ಬೆಂಗಳೂರು: IMA ಸಂಸ್ಥೆಯಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಸಂಜೆ 5ರವರೆಗೆ ರೋಷನ್ ಬೇಗ್ರನ್ನು CBI ಕಸ್ಟಡಿಗೆ ನೀಡಲಾಗಿದೆ. CBI ವಿಶೇಷ ಕೋರ್ಟ್ ಜಡ್ಜ್ ನ್ಯಾ.ಮಂಜುಳಾ ಇಟ್ಟಿ ಹೊರಡಿಸಿದ್ದಾರೆ.
ಜೊತೆಗೆ, ರೋಷನ್ ಬೇಗ್ರ ಜಾಮೀನು ಅರ್ಜಿ ವಿಚಾರಣೆ ಡಿಸೆಂಬರ್ 4ಕ್ಕೆ ಮುಂದೂಡಿಕೆ ಆಗಿದೆ. ಜೈಲು ಆಸ್ಪತ್ರೆ ವೈದ್ಯಾಧಿಕಾರಿಯಿಂದ ವರದಿ ಸಲ್ಲಿಕೆಯಾಗಿದ್ದು ರೋಷನ್ ಬೇಗ್ ಆರೋಗ್ಯ ಸಮರ್ಪಕವಾಗಿದೆ ಎಂದು ತಪಾಸಣೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವರನ್ನು CBI ಕಸ್ಟಡಿಗೆ ನೀಡಲಾಗಿದೆ.
ಈ ಹಿಂದೆ, ರೋಷನ್ ಬೇಗ್ ಜಯದೇವ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ CBI ಕಸ್ಟಡಿಗೆ ಪಡೆಯಲು ಸಾಧ್ಯವಾಗಿಲ್ಲ. ಹಾಗಾಗಿ, ಮತ್ತೆ ಕಸ್ಟಡಿ ಕೋರಿ CBI ಅರ್ಜಿ ಸಲ್ಲಿಸಿತ್ತು.
Published On - 4:40 pm, Tue, 1 December 20