ಎಲ್ಲಿ ಮಾಡಿಸ್ಕೊಂಡೆಯಮ್ಮಾ ಬಳೆನ್ನ? ಚಿನ್ನದ್ದಾ? ಹೀಗೆ ವಿಧಾನಸೌಧದಲ್ಲಿ CM BSY ಕೇಳಿದ್ದು ಯಾರನ್ನ?
ಬೆಂಗಳೂರು: ಇಂಥ ಸಮಾರಂಭಕ್ಕೆ ಆರ್ಟಿಫಿಷಿಯಲ್ ಬಳೆ ಹಾಕಿಕೊಂಡು ಬರಬಾರದಮ್ಮಾ, ಚಿನ್ನದ ಬಳೆ ಹಾಕ್ಕೊಂಡು ಬರಬೇಕು ಎಂದು ಏಕಲವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏಕಲವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ವಿಜೇತೆ ಖುಷಿ ದಿನೇಶ್ ತಮ್ಮ ಪ್ರಶಸ್ತಿ ಪಡೆಯಲು ಬಂದಾಗ ಸಿಎಂ ಕಣ್ಣಿಗೆ ಖುಷಿ ಅವರ ಬಳೆ ಸಿಎಂ ಗಮನ ಸೆಳೆದಿದೆ. ಸಮಾರಂಭದಲ್ಲಿ ಖುಷಿ ದಿನೇಶ್ ಕೈ ಹಿಡಿದು ಏನಮ್ಮಾ, ಎಲ್ಲಿ […]

ಬೆಂಗಳೂರು: ಇಂಥ ಸಮಾರಂಭಕ್ಕೆ ಆರ್ಟಿಫಿಷಿಯಲ್ ಬಳೆ ಹಾಕಿಕೊಂಡು ಬರಬಾರದಮ್ಮಾ, ಚಿನ್ನದ ಬಳೆ ಹಾಕ್ಕೊಂಡು ಬರಬೇಕು ಎಂದು ಏಕಲವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏಕಲವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ವಿಜೇತೆ ಖುಷಿ ದಿನೇಶ್ ತಮ್ಮ ಪ್ರಶಸ್ತಿ ಪಡೆಯಲು ಬಂದಾಗ ಸಿಎಂ ಕಣ್ಣಿಗೆ ಖುಷಿ ಅವರ ಬಳೆ ಸಿಎಂ ಗಮನ ಸೆಳೆದಿದೆ. ಸಮಾರಂಭದಲ್ಲಿ ಖುಷಿ ದಿನೇಶ್ ಕೈ ಹಿಡಿದು ಏನಮ್ಮಾ, ಎಲ್ಲಿ ಮಾಡಿಸಿಕೊಂಡೆ ಈ ಬಳೆಯನ್ನ? ಚಿನ್ನದ್ದಾ? ಎಷ್ಟು ಈ ಬಳೆಯ ಬೆಲೆ? ಎಂದು ವಿಚಾರಿಸಿದ್ದಾರೆ.
ಹಾಗೂ ನಿನ್ನ ಹೆಸರೇನು? ಯಾವ ಕ್ರೀಡೆಗೆ ನಿನಗೆ ಪ್ರಶಸ್ತಿ ಲಭಿಸಿದೆ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಖುಷಿ ಸ್ವಿಮ್ಮಿಂಗ್‌ನಲ್ಲಿ ನನಗೆ ಏಕಲವ್ಯ ಪ್ರಶಸ್ತಿ ಸಿಕ್ಕಿದೆ ಎಂದು ಉತ್ತರಿಸಿದ್ದಾರೆ. ಇಂತಹದೊಂದು ಅಪರೂಪದ ಹಾಗೂ ಸಿಎಂ ಸಾಹೇಬ್ರಿಗೆ ಬಳೆ ಇಷ್ಟವಾದ ಪ್ರಸಂಗ ನಡೆದಿದೆ.
Published On - 1:45 pm, Mon, 2 November 20