
ದೆಹಲಿ: ನಾಳೆ ಬೈಎಲೆಕ್ಷನ್, ಇವತ್ತು ಮುನಿರತ್ನಗೆ ಸುಪ್ರೀಂ ರಿಲೀಫ್! ಆರ್.ಆರ್.ನಗರದಲ್ಲಿ ಕಳೆದ ಚುನಾವಣೆಯಲ್ಲಿ ಅಕ್ರಮ ವಿಚಾರ ಪ್ರಕರಣದಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ C.R.ವಿಶ್ವನಾಥ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
R.R. ನಗರ ಕ್ಷೇತ್ರದ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮುನಿರತ್ನ ವಿರುದ್ಧ ಗುರುತಿನ ಚೀಟಿ ಅಕ್ರಮ ನಡೆದಿದೆ ಎಂಬುದು ಆರೋಪವಾಗಿತ್ತು. ಇದರ ವಿರುದ್ಧ ನಿರಾಜುಗೌಡ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಅದನ್ನು ಪ್ರಶ್ನಿಸಿ ವಿಶ್ವನಾಥ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸಹ ಇದೀಗ ವಜಾಗೊಳಿಸಿದೆ. ಇದರಿಂದ R.R. ನಗರ ಅಸೆಂಬ್ಲಿ ಕ್ಷೇತ್ರಕ್ಕೆ ನಾಳೆ ಮಂಗಳವಾರ ಬೈಎಲೆಕ್ಷನ್ ನಡೆಯಲಿದೆ. ಹಾಗಾಗಿ, ಮುನ್ನಾ ದಿನವಾದ ಇಂದು ಮುನಿರತ್ನಗೆ ಸುಪ್ರೀಂ ರಿಲೀಫ್ ದೊರೆತಿದೆ.
Published On - 12:54 pm, Mon, 2 November 20