ಚಾಮರಾಜನಗರ ಸಾವು ಪ್ರಕರಣದಲ್ಲಿ ಮೈಸೂರು ಜಿಲ್ಲಾಡಳಿತದ ಸ್ಪಷ್ಟನೆ ಸುಳ್ಳು; ಸಾ.ರಾ.ಮಹೇಶ್ ಆರೋಪ

ಸಚಿವರು ಹೇಳಿದ್ದಾರೆ ಮೂರು ಜನ ಮಾತ್ರ ಆಕ್ಸಿಜನ್ ಇಲ್ಲದೆ ಸಾವನ್ನಪ್ಪಿದ್ದಾರೆ ಅಂತ. ಹಾಗಿದ್ದರೆ ಅದು ಸಾವು ಅಲ್ಲವಾ ಸ್ವಾಮಿ? ಮೊದಲು ಡ್ರಗ್ ಕಂಟ್ರೋಲರ ವಿರುದ್ಧ ಕ್ರಮ ತಗೊಳ್ಳಿ. ಇದು ಜನರ ಜೀವನದ ಪ್ರಶ್ನೆ. ದಯವಿಟ್ಟು ಉದ್ಧಟತನ ಅಧಿಕಾರಿಯನ್ನು ಇಟ್ಕೊಂಡು ಆಟ ಆಡಬೇಡಿ ಎಂದು ಸಾ.ರಾ.ಮಹೇಶ್​ ಹೇಳಿದರು

ಚಾಮರಾಜನಗರ ಸಾವು ಪ್ರಕರಣದಲ್ಲಿ ಮೈಸೂರು ಜಿಲ್ಲಾಡಳಿತದ ಸ್ಪಷ್ಟನೆ ಸುಳ್ಳು; ಸಾ.ರಾ.ಮಹೇಶ್ ಆರೋಪ
ಸಾ.ರಾ.ಮಹೇಶ್

Updated on: May 04, 2021 | 1:04 PM

ಮೈಸೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ಮೃತಪಟ್ಟ 24 ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಮಾಜಿ ಸಚಿವ ಸಾ.ರಾ.ಮಹೇಶ್ ಮೈಸೂರು ಜಿಲ್ಲಾಡಳಿತದ ಸ್ಪಷ್ಟನೆ ಸುಳ್ಳು ಎಂದು ಆರೋಪಿಸುತ್ತಿದ್ದಾರೆ. ಮೈಸೂರು ಡಿಸಿಯನ್ನು ಏಕೆ ಇನ್ನೂ ಉಳಿಸಿಕೊಂಡಿದ್ದೀರಿ? ಅವರನ್ನು ಇಲ್ಲೇ ಉಳಿಸಿಕೊಳ್ಳಬೇಕೆಂದು ಯಾರ ಒತ್ತಡವಿದೆ? ಎಂದು ಪ್ರಶ್ನಿಸಿರುವ ಅವರು ನಿಮಗೆ ಯಾರ ಒತ್ತಡವಿದೆಯೋ ನನಗಂತೂ ಗೊತ್ತಿಲ್ಲ. ನಿಮ್ಮ ಭೂ ವ್ಯವಹಾರ ನಿರ್ವಹಣೆಗೆ ಅವರನ್ನ ಇಲ್ಲೇ ಇಟ್ಟುಕೊಳ್ಳಿ. ಕೊರೊನಾ ನಿರ್ವಹಣೆಗಾದರೂ ಒಬ್ಬ ಅಧಿಕಾರಿಯನ್ನು ನೇಮಿಸಿ ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಸಚಿವರು ಹೇಳಿದ್ದಾರೆ ಮೂರು ಜನ ಮಾತ್ರ ಆಕ್ಸಿಜನ್ ಇಲ್ಲದೆ ಸಾವನ್ನಪ್ಪಿದ್ದಾರೆ ಅಂತ. ಹಾಗಿದ್ದರೆ ಅದು ಸಾವು ಅಲ್ಲವಾ ಸ್ವಾಮಿ? ಮೊದಲು ಡ್ರಗ್ ಕಂಟ್ರೋಲರ ವಿರುದ್ಧ ಕ್ರಮ ತಗೊಳ್ಳಿ. ಇದು ಜನರ ಜೀವನದ ಪ್ರಶ್ನೆ. ದಯವಿಟ್ಟು ಉದ್ಧಟತನ ಅಧಿಕಾರಿಯನ್ನು ಇಟ್ಕೊಂಡು ಆಟ ಆಡಬೇಡಿ. ಕೊವಿಡ್ ನಿರ್ವಹಣೆ ಮಾಡೋದಾದರೆ ಒಬ್ಬ ಪ್ರಾಮಾಣಿಕರನ್ನು ನೇಮಿಸಿ. ಈಗಾಗಲೇ ಮೈಸೂರಿಗೆ ಅದ್ವಾನ ಆಗುತ್ತಿದೆ. ಚಾಮರಾಜನಗರದ ಪರಿಸ್ಥಿತಿ ಮೈಸೂರಿಗೂ ಆಗುವ ಸಾಧ್ಯತೆ ಇದೆ ಎಂದು ಸಾ.ರಾ.ಮಹೇಶ್ ಆಕ್ರೋಶ ಹೊರಹಾಕಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ಡ್ರಗ್ ಕಂಟ್ರೋಲರ್ ಮೂಲಕ ಅಕ್ಸಿಜನ್ ತಡೆಹಿಡಿದ್ದಾರೆ. ಕಳೆದ ಒಂದು ವಾರದ ಹಿಂದೆ ಸಭೆ ಮಾಡಿ ಪೂರೈಕೆ ಮಾಡದಂತೆ ಹೇಳಿದ್ದಾರೆ. ಕೇವಲ 150 ಸಿಲಿಂಡರ್ ಮಾತ್ರ ಚಾಮರಾಜನಗರಕ್ಕೆ ಕೊಟ್ಟಿದ್ದಾರೆ. ಮಂಡ್ಯಕ್ಕೆ100 , ಚಾಮರಾಜನಗರ150 ಸಿಲಿಂಡರ್ ಮಾತ್ರ ಕೊಡಿ ಅಂತ ಸೂಚನೆ ಕೊಡಲಾಗಿದೆ. 1500 ಸಾವಿರ ಸಿಲಿಂಡರ್ ಕೊಡಬೇಕಾಗಿತ್ತು. ಡ್ರಗ್ ಕಂಟ್ರೋಲರ್ ಮೂಲಕ ಸೂಚನೆ ನೀಡಲಾಗಿದೆ. ಡ್ರಗ್ ಕಂಟ್ರೋಲರ್ ವಜಾ ಮಾಡಿ ಅವರ ವಿರುದ್ಧ ಪ್ರಕರಣ ದಾಖಲಿಸಿ. ಎಲ್ಲಾ ಸತ್ಯ ಸತ್ಯತೆ ಹೊರ ಬರಲಿದೆ ಎಂದು ತಿಳಿಸಿದರು.

ಇದನ್ನೂ ಓದಿ

Oxygen Shortage | ಕರ್ನಾಟಕದಲ್ಲಿ ಅಮೂಲ್ಯ ಆಕ್ಸಿಜನ್​ಗಾಗಿ ಹಾಹಾಕಾರ.. ಜೀವವಾಯು ಇಲ್ಲದೆ ಉಸಿರು ಚೆಲ್ಲುತ್ತಿರುವ ಸೋಂಕಿತರು

ಆಕ್ಸಿಜನ್​ ಸಿಗದೆ ಬೆಳಗಾವಿಯಲ್ಲಿ ಮೂವರು ಸಾವು; ಆ್ಯಂಬುಲೆನ್ಸ್​ನಲ್ಲಿ ಒದ್ದಾಡಿ ಪ್ರಾಣಬಿಟ್ಟರೂ ಕೇಳುವವರಿಲ್ಲ

(Sa Ra Mahesh alleges that clarification of Mysore district administration is false)