ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನಲ್ಲಿನ ಟಿಎಂ ಹೊಸೂರು ಅರಣ್ಯ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದ ಗಣಿಗಾರಿಗೆ ನಡೀತಿದ್ರು ಸಂಸದೆ ಸುಮಲತಾ ಅಂಬರೀಶ್ ಚೆನ್ನನಹಳ್ಳಿ, ಹಂಗರ ಹಳ್ಳಿಗೆ ಭೇಟಿ ನೀಡ್ತಿರೋದು ಯಾಕೆ? ಸಂಸದೆ ಸುಮಲತ ಅಂಬರೀಶ್ ನಡೆ ಏನು? ಎಂಬ ಪ್ರಶ್ನೆ ಈಗ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಶ್ನೆಗೆ ಉತ್ತರ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾರ್ಗೆಟ್ ಆದ್ರಾ? ಎಂಬುವುದು.
ಚೆನ್ನನಹಳ್ಳಿ, ಹಂಗರ ಹಳ್ಳಿಯ ಎರಡೂ ಕಡೆಗಳಲ್ಲಿ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗೇ ಹೆಚ್ಚಿನ ಸಂಖ್ಯೆಯಲ್ಲಿ ಗಣಿಗಾರಿಕೆ ಮಾಡ್ತಿದ್ದಾರೆ. ಸುಮಲತಾ ಅಂಬರೀಶ್ ಕೊವಿಡ್ ಟೈಂನಲ್ಲಿ ಜಿಲ್ಲೆಗೆ ಆಕ್ಸಿಜನ್ ಸಿಲಿಂಡರ್ ನೀಡೊ ವಿಚಾರದಲ್ಲಿ, ಡ್ಯಾಂ ಬಿರುಕು ಬಿಟ್ಟಿದೆ ಎಂದಾಗ ಮೊದಲು ಪ್ರಶ್ನಿಸಿದ್ದೇ ಶಾಸಕ ರವೀಂದ್ರ ಶ್ರೀಕಂಠಯ್ಯ. ಜಿಲ್ಲಾಡಳಿತಕ್ಕೆ ಸರ್ಕಾರದಿಂದ ನಿಗಧಿಯಾಗಿದ್ದ ಸಿಲಿಂಡರ್ ತಂದು ನಾನೇ ವೈಯಕ್ತಿಕವಾಗಿ ನೀಡ್ತಿದ್ದೀನಿ ಎಂದು ಸುಮಲತಾ ಹೇಳ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ರು.
ಕಳೆದ ಮೇ ತಿಂಗಳ 7 ರಂದು ಮಂಡ್ಯದ ಜಿ.ಪಂನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ್ದ ಸುಮಲತಾ ನಾವು ಎಷ್ಟೆ ಹುಡುಕಾಡಿದ್ರು ಆಕ್ಸಿಜನ್ ಸಿಲಿಂಡರ್ ಸಿಗಲ್ಲ ನಿಮಗೆ ಎಲ್ಲಿಂದ ಸಿಕ್ತಿದೆ ಎಂದು ಬಹಿರಂಗವಾಗಿಯೇ ಮಾತನಾಡಿದ್ರು. ಎಲ್ಲಾ ವಿಚಾರದಲ್ಲೂ ರಾಜಕೀಯ ಮಾಡಲಾಗ್ತಿದೆ ಎಂದು ಹೇಳಿ ಸಭೆಯಿಂದ ಅರ್ಧದಲ್ಲೇ ಸಂಸದೆ ಸುಮಲತಾ ಹೊರ ನಡೆದಿದ್ದರು. ಇದಾದ ನಂತರ ಡ್ಯಾಂ ಬಿರುಕು ಬಿಟ್ಟಿದೆ ಎಂದು ಸುಮಲತಾ ಹೇಳಿಕೆಗೆ ನೀಡಿದ್ದರು. ಈ ಹೇಳಿಕೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಮೇ 30 ರಂದು ಆಕ್ಷೇಪ ವ್ಯಕ್ತಪಡಿಸಿದ್ದ. ಸಂಸದರು ತಮ್ಮ ತಪ್ಪನ್ನ ಮುಚ್ಚಿಕೊಳ್ಳಲು ಪಾಲಿಶ್ ಹೇಳಿಕೆಗಳನ್ನ ನೀಡ್ತಿದ್ದಾರೆ ಎಂದು ಆಕ್ಷೇಪಿಸಿದ್ದರು. ಡ್ಯಾಂ ಬಿರುಕು ಬಿಟ್ಟಿದೆ ಎಂದಿದ್ದವರು ಡ್ಯಾಂ ನೋಡಲು ಹೋಗದೆ ಗಣಿಗಾರಿಕೆ ನಡೆಸ್ತಿರೊ ಸ್ಥಳಕ್ಕೆ ಯಾಕೆ ಭೇಟಿ ನೀಡ್ತಿದ್ದಾರೆ ಎಂದು ನಿನ್ನೆಯೂ ಸಂಸದೆ ಸುಮಲತಾರ ನಡೆಯನ್ನ ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದ್ದ.