ್ತಚರ ದಳದ ವಿಶೇಷ ರಕ್ಷಣಾ ಗುಂಪು ಮತ್ತು ಸಂಶೋಧನೆ ಮತ್ತು ವಿಶ್ಲೇಷಣಾ ದಳದಲ್ಲಿ ದಶಕಗಳ ಕಾಲ ಕೆಲಸ ಮಾಡಿದ ಅನುಭವವೂ ಇದೆ. ತೆಲಗಿ ಹಗರಣದ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಗೇ ಮಹಾರಾಷ್ಟ್ರ ಆ್ಯಂಟಿ ಟೆರರ್ ಸ್ಕ್ವಾಡ್ ಮುಖ್ಯಸ್ಥರಾಗಿ, ಹಲವು ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯಲ್ಲೂ ಪಾಳ್ಗೊಂಡಿದ್ದರು. ಅದೆಲ್ಲಕ್ಕಿಂತ ಮುಖ್ಯವಾಗಿ ಒಂದೇ ಒಂದು ಭ್ರಷ್ಟಾಚಾರದ ಕಳಂಕವೂ ಇವರ ಮೇಲಿಲ್ಲ. ನೈತಿಕವಾಗಿ ಗಟ್ಟಿ ಇರುವ ಅಧಿಕಾರಿ ಎಂದೇ ಗುರುತಿಸಲ್ಪಟ್ಟಿದ್ದಾರೆ. 2009ರಲ್ಲಿ ರಾಷ್ಟ್ರಪತಿ ಪದಕ ಪುರಸ್ಕಾರವೂ ಸಿಕ್ಕಿದೆ.
ಇದನ್ನೂ ಓದಿ: New CBI Chief: ಅಂತಿಮ ಪಟ್ಟಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯಿಂದ ಮೂವರ ಹೆಸರು
Subodh Kumar Jaiswal appointed As CBI director
Published On - 11:30 pm, Tue, 25 May 21